NEWSನಮ್ಮಜಿಲ್ಲೆನಮ್ಮರಾಜ್ಯ

ಇಂದು ಮುಂಜಾನೆ 5ಗಂಟೆವರೆಗೂ ಬಸ್‌ ಸಂಚಾರ ಯಥಾಸ್ಥಿತಿ- 6ಗಂಟೆ ಬಳಿಕ ಏನಾಗುತ್ತದೋ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ಕರೆ ನೀಡಿರುವ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 5ಗಂಟೆಯಿಂದಲೇ ಬಸ್‌ ಸೇವೆ ಆರಂಭವಾಗಿದೆ.

ಇನ್ನು ಇಂದು ಬೆಳಗ್ಗೆ 5 ಗಂಟೆಯಲ್ಲಿ ಬಸ್‌ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ನಗದಲ್ಲಿ ಬಸ್‌ಗಳು  ಯಥಾಸ್ಥಿತಿಯಲ್ಲಿ ಓಡಾಡುತ್ತಿವೆ. ಆದರೆ 6ಗಂಟೆ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದು ಕಡೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗಲೇ ಬೇಕು ಎಂದು ಕೆಲ ನೌಕರರು ಬಸ್‌ ಓಡಿಸುವುದಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಇಲ್ಲ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಆದರೆ ಬಂದ್‌ ನಿಲ್ಲುವುದಿಲ್ಲ ಎಂದು ಶಾಂತಿಯುತವಾಗಿ ಮುಷ್ಕರ ಮಾಡುತ್ತೇವೆ ಎಂದು ಅನಂತ ಸುಬ್ಬರಾವ್‌ ಹೇಳಿದ್ದಾರೆ.

ಒಟ್ಟಾರೆ ಈವರೆಗೂ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಯಾವುದೇ ಬಸ್‌ ಬಂದ್‌ಬಿಸಿ ತಟ್ಟಿಲ್ಲ. ಆದರೆ 6ಗಂಟೆ ಬಳಿಕ ಏನಾಗುತ್ತೆಓ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಹಾಸನದಲ್ಲಿ ನಿನ್ನೆಯಿಂದಲೇ ಬಸ್‌ ಸಂಚಾರ ವಿರಳವಾಗಿದ್ದು ಪ್ರಯಾಣಿಕರು ಬಸ್‌ಗಳಿಲ್ಲದೆ ಪರದಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
7ಕೋಟಿಗೂ ಹೆಚ್ಚು ಮಂದಿಗೆ ಸಿಹಿಸುದ್ದಿ: UPI-ATMನಲ್ಲಿ ಶೇ.75ರಷ್ಟು ಪಿಎಫ್‌ ಹಣ ವಿತ್‌ಡ್ರಾಗೆ ಅವಕಾಶ- ಜೂನ್ ಅಂತ್ಯದ... ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಪ್ರಕರಣದ ಪ್ರಮುಖ ಆರೋಪಿ: ಕಾಲಿಗೆ ಹಾಡುಹಗಲೇ ಗುಂಡು ಹಾರಿಸಿ ಬಂಧಿಸಿದ ಪೊಲೀಸರು KSRTC: ಸಾರಿಗೆ ನಿಗಮದ ನೌಕರರಿಗೆ ಗಳಿಕೆ ರಜೆ (EL) ನಗದೀಕರಣ ಸೌಲಭ್ಯ ವಿಸ್ತರಿಸಿ ಎಂಡಿ ಆದೇಶ KSRTC: ಶೇ.1.5ರಷ್ಟು ಹೆಚ್ಚಳದ ತುಟ್ಟಿಭತ್ಯೆ ಜೂನ್‌ ವೇತನದಲ್ಲಿ ಅನುಷ್ಠಾನಗೊಳಿಸಿ ನೌಕರರಿಗೆ ಪಾವತಿಸಲು ಎಂಡಿ ಆದೇಶ 'ಕರ್ತವ್ಯ' ಆಪ್ ನೋಂದಣಿ ಶೇ.70.6 ರಷ್ಟು ಪ್ರಗತಿ - ಮಾಧ್ಯಮಗಳ ವರದಿಗೆ ಸರ್ಕಾರದ ಸ್ಪಷ್ಟನೆ ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ