NEWSಬೆಂಗಳೂರು

BOBಯಲ್ಲಿ ವೇತನ ಖಾತೆ ಹೊಂದಿರುವ BMTC ನೌಕರರಿಗೆ 1.25 ಕೋಟಿ ರೂ. ವಿಮೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬ್ಯಾಂಕ್ ಆಫ್ ಬರೋಡದೊಂದಿಗೆ ವೇತನ ಖಾತೆ ಹೊಂದಿರುವ ನೌಕರರಿಗೆ 1.25 ಕೋಟಿ ರೂ. ಅಪಘಾತ ವಿಮೆ ನೀಡಲಾಗುವುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಮಿಕ ಮತ್ತು ಕಲ್ಯಾಣ ಇಲಾಖೆ ತಿಳಿಸಿದೆ.

ಈ ಸಂಬಂಧ ಇಂದು ಸುತ್ತೋಲೆ ಹೊರಡಿಸಿದ್ದು, ಇದೇ ತಿಂಗಳ 23ರಂದು State Government Salary Package (SGSP) ಯೋಜನೆಯಡಿ ಸಂಸ್ಥೆ ಹಾಗೂ ಬ್ಯಾಂಕ್‌ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಜು.23ರ 2025ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಆಫ್ ಬರೋಡ (Bank of Baroda) ದೊಂದಿಗೆ ಐದು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ, ಈ ಬ್ಯಾಂಕಿನಲ್ಲಿ ವೇತನ ಖಾತೆ ಹೊಂದಿರುವ ಅಧಿಕಾರಿ/ ನೌಕರರಿಗೆ SGSP ಯೋಜನೆಯಡಿ ಈ ಸಮಗ್ರ ಸೌಲಭ್ಯಗಳನ್ನು Insurance Regulatory and Development Authority of India (IRDAI) ಅವರ ನಿಯಮಗಳು ಮತ್ತು ಷರತ್ತುಗಳನ್ವಯ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

1. ವೈಯಕ್ತಿಕ ಅಪಘಾತ ವಿಮೆ: ಬ್ಯಾಂಕ್ ಆಫ್ ಬರೋಡದಲ್ಲಿ ವೇತನಖಾತೆ ಹೊಂದಿರುವ ಅಧಿಕಾರಿ/ನೌಕರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ನಾಮನಿರ್ದೇಶಿತರಿಗೆ 1 ಕೋಟಿ ರೂ. ವಿಮಾ ಪರಿಹಾರ. ಒಂದು ವೇಳೆ ಕರ್ತವ್ಯ ನಿರತ ವೇಳೆ ಅಪಘಾತದಿಂದ ಮೃತಪಟ್ಟಲ್ಲಿ 1.25 ರೂ. ಕೋಟಿ ವಿಮಾ ಪರಿಹಾರ ನೀಡಲಾಗುವುದು.

3. ವಾಯು ಅಪಘಾತದಲ್ಲಿ ಮೃತಪಟ್ಟಲ್ಲಿ 1 ರೂ. ಕೋಟಿ ವಿಮಾ ಪರಿಹಾರ. ಉಚಿತ ಜೀವ ವಿಮೆ ಪರಿಹಾರ ಮೊತ್ತ 10 ಲಕ್ಷ ರೂ. ಅಪಘಾತದಿಂದ ಶಾಶ್ವತ ಪೂರ್ಣ ಅಂಗವಿಕಲತೆ ಉಂಟಾದಲ್ಲಿ 1 ಕೋಟಿ ರೂ ವಿಮಾ ಪರಿಹಾರ. ಒಂದು ವೇಳೆ ಅಪಘಾತದಿಂದ ಶಾಶ್ವತ ಭಾಗಶಃ ಅಂಗವಿಕಲತೆ ಉಂಟಾದಲ್ಲಿ 75 ಲಕ್ಷ ರೂ ವಿಮಾ ಪರಿಹಾರ. ಅಲ್ಲದೆ ಆಸ್ಪತ್ರೆ ನಗದು ಸೌಲಭ್ಯ 30 ಸಾವಿರ ರೂ ಕೊಡಲಾಗುವುದು.

ಇದಲ್ಲದೆ ಹೆಚ್ಚುವರಿ ಸೌಲಭ್ಯಗಳು: 1. ಹೆಣ್ಣು ಮಕ್ಕಳ ಮದುವೆಗಾಗಿ : 18 ರಿಂದ 25 ವರ್ಷಗಳ ವಯೋಮಿತಿಯೊಳಗಿನ ಹೆಣ್ಣು ಮಕ್ಕಳ ಮದುವೆಗೆ ಮೂಲ ವೈಯಕ್ತಿಕ ಅಪಘಾತ ವಿಮಾ ಮೊತ್ತದ ಶೇಕಡ 10 ರಷ್ಟು (ರೂ 10 ಲಕ್ಷಗಳು). 2. ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ : ಮೂಲ ವೈಯಕ್ತಿಕ ಅಪಘಾತ ವಿಮಾ ಮೊತ್ತದ ಶೇಕಡ 10
ರಷ್ಟು (ರೂ 10 ಲಕ್ಷಗಳು) (10+2 ನಂತರ ತರಗತಿ).

Advertisement

ಯೋಜನೆಯಡಿ ವಿಧಿಸಿರುವ ಷರತ್ತುಗಳು: 1. ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರು ಬ್ಯಾಂಕ್ ಆಫ್ ಬರೋಡದಲ್ಲಿ SGSP ಯೋಜನೆಯಡಿ ವೇತನ ಖಾತೆ ಹೊಂದಿರುವವರು ಒಟ್ಟು ವೇತನದ ಆಧಾರದ ಮೇರೆಗೆ ಈ ಸೌಲಭ್ಯಗಳನ್ನು ಪಡೆಯಲು ಅರ್ಹರಿರುತ್ತಾರೆ.

2. ಈ ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಆಫ್ ಬರೋಡದಲ್ಲಿ ವೇತನ ಖಾತೆ ತೆರೆದು. ಒಂದು ಮಾಹೆಯ ವೇತನ ಆ ಖಾತೆಗೆ ಕಡ್ಡಾಯವಾಗಿ ಜಮೆ ಆಗಿರತಕ್ಕದ್ದು. 3. ಅಪಘಾತದಿಂದ ಅಧಿಕಾರಿ/ನೌಕರರು ಮೃತಪಟ್ಟಲ್ಲಿ ಬ್ಯಾಂಕ್‌ಗೆ 90 ದಿನಗಳ ಒಳಗೆ ಅಪಘಾತದ ಮಾಹಿತಿಯನ್ನು ನೀಡುವುದು ಮತ್ತು ಕೇಮ್ಸ್ ದಾಖಲಾತಿಗಳನ್ನು 180 ದಿನಗಳ ಒಳಗೆ ಸಲ್ಲಿಸುವುದು.

4. ಪ್ರತಿ ತಿಂಗಳ 15 ನೇ ತಾರೀಖಿನಂದು ಹೊಸದಾಗಿ ಬ್ಯಾಂಕ್ ಆಫ್ ಬರೋಡದಲ್ಲಿ ವೇತನ ಖಾತೆ ತೆರೆಯುವ ಅಧಿಕಾರಿ/ನೌಕರರ ಮಾಹಿತಿಯನ್ನು (ಹೆಸರು, ಹುಟ್ಟಿದ ದಿನಾಂಕ, ಬ್ಯಾಂಕ್ ಆಫ್ ಬರೋಡ ಶಾಖೆ ಮತ್ತು ಒಟ್ಟು ವೇತನ ಬ್ಯಾಂಕ್ ಆಫ್ ಬರೋಡದ ಇಮೇಲ್ ವಿಳಾಸಗಳಾದ rbdm.blrcentral@ bankofbaroda.com ಮತ್ತು
planning.blrcentral@ bankofbaroda.com ಇವುಗಳಿಗೆ ಇ-ಮೇಲ್ ಮುಖಾಂತರ ಗಣಕ ಇಲಾಖೆ, ಬೆಂಮಸಾಸಂಸ್ಥೆ ರವರಿಂದ ಕಡ್ಡಾಯವಾಗಿ ಕಳುಹಿಸುವುದು.

5. ಶಿಸ್ತು ಪ್ರಾಧಿಕಾರ ಹೊಂದಿರುವ ಇಲಾಖಾ ಮುಖ್ಯಸ್ಥರು/ವಿಭಾಗೀಯ ನಿಯಂತ್ರಣಾಧಿಕಾರಿಗಳು ನೌಕರರ ವಜಾ ರಾಜೀನಾಮೆ ಹಾಗೂ ಅಮಾನತು ಇತ್ಯಾದಿ ಕಾರಣಗಳಿಂದ ವೇತನ ಖಾತೆಗೆ ಸಂಬಳ ಜಮಾ ಆಗುವುದು ನಿಂತ ಪಕ್ಷದಲ್ಲಿ ಬ್ಯಾಂಕ್ ಆಫ್ ಬರೋಡದ ಇ-ಮೇಲ್ ವಿಳಾಸಗಳಾದ rbdm.blrcentral@ bankofbaroda.com ಮತ್ತು planning.blrcentral@bankofbaroda.com ಇವುಗಳಿಗೆ ಇ-ಮೇಲ್ ಮುಖಾಂತರ ಮಾಹಿತಿಯನ್ನು ಕಡ್ಡಾಯವಾಗಿ ಕಳುಹಿಸಲು ಕ್ರಮಕೈಗೊಳ್ಳುವುದು ಹಾಗೂ ಮಾಹಿತಿ ನೀಡಿರುವ ಬಗ್ಗೆ ದಾಖಲೆಗಳನ್ನು ನಿರ್ವಹಿಸುವುದು.

6. ಬ್ಯಾಂಕ್ ಆಫ್ ಬರೋಡದಲ್ಲಿ ವೇತನಖಾತೆ ಹೊಂದಿರುವ ಅಧಿಕಾರಿ/ನೌಕರರು ಬೇರೆ ಸಂಸ್ಥೆ/ಘಟಕಗಳಿಗೆ ವರ್ಗಾವಣೆಗೊಂಡಲ್ಲಿ ಅದರ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡುವುದು ಅವರ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ. ಸ್ವಯಂವೇದ್ಯವಾಗಿರುವ ಅನುಬಂಧದ (Annexure : 1-A, I-B, 11, 111-A. IV-1 & IV-2) ಪ್ರತಿಗಳನ್ನು ಅಡಕಗೊಳಿಸಿದೆ.

ಅದರಂತೆ ಬ್ಯಾಂಕ್ ಆಫ್ ಬರೋಡದಲ್ಲಿ ವೇತನಖಾತೆ ಹೊಂದಿರುವ ಅಧಿಕಾರಿ/ನೌಕರರು ಅಪಘಾತದಿಂದ ಮೃತಪಟ್ಟಲ್ಲಿ ಅಥವಾ ಶಾಶ್ವತ/ಭಾಗಶಃ ಅಂಗವೈಕಲ್ಯಕ್ಕೆ ಒಳಗಾದಲ್ಲಿ ನಾಮನಿರ್ದೇಶಿತರು ಅರ್ಹ ವಿಮಾ ಮೊತ್ತ ಪಡೆಯಲು ಸಲ್ಲಿಸುವ ಕ್ಲೈಮ್ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡುವುದರ ಮೂಲಕ ಕ್ಲೈಮ್ ದಾಖಲಾತಿಗಳನ್ನು ಮೃತ ಅಧಿಕಾರಿ/ ನೌಕರರ ಕುಟುಂಬದ ಅವಲಂಬಿತರಿಂದ ಪಡೆದುಕೊಂಡು ಇಲಾಖಾ/ಕಾರ್ಯಸ್ಥಾನ ಮುಖ್ಯಸ್ಥರ ಇ-ಮೇಲ್ ಮುಖಾಂತರ ಸಂಬಂಧಪಟ್ಟ ವಿಮಾ ಕಂಪನಿಗೆ ಕಳುಹಿಸುವುದು ಹಾಗೂ ಕ್ಲೈಮ್ಗಳ ಎಲ್ಲ ಮೂಲ ದಾಖಲಾತಿಗಳನ್ನು ಕೇಂದ್ರ ಕಛೇರಿಯ ಕಾರ್ಮಿಕ ಇಲಾಖೆಗೆ ಕಡ್ಡಾಯವಾಗಿ ಕಳುಹಿಸಲು ಸೂಚಿಸಲಾಗಿದೆ.

ವಿಜಯಪಥ - vijayapatha
Megha
the authorMegha

Leave a Reply

error: Content is protected !!