Breaking NewsNEWSನಮ್ಮರಾಜ್ಯ

ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್‌ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 05.08.2025 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಜಂಟಿ ಕ್ರಿಯಾ ಸಮಿತಿ ಮುಷ್ಕರದ ನೋಟಿಸನ್ನು ನೀಡಿದೆ.

ಈ ಸಂಬಂಧ KSRTC ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಅವರು ಸರ್ಕಾರದ ಕಾರ್ಯದರ್ಶಿಗಳ ಗಮನಕ್ಕೆ ಇಂದು ಲಿಖಿತವಾಗಿ ತರುವ ಮೂಲಕ ಈ ಕುರಿತು ಮುಂದಿನ ಮಾರ್ಗದರ್ಶನ ಹಾಗೂ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯವರು 05.08.2025 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಆಡಳಿತ ವರ್ಗಕ್ಕೆ ಕ್ರಮವಾಗಿ 15.07.2025 ಮತ್ತು 16.07.2025 ರಂದು ಮುಷ್ಕರದ ನೋಟಿಸ್ ನೀಡಿದ್ದಾರೆ.

ಈ ವಿಚಾರವನ್ನು ತಮ್ಮ ಆದ್ಯಗಮನಕ್ಕಾಗಿ ತರುತ್ತಾ ಈ ಕುರಿತು ಮುಂದಿನ ಮಾರ್ಗದರ್ಶನ ಹಾಗೂ ಸೂಕ್ತ ನಿರ್ದೇಶನ ನೀಡಬೇಕು ಎಂದು ಸರ್ಕಾರದ ಕಾರ್ಯದರ್ಶಿಗಳನ್ನು ಕೋರಿದ್ದಾರೆ ನಿಗಮದ ಎಂಡಿ.

ಇನ್ನು ಸರ್ಕಾರದ ಕಾರ್ಯದರ್ಶಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಲಿಖಿತವಾಗಿ ಕೊಟ್ಟಿರುವ ಪ್ರತಿಯನ್ನು BMTC, NWKRTC ಹಾಗೂ KKRTC ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೂ ಮಾಹಿತಿಗಾಗಿ ಕಳುಹಿಸಿದ್ದಾರೆ.

Megha
the authorMegha

Leave a Reply

error: Content is protected !!