ಬೆಳಗಾವಿ: ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ಕರೆ ನೀಡಿರುವ ಮುಷ್ಕರದ ಬಿಸಿ ಬೆಳಗಾವಿಯಲ್ಲಿ ತಟ್ಟಿದ್ದು, ಅಧಿಕಾರಿಗಳು ಸಿಬ್ಬಂದಿಗಳಿಗೆ ಫೋನ್ ಮಾಡಿ ಡ್ಯೂಟಿಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ.
ಇನ್ನು ಇಂದು ಬೆಳಗ್ಗೆ 4 ಗಂಟೆಯಿಂದಲೇ ನಗರದಲ್ಲಿ ಬಸ್ ಸಂಚಾರ ಸ್ತಬ್ಧವಾಗಿವೆ. ಹೀಗಾಗಿ ಬಸ್ಗಳನ್ನು ಯಥಾಸ್ಥಿತಿಯಲ್ಲಿ ಓಡಾಡುತ್ತವೆ ಇಲ್ಲವೇ ಎಂದು ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಒಂದು ಕಡೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗಗಲೇ ಬೇಕು ಎಂದು ಕೆಲ ನೌಕರರು ಬಸ್ ಓಡಿಸುವುದಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಇಲ್ಲ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಆದರೆ ಬಂದ್ ನಿಲ್ಲುವುದಿಲ್ಲ ಎಂದು ಶಾಂತಿಯುತವಾಗಿ ಮುಷ್ಕರ ಮಾಡುತ್ತೇವೆ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.
ಒಟ್ಟಾರೆ ಈವರೆಗೂ ಸಾರ್ವಜನಿಕರಿಗೆ ಬೆಂಗಳೂರಿನಲ್ಲಿ ಯಾವುದೇ ಬಸ್ ಬಂದ್ಬಿಸಿ ತಟ್ಟಿಲ್ಲ. ಆದರೆ ಬೆಳಗಾವಿ ಇತರ ಭಾಗಗಳಲ್ಲಿ ಬಂದ್ ಆಗುತ್ತಿದೆ. ಇದು 6 ಗಂಟೆ ನಂತರ ಯಾವ ಸ್ಥಿತಿಗೆ ತಲುಪುತ್ತದೋ ನೋಡಬೇಕಿದೆ.
Related
