CRIMENEWSನಮ್ಮಜಿಲ್ಲೆಬೆಂಗಳೂರು

ಮಗಳಂತೆ ನೋಡಿಕೊಂಡು ಕೋಟ್ಯಂತರ ರೂ. ಮೌಲ್ಯದ ಆಸ್ತಿ ವಿಲ್‌ ಮಾಡಿಕೊಟ್ಟರೂ ಚಿನ್ನ ಕದ್ದು ಜೈಲು ಸೇರಿದ ಮನೆಗೆಸದಾಕಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೋಟ್ಯಂತರ ಮೌಲ್ಯದ ಆಸ್ತಿ ಬರೆದುಕೊಟ್ಟು ಮಗಳಂತೆ ಮನೆಯಲ್ಲಿಯೇ ಸಾಕಿಕೊಂಡಿದ್ದ ಮನೆಗೇ ಮನೆಗೆಸದ ಯುವತಿ ಕನ್ನ ಹಾಕಿ ಬಂದ ಅದೃಷ್ಟವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಜೆ.ಪಿ.ನಗರದಲ್ಲಿ ಬೆಳಕಿಗೆ ಬಂದಿದೆ.

ಸದ್ಯ ನಂಬಿದ ಹಾಗೂ ಉಂಡ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆ ಪೊಲೀಸ ಅತಿಥಿಯಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ.

ಮನೆಯಲ್ಲಿಟ್ಟಿದ್ದ 450 ಗ್ರಾಂ ಚಿನ್ನ ಹಾಗೂ ಮೂರು ಕೆಜೆ. ಬೆಳ್ಳಿಯನ್ನು ಕದ್ದಾಕೆ ಮಂಗಳಾ ಎಂಬ ಯುವತಿ. ಈಕೆ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಚಿನ್ನ ಕಳ್ಳತನ ಮಾಡಿದ್ದಾಳೆ. ಮನೆ ಮಾಲಕಿ ಕೊಟ್ಟ ದೂರು ಆಧರಿಸಿ ತನಿಖೆ ನಡೆಸಿದ ಜೆ.ಪಿ.ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಮನೆ ಮಾಲೀಕರಾದ ಆಶಾ ಜಾಧವ್ ಅವರ ತಾಯಿಗೆ ವಯಸ್ಸಾಗಿತ್ತು. ಹೀಗಾಗಿ ತಾಯಿಯನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಕೇರ್ ಟೇಕರ್ ಆಗಿ ಮಂಗಳರನ್ನು ನೇಮಿಸಿಕೊಂಡಿದ್ದರು. ಹಾಸಿಗೆ ಹಿಡಿದಿದ್ದ ಆಶಾ ಅವರ ತಾಯಿಯನ್ನು ಮಂಗಳ ಚೆನ್ನಾಗಿ ನೋಡಿಕೊಂಡಿದ್ದಳು. ಮಕ್ಕಳಿಲ್ಲದ 58 ವಯಸ್ಸಿನ ಆಶಾ ಅವರಿಗೆ ಪತಿಯೂ ಮೃತಪಟ್ಟಿದ್ದರು. ಪ್ರತಿಷ್ಠಿತ ಜೆಪಿ ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಹೀಗಾಗಿ ಮಂಗಳಾಳನ್ನು ಆಶಾ ಅವರು ಮಗಳಂತೆ ನೋಡಿಕೊಳ್ಳುತ್ತಿದ್ದರು. ಕೆಲ ವರ್ಷದ ಹಿಂದೆ ಆಶಾ ಜಾಧವ್ ಅವರ ತಾಯಿ ಕೂಡ ಮೃತಪಟ್ಟರು. ಇದ್ದ ಆಸ್ತಿ ಏನು ಮಾಡಬೇಕು ಎಂದು ಮಂಗಳ ಹೆಸರಿಗೆ ಬರೆದಿದ್ದರು. 5 ಕೋಟಿ ರೂ. ಮೌಲ್ಯದ ಮನೆಯನ್ನು ಮಂಗಳಾಳ ಹೆಸರಿಗೆ ವಿಲ್ ಮಾಡಿ ಮಗಳಂತೆ ಕಾಣುತ್ತಿದ್ದರು.

ಆದರೆ, ಆನ್‌ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದಿದ್ದ ಯುವತಿ, ಬಾಯ್‌ಫ್ರೆಂಡ್ಸ್ ಹಾಗೂ ಪಾರ್ಟಿ, ಪಬ್ಬು ಅಂತಾ ಸುತ್ತಾಡ್ತಿದ್ದಳು. ಅದಕ್ಕಾಗಿ ಲಕ್ಷ ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಳು. ಈಕೆ ಮಾಡಿಕೊಂಡಿದ್ದ 40 ಲಕ್ಷ ರೂಪಾಯಿ ಸಾಲವನ್ನು ಆಶಾ ಅವರೇ ತೀರಿಸಿದ್ದರು. ಅಲ್ಲದೇ ಒಂದೂವರೆ ಕೋಟಿಯ ಮನೆಯನ್ನು ಮಂಗಳ ಹೆಸರಿಗೆ ಬರೆದಿದ್ದರು. ಆನ್‌ಲೈನ್ ಹುಚ್ಚಿಗೆ ಆ ಮನೆ ಮಾರಿ ಮಂಗಳ ಹಣ ಕಳೆದುಕೊಂಡಿದ್ದಳು. ಆದರೂ ಆಕೆಯನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದ ಆಶಾ ನೋಡಿಕೊಳ್ಳುತ್ತಿದ್ದರು.

ಸದ್ಯ ತಾನು ವಾಸ ಇರುವ ಐದು ಕೋಟಿ ರೂ. ಮೌಲ್ಯದ ಮನೆ ಕೂಡ ಮಂಗಳ ಹೆಸರಿಗೆ ವಿಲ್ ಮಾಡಿದ್ದರು. ಆದರೆ, ಮತ್ತದೇ ಆನ್‌ಲೈನ್ ಬೆಟ್ಟಿಂಗ್ ಹುಚ್ಚಿಗೆ ಯುವತಿ ಬಿದ್ದಿದ್ದಳು. ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದಳು. ಒರಿಜಿನಲ್ ಕೀ ಬಳಸಿ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಳು. ಬಳಿಕ ಕೀ ಗೊತ್ತಿಲ್ಲದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು.

ಇತ್ತ ಕೀಗಾಗಿ ಹುಡುಕಾಡಿ ಅಯ್ಯೋ ಕೀ ಎಲ್ಲೋ ಕಳೆದುಹೋಗಿದೆ ಎಂದು ಕೆಲ ದಿನ ಮನೆ ಮಾಲೀಕರು ಸುಮ್ಮನಿದ್ದರು. ಆದರೆ, ದೀಪಾವಳಿ ಹಬ್ಬಕ್ಖಾದರೂ ಚಿನ್ನ ಹಾಕಿಕೊಳ್ಳೋಣ ಎಂದು ಆಶಾ ಅವರು ಡೂಪ್ಲಿಕೇಟ್ ಕೀ ಮೂಲಕ ಬೀರು ತೆಗೆಸಿದ್ದರು. ಈ ವೇಳೆ ಚಿನ್ನ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಮಂಗಳ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಕಳ್ಳತನ ಮಾಡಿ ಅಡಮಾನ ಇಟ್ಟು ಆ ಹಣವನ್ನೂ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಕಳೆದಿದ್ದಳು.

ಇತ್ತ ಯಾರೋ ಅಪರಿಚಿತರು ಕಳ್ಳತನ ಮಾಡಿರಬಹುದೆಂದು ಆಶಾ ಅವರು ದೂರು ನೀಡಿದ್ದರು. ಈ ವೇಳೆ ಮಂಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಆದರೆ ಇದನ್ನು ಆಶಾ ತಿರಸ್ಕರಿಸಿದರು. ಆಕೆ ಅಂತವಳಲ್ಲ ಆಕೆಯ ಮೇಲೆ ಅನುಮಾನ ಪಡಬೇಡಿ ಎಂದಿದ್ದರು. ಪೊಲೀಸರು ಮಂಗಳಾಳ ಸಿಡಿಆರ್ ಪರಿಶೀಲನೆ ನಡೆಸಿದರು. ಈ ವೇಳೆ ಚಿನ್ನ ಅಡಮಾನ ಇಟ್ಟಿದ್ದ ಮೆಸೇಜ್ ಗೊತ್ತಾಗಿದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಾಗಲೂ ಆಕೆಯನ್ನ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದರು ಆಶಾ.

ಆದರೆ, ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಮಂಗಳಾಳನ್ನು ಬಂಧಿಸಿದ್ದಾರೆ. ಬಂಧಿತಳಿಂದ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾಳೆ. ಸದ್ಯ ಮಂಗಳಾಗಾಗಿ ಬರೆದಿದ್ದ ಮನೆಯ ವಿಲ್ ಕೂಡ ಆಶಾ ಜಾಧವ್ ವಾಪಸ್ ಪಡೆದುಕೊಂಡಿದ್ದಾರೆ.

ಇಷ್ಟೇ ಅಲ್ಲ ಮಂಗಳ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಿದ್ದರು. ಪ್ರತಿ ಬರ್ತ್ ಡೇಗೂ ಒಂದೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಕೆಯ ಮದುವೆ ತಯಾರಿ ಕೂಡ ನಡೆಸಿದ್ದರು.‌ ಒಳ್ಳೆ ಹುಡುಗನನ್ನು ನೋಡಿ ತಾನೆ ಮದುವೆ ಮಾಡಲು ಯೋಜಿಸಿದ್ದರು. ಹೀಗಿದ್ದರೂ, ಉಂಡ ಮನೆಗೆ ಮಂಗಳಾ ಕನ್ನ ಹಾಕಿ ಜೈಲುಪಾಲಾಗಿದ್ದಾಳೆ.

Megha
the authorMegha

Leave a Reply

error: Content is protected !!
Latest news
ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ