ಬೆಂಗಳೂರು: ಪಕ್ಷಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ರಚಿಸಲಾಗಿರುವ ನಿಯಮಾವಳಿಗಳಲ್ಲಿನ ಅವಕಾಶಗಳು ಚರ್ಚೆಯ ವಿಷಯವಾಗಿರುವುದರಿಂದ ಆ ಅನುಸೂಚಿ ಹಾಗೂ ನಿಮಮಾವಳಿಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ.
ಲೋಕಸಭಾಧ್ಯಕ್ಷ ಹಾಗೂ ಅಖಿಲ ಭರತ ಪೀಠಾಸೀನಾಧಿಕಾರಿ ಸಮ್ಮೇಳನಾಧ್ಯಕ್ಷ ಓಂ. ಬಿರ್ಲಾ , ರಾಜಸ್ಥಾನ ವಿಧಾನ ಸಭಾಧ್ಯಕ್ಷ ಡಾ. ಸಿ.ಪಿ.ಜೋಷಿ ಅಧ್ಯಕ್ಷತೆಯಲ್ಲಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ಹಾಗೂ ಒಡಿಶಾ ವಿಧಾನಸಭೆಯ ಸಭಾಧ್ಯಕ್ಷ ಡಾ. ಸೂಜ್ರ್ಯ ನಾರಾಯಣ ಪಾತ್ರೊ ಅವರು ಸಮಿತಿಯಲ್ಲಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಈ ಸಮಿತಿಯು ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಳ್ಳಲಿರುವುದರಿಂದ ಈ ದಿಸೆಯಲ್ಲಿ ಕಾನೂನು ತಜ್ಞರಿಂದ, ಅಭಿಪ್ರಾಯ ಪಡೆಯುವುದು ಸೂಕ್ತವೆಂದು ಭಾವಿಸಲಾಗಿದೆ. ಈ ದಿಸೆಯಲ್ಲಿ ಅಭಿಪ್ರಾಯವನ್ನು ನೀಡಬೇಕೆಂದು ಇಚ್ಛಿಸುವವರು ತಮ್ಮ ಅಭಿಪ್ರಾಯವನ್ನು ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಕೊಠಡಿ ಸಂಖ್ಯೆ-121, ಮೊದಲನೆ ಮಹಡಿ, ವಿಧಾನಸೌಧ,ಬೆಂಗಳೂರು-560001.
ಫ್ಯಾಕ್ಸ್: 080-22258301, ಇ-ಮೇಲ್: [email protected] ವಿಳಾಸಕ್ಕೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ ಮಖಾಂತರವಾಗಲಿ ಜೂನ್ 10, 2020ರ ಸಂಜೆ 5.00 ಗಂಟೆ ಒಳಗಾಗಿ ನೀಡಬಹುದೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail