ಬೆಂಗಳೂರು: ನಭೋ ಮಂಡಲ 2020ರಲ್ಲಿ ಎರಡನೇ ಬಾರಿಗೆ ಸಂಭವಿಸುತ್ತಿರುವ ಛಾಯಾ (ನೆರಳು) ಚಂದ್ರಗ್ರಹಣದ ಅಪರೂಪದ ವಿದ್ಯಮಾನಕ್ಕೆ ಇಂದು ಸಾಕ್ಷಿಯಾಗುತ್ತಿದ್ದು, ಇಂದು ರಾತ್ರಿ (ಜೂನ್ 5 ಮತ್ತು 6) ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದೆ.
ಈ ವರ್ಷದ ಜನವರಿ 10ರಂದು ಮೊದಲ ಚಂದ್ರಗ್ರಹಣ 4ಗಂಟೆ ಐದು ನಿಮಿಷಗಳು ದೇಶದಲ್ಲಿ ಗೋಚರಿಸಿತ್ತು. ಇದೀಗ ಎರಡನೇ ಸ್ಟ್ರಾಬೆರಿ ಚಂದ್ರಗ್ರಹಣ ಜೂನ್ 5 ಮತ್ತು 6ರ ರಾತ್ರಿ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಬಾರಿಯ ಚಂದ್ರಗ್ರಹಣವನ್ನು Penumbral Eclipse ಎಂದು ಹೆಸರಿಸಲಾಗಿದ್ದು, ಇಂದು ಚಂದ್ರನ ಮೇಲ್ಮೈ ಶೇ.75ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರಿಸುತ್ತದೆ. ಈ ನಿಟ್ಟಿನಲ್ಲಿ ಗ್ರಹಣ ಪೂರ್ಣಪ್ರಮಾಣದಲ್ಲಿ ಗೋಚರವಾಗದಿರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಏನಿದು ಸ್ಟ್ರಾಬೆರಿ ಚಂದ್ರಗ್ರಹಣ
ಸ್ಟ್ರಾಬೆರಿ ಚಂದ್ರಗ್ರಹಣ ಎಂದರೆ ಖಗ್ರಾಹ, ಖಂಡಗ್ರಾಸ, ತೋಳಚಂದ್ರಗ್ರಹಣಗಳಂತೆ ಹಲವಾರು ರೀತಿಯ ಹೆಸರಿನ ಚಂದ್ರಗ್ರಹಣಗಳ ರೀತಿ ಒಂದಾಗಿದೆ. ಇದಕ್ಕೆ ಈ ವಿಶೇಷ ಹೆಸರು ಬರುವುದಕ್ಕೂ ಒಂದು ಮುಖ್ಯಕಾರಣವಿದೆ. ಅದೆಂದರೆ, ಅಮೆರಿಕದಲ್ಲಿ ಸ್ಟ್ರಾಬೆರಿ ಹಣ್ಣುಗಳ ಸೀಸನ್ ಈಗ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಲ್ಲಿ ಸಂಭವಿಸುತ್ತಿರುವ ಪೂರ್ಣ ಚಂದ್ರಗ್ರಹಣಕ್ಕೆ ಸ್ಟ್ರಾಬೆರಿ ಚಂದ್ರಗ್ರಹಣ ಎಂದು ಹೆಸರಿಸಲಾಗಿದೆ.
ಅದೇ ರೀತಿ ರೋಸ್ ಮೂನ್, ಹಾಟ್ ಮೂನ್ ಇತ್ಯಾದಿ ಹೆಸರುಗಳನ್ನು ಈಗಾಗಲೇ ಇಡಲಾಗಿದೆ. ಗ್ರಹಣದ ವೇಳೆ ಚಂದ್ರನು ಭೂಮಿಯ ನೆರಳಿನಲ್ಲಿಯೇ ಪರಿಭ್ರಮಿಸುವುದರಿಂದ ‘ಛಾಯಾ ಚಂದ್ರಗ್ರಹಣ’ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತಿದೆ.
ಎಲ್ಲೆಲ್ಲಿ ಗೋಚರಿಸಲಿದೆ
ಖಗೋಳ ವಿಸ್ಮಯವು ಆಸ್ಟ್ರೇಲಿಯಾ, ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ, ಯುರೋಪ್, ಫೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಭಾರತದಾದ್ಯಂತ ಈ ಚಂದ್ರಗ್ರಹಣ ಗೋಚರಿಸಲಿದೆ ಇಂದು ರಾತ್ರಿ 11.15ಕ್ಕೆ ಆರಂಭವಾಗಿ, ಜೂನ್ 6ರ ತಡರಾತ್ರಿ 12.54ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಿಸಲಿದೆ. ಜೂನ್ 6ರ ಬೆಳಗ್ಗಿನ ಜಾವ 2.34ಕ್ಕೆ ಪೂರ್ಣಗೊಳ್ಳಲಿದೆ. ಈ ಗ್ರಹಣ ಮೂರು ಗಂಟೆ 18 ನಿಮಿಷಗಳು ಇರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail