NEWSನಮ್ಮಜಿಲ್ಲೆನಮ್ಮರಾಜ್ಯ

ಸರ್ಕಾರ ಕೊಟ್ಟ ಭರವಸೆಯಂತೆ KSRTC ನೌಕರರ ಬೇಡಿಕೆ ಈಡೇರಿಸಿಕೊಳ್ಳಲು ನಿಮ್ಮ ಜತೆ ನಾವು ಕೈ ಜೋಡಿಸಲು ಸಿದ್ಧ: ಅನಂತ ಸುಬ್ಬರಾವ್‌ಗೆ ಮನವಿ ಪತ್ರ ಕೊಟ್ಟ ಕೂಟ

ವಿಜಯಪಥ ಸಮಗ್ರ ಸುದ್ದಿ
  • ನೀವು ನಮ್ಮ ಜತೆ ಕೈ ಜೋಡಿಸಿ ಒಟ್ಟಿಗೆ ಸೇರಿ ನೌಕರರಿಗೆ ಒಳ್ಳೆಯದು ಮಾಡೋಣ

ಬೆಂಗಳೂರು: ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾರಿಗೆ ಮುಷ್ಕರದ ಬದಲಿಗೆ ಸಾರಿಗೆ ನೌಕರರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಶಾಂತಿಯುತ ಗಾಂಧಿ ಮಾರ್ಗದಲ್ಲಿ ಹೋರಾಟಗಳನ್ನು ಮಾಡಲು ತಮ್ಮ ಸಹಕಾರ ಮತ್ತು ಬೆಂಬಲ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕೆಎಸ್ಆರ್ಟಿಸಿ ಸ್ಟಾಫ್ ಆಂಡ್ ವರ್ಕಕರ್ಸ್‌ ಫೆಡರೇಷನ್ ಅಧ್ಯಕ್ಷ ಎಚ್‌.ವಿ.ಅನಂತಸುಬ್ಬರಾವ್‌ ಅವರಿಗೆ ಇದೇ ಜುಲೈ 14ರಂದು ಮನವಿ ಮಾಡಿತ್ತು.

ಇದರ ಜತೆಗೆ ಒಂದು ವಿನಂತಿಯನ್ನು ಕೂಡ ಮಾಡಿದ್ದು, ಅದರಲ್ಲಿ ಸ್ಪಷ್ಟವಾಗಿ ಈ ಪತ್ರವನ್ನು ಬಹಿರಂಗ ಪಡಿಸಿದರೆ ನೌಕರರ ಮನೋಸ್ಥೆರ್ಯ ಕುಗ್ಗಬಹುದು, ಆದ್ದರಿಂದ ಈ ಪತ್ರವನ್ನು ಬಹಿರಂಗ ಪಡಿಸಬಾರದೆಂದು ವಿನಂತಿ. ಜತೆಗೆ ಈ ಮೇಲಿನ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಒಕ್ಕೂಟವು ಸಿದ್ಧವಿದೆ ತಿಳಿಸಿದೆ.

ಆದರೆ, ಈ ವಿನಂತಿ ಮಾಡಿರುವುದನ್ನು ಮರೆಮಾಚಿ ನೌಕರರ ದಾರಿತಪ್ಪಿಸುವಂತಹ ರೀತಿಯಲ್ಲಿ ಮನವಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ನೌಕರರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡುವ ಬದಲಿಗೆ ದಿಕ್ಕು ತಪ್ಪಿಸುವ ರೀತಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕಿದೆ.

ನೌಕರರ ಕೂಡದ ಮನವಿ ಏನು?: ಈ ಮೇಲಿನ ವಿಷಯಕ್ಕೆ ಸಂಬಂಪಟ್ಟಂತೆ 04/07/2025 ರಂದು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ ಸಭೆ ಮುಗಿದ ಮೇಲೆ ತಾವುಗಳು ಸಭೆಯಿಂದ ಹೊರ ಬಂದು ಸಭೆ ಆಪೂರ್ಣವಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತದನಂತರ ದಿನ ಕಳೆದಂತೆ ಸಭೆಯಲ್ಲಿ ನಿಜವಾಗಿಯೂ ನಡೆದ ಘಟನೆಗಳನ್ನು ತಮ್ಮ ಜಂಟಿ ಕ್ರಿಯಾ ಸಮಿತಿಯ ನಾಯಕರು ಒಂದೊಂದು ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ತಾವುಗಳು ಯೂಟುಬ್‌ ಚಾನಲ್‌ವೊಂದರಲ್ಲಿ ಕೂಡ ಸಭೆಯಲ್ಲಿ ನಡೆದ ಘಟನೆಗಳನ್ನು ನೌಕರರಿಗೆ ತಿಳಿಸುತ್ತ ಮುಖ್ಯಮಂತ್ರಿಗಳ ನಡೆಯಿಂದ ಬೇಸತ್ತ ತಾವು ಅವರ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಮುಂದಿನ ದಿನಗಳಲ್ಲಿ ಸಾರಿಗೆ ಮುಷ್ಕರವನ್ನು ಮಾಡುವ ಬೆದರಿಕೆಯನ್ನು ಸಹ ಹಾಕಿರುತ್ತೀರಿ.

ಹೀಗಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ತಾವು ಯೂಟ್ಯೂಬ್‌ ಚಾನಲ್‌ನಲ್ಲಿ ತಿಳಿಸಿರುವುವಂತೆ ಎಲ್ಲ ನೌಕರರು ಸಾರಿಗೆ ಮುಷ್ಕರಕ್ಕೆ ತಯಾರಾಗಿದ್ದು ತಾವು ನಾಯಕತ್ವ ಕೋಡುವುದು ಒಂದೇ ಬಾಕಿ ಇರುವುದೆಂದು ತಿಳಿಸಿರುತ್ತೀರಿ. ಆದರೆ ಸುಮಾರು 40 ವರ್ಷಗಳ ಸುದೀರ್ಘ ಅನುಭವವಿರುವ ತಮಗೆ ಈ ಸಮಯ ಸಾರಿಗೆ ಮುಷ್ಕರ ಮಾಡುವ ಅನುಕೂಲಕರ ವಾತಾವರಣ ಸಂಸ್ಥೆಯಲ್ಲಿ ಇಲ್ಲವೆಂದು ನಾವು ತಮಗೆ ಹೇಳುವ ಅವಶ್ಯಕತೆ ಇಲ್ಲವೆಂದು ಭಾವಿಸುತ್ತೇವೆ.

Advertisement

ಕಾರಣ 1) ಬಿಎಂಟಿಸಿ ಸಂಸ್ಥೆಯಲ್ಲಿ ಸಾರಿಗೆ ಮುಷ್ಕರದ ಸಮಯದಲ್ಲಿ ವಜಾಗೊಂಡು ಜಂಟಿ ಮೆಮೋ ಹಾಗೂ ನ್ಯಾಯಾಲಯದ ಮಧ್ಯಂತರ ಆದೇಶದ ಮೇಲೆ ಕರ್ತವ್ಯಕ್ಕೆ ಹಾಜಾರಾಗಿರುವ 2500 ಕ್ಕೂ ಹೆಚ್ಚು ನೌಕರರಾರು ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. 2) ಬಿ.ಎಂ.ಟಿ.ಸಿ ಸಂಸ್ಥೆಯಲ್ಲಿ 1800 ಕ್ಕೂ ಅಧಿಕ ವಿದ್ಯುತ್ ಚಾಲಿತ ವಾಹನಗಳಿದ್ದು ನಾವು ಮುಷ್ಕರ ಮಾಡಿದರೆ ಅವರು ಕಾರ್ಯಚರಣೆ ಮಾಡುತ್ತಾರೆ. 3) ನಾಲ್ಕು ಸಾರಿಗೆ ನಿಮಗಳಲ್ಲಿ 8000ಕ್ಕೂ ಅಧಿಕ ಹೊಸ ನೇಮಕಾತಿಗೊಂಡಿರುವ ಚಾಲಕ, ಚಾಲಕ ಕಂ ನಿರ್ವಾಹಕ ಹಾಗೂ ನಿರ್ವಾಹಕರಿದ್ದು ಅವರು ಮುಷ್ಕರದಲ್ಲಿ ಭಾಗವಹಿಸುವುದು ಅನುಮಾನ.

4) ಬಿ.ಎಂ.ಟಿ.ಸಿ ಹೊರತು ಪಡಿಸಿ ಬಾಕಿ ಮೂರು ನಿಗಮಗಳಲ್ಲಿ ಹೊರಗುತ್ತಿಗೆಯ ಚಾಲಕ ಮತ್ತು ತಾಂತ್ರಿಕ ಸಿಬ್ಬಂದಿಗಳು ಇದ್ದರೆ ಅವರು ಭಾಗವಹಿಸುವುದು ಅನುಮಾನ. 5) ಕೆ.ಎಸ್.ಆರ್.ಟಿ.ಸಿ ನಿಗಮದಲ್ಲಿ ಸುಮಾರು 100 ವಿದ್ಯುತ್ ಚಾಲಿತ ಬಸ್ಸುಗಳಿದ್ದು ಅವರು ಮುಷ್ಕರದಲ್ಲಿ ಭಾಗವಹಿಸುವುದು ಅನುಮಾನ. 6) 2021 ರ ಮುಷ್ಕರದ ಸಮಯದಲ್ಲಿದ್ದ ಆಡಳಿತ ಮಂಡಳಿಯ ಹಾಗೂ ಸರ್ಕಾರದ ಆಧಿಕಾರಿಗಳು ಇನ್ನು ಸಾರಿಗೆಗೆ ಸಂಬಂಧಪಟ್ಟ ಅಯಕಟ್ಟಿನ ಸ್ಥಳಗಳಲ್ಲಿ ಅಧಿಕಾರಿದಲ್ಲಿ ಮುಂದುವರಿಯುತ್ತಿರುವುದರಿಂದ ಯಾವ ರೀತಿಯಲ್ಲಿ ಮುಷ್ಕರವನ್ನು ನಿಯಂತ್ರಿಸಬಹುದೆಂದು ಅವರಿಗೆ ಚೆನ್ನಾಗಿ ಅನುಭವವಿದೆ. ಇನ್ನೂ ಹಲವು ಕಾರಣಗಳಿಂದ ಈ ಸಮಯದಲ್ಲಿ ಸಾರಿಗೆ ಮುಷ್ಕರ ಮಾಡುವುದು ಎಂದರೆ ನಮ್ಮ ಸಾರಿಗೆ ನೌಕರರನ್ನು ನಾವೇ ಹಾಳು ಮಾಡಿದಂತಾಗುತ್ತದೆ.

ಈಗಾಗಲೇ ಸರ್ಕಾರ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಲು ಮೀನಮೇಷ ಎಣಿಸುತ್ತಿದ್ದು. ಮುಂದಿನ ದಿನಗಳಲ್ಲಿ ಬಿ.ಎಂ.ಟಿ.ಸಿ ಸಂಸ್ಥೆಗೆ ಈಗ ಇರುವ ವಿದ್ಯುತ್ ಚಾಲಿತ ಬಸ್ಸುಗಳ ಜತೆಗೆ ಕೆಲವೇ ವರ್ಷಗಳಲ್ಲಿ 4500, ಮೈಸೂರಿನ ನಗರ ಸಾರಿಗೆಗೂ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗೂ ಸಹ ವಿದ್ಯುತ್ ಚಾಲಿತ ಬಸ್ಸುಗಳು ಸೇರ್ಪಡೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ಸಾರಿಗೆ ನೌಕರರೆ ಇರುವುದಿಲ್ಲ!!!. ಮುಂದಿನ ದಿನಗಳಲ್ಲಿ ಸರ್ಕಾರಗಳು ಸಾರಿಗೆ ನೌಕರರ ಬೇಡಿಕೆಯಂತೆ ವೇತನ ಹೆಚ್ಚಳ ಮತ್ತು ಸವಲತ್ತುಗಳನ್ನು ನೀಡುವುದು ಕನಸ್ಸಿನ ಮಾತು.

ಹೀಗಾಘಗಿ “ಕೊಡುವುದೇ ಇಷ್ಟೆ ಕೆಲಸ ಮಾಡಿದರೆ ಮಾಡಿ ಇಲ್ಲವೆಂದರೆ ಹೋಗಿ ಎನ್ನುವ ಕಾಲ ಬಹಳ ದೂರವಿಲ್ಲ. ಈ ಸಂದರ್ಭದಲ್ಲಿ ನಮ್ಮ ನಮ್ಮ ಸಂಘಟನೆಗಳ ಪ್ರತಿಷ್ಠೆಯನ್ನು ಸಮಸ್ತ ಸಾರಿಗೆ ನೌಕರರಿಗಾಗಿ ಬದಿಗಿರಿಸಿ, ಈ ಕೆಳಕಂಡ ಬೇಡಿಕೆಗಳಿಗಾಗಿ ಒಕ್ಕೂಟವು ಹಮ್ಮಿಕೊಳ್ಳಲು ನಿರ್ಧಾರಿಸಿರುವ ಅನಿರ್ದಿಷ್ಟಾವಾಧಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ಬಹೃತ್ ಸಂಸಂಖ್ಯೆಯಲ್ಲಿ ಸಾರಿಗೆ ನೌಕರರು ಸೇರಿ ಸರ್ಕಾರದ ಹಾಗೂ ಸಾರ್ವಜನಿಕರ ಗಮನ ಸೆಳೆಯುವ ಮೂಲಕ ನಮ್ಮ ಬೇಡಿಕೆಗಳನ್ನು ಶಾಂತಿಯುತ ಗಾಂಧಿ ಮಾರ್ಗದಲ್ಲಿ ಈಡೇರಿಸಿಕೊಳ್ಳಲು ಮುಂದಾಗೋಣ.

ಇನ್ನು ಈ ಹೋರಾಟಗಳನ್ನು ಮಾಡುವುದರಿಂದ ಸಾರಿಗೆ ನೌಕರರಿಗೆ ಯಾವುದೇ ಸಮಸ್ಯೆಯು ಆಗುವುದಿಲ್ಲ. ಈ ಶಾಂತಿಯುತ ಹೋರಾಟಕ್ಕೆ ತಮ್ಮ ಸಹಕಾರ ಮತ್ತು ಬೆಂಬಲ ಬೇಕಿದ್ದು ತಾವು ನೌಕರರ ಹಿತದೃಷ್ಟಿಯಿಂದ ಸಹಕರಿಸಬೇಕು ಎಂದು ಕೋರುತ್ತೇವೆ.

ಇನ್ನು ಬೇಡಿಕೆಗಳು: 1) ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗದ ಮಾದರಿಯಲ್ಲಿ) 01/01/2024 ರಿಂದ ಜಾರಿ ಮಾಡುವುದು.

2) 01/01/2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಸದರಿ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ನೀಡುವುದು. (ನಿವೃತ್ತ ನೌಕರರಿಗೆ ಮೊದಲ ಅದ್ಯತೆಯಲ್ಲಿ ಅವರ ಹಿಂಬಾಕಿ ಮತ್ತು ಇತರೆ ಸೇವಾ ಆರ್ಥಿಕ ಸೌಲಭ್ಯಗಳನ್ನು ನೀಡುವುದು).

3) 1992 ನಂತರ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಯದೆ ಇರುವುದರಿಂದ, ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಲು ಆದೇಶ ಮಾಡುವುದು. 4) 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ವಜಾ ಮತ್ತು ಇತರೆ ಪ್ರಕರಣಗಳ ಶಿಕ್ಷಾದೇಶಗಳನ್ನು ರದ್ದು ಪಡಿಸಿ ಸೌಹರ್ಧ ರೀತಿಯಲ್ಲಿ ಇತ್ಯರ್ಥ
ಪಡಿಸುವುದು ಹಾಗೂ ಪೊಲೀಸ್‌ ಪ್ರಕರಣಗಳನ್ನು ಹಿಂಪಡೆಯುವ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಈ ಬೇಡಿಕೆ ಬರಿ ಚಾಲನಾ ಸಿಬ್ಬಂದಿಗಳದಲ್ಲ. ಸಾರಿಗೆ ಅಧಿಕಾರಿಗಳದ್ದು ಕೂಡ ಇದೇ ಆಗಿದೆ. ಹೀಗಾಗಿ ನೌಕರರು ಬಯಸುತ್ತಿರುವ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಸರ್ಕಾರದ ಮುಂದೆ ಹೋಗೋಣ ಅದನ್ನು ಬಿಟ್ಟು ಈ 4 ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ವೇತನ ಒಪ್ಪಂದವನ್ನು ಈ 2024 ಜನವರಿ 1ರಿಂದಲೇ ಕೊನೆಗಾಣಿಸಿ ಸಮಸ್ತ ಸಾರಿಗೆ ನೌಕರರ ಮನದಾಳವನ್ನು ಅರ್ಥ ಮಾಡಿಕೊಂಡು ಮುಂದೆ ಸಾಗೋಣ ಇದಕ್ಕೆ ತಮ್ಮ ಜಂಟಿ ಕ್ರಿಯಾ ಸಮಿತಿಯ ಎಲ್ಲ ಸಂಘಟನೆಗಳು ಸಹಕಾರ ನೀಡುತ್ತೀರಿ ಎಂದು ಭಾವಿಸಿದ್ದೇವೆ ಎಂದು ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ಆದರೆ ಇದಕ್ಕೆ ಉತ್ತರ ನೀಡದೆ ಸಾಮಾಜಿಕ ಜಾಲತಾಣದಲ್ಲಿ ನೌಕರರಿಗೆ ಗೊಂದಲ ಮೂಡಿಸುವ ರೀತಿಯಲ್ಲಿ ಹರಿಯಬಿಟ್ಟು ಅವರನ್ನು ಗಾಸಿಗೊಳಪಡಿಸಿರುವುದು ತುಂಬ ನೋವಾಗಿದೆ. ಈಗಲೂ ಕಾಲ ಮಿಂಚಿಲ್ಲ ತಾವು ಈ ಸರ್ಕಾರವೇ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿ ನಾವು ನಿಮ್ಮ ಜತೆಗೆ ಕೈ ಜೋಡಿಸುತ್ತೇವೆ ಎಂದು ಒಕ್ಕೂಟ ಮನವಿ ಮಾಡಿದೆ.

ವಿಜಯಪಥ - vijayapatha
Megha
the authorMegha

Leave a Reply

error: Content is protected !!