NEWSಕೃಷಿಮೈಸೂರು

ರೈತ ದಸರಾ ಉದ್ಘಾಟನೆಯಲ್ಲಿ ರೈತ ಮುಖಂಡರ ಕಡಗಣನೆ ಖಂಡಿಸಿ ಕೃಷಿ ಸಚಿವರಿಗೆ ಎಚ್ಚರಿಕೆ ಕೊಟ್ಟ ಕಬ್ಬು ಬೆಳೆಗಾರರ ಸಂಘ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಮೈಸೂರು: ರೈತ ದಸರಾ ಆಚರಣೆಗೆ ಜಿಲ್ಲೆಯ ರಾಷ್ಟ್ರ ಮಟ್ಟದ ರೈತ ಮುಖಂಡ ಹಾಗೂ ರಾಜ್ಯ ರೈತ ಮುಖಂಡರಿಂದ ಉದ್ಘಾಟನೆ ಮಾಡಿಸುವಂತೆ ಕೃಷಿ ಸಚಿವರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ಒತ್ತಾಯಿಸಿತು.

ಶುಕ್ರವಾರ ನಗರದ ಜೆ.ಕೆ.ಗ್ರೌಂಡ್‌ನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಭೇಟಿ ಮಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ಮೈಸೂರು ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯ ಪತ್ರ ಸಲ್ಲಿಸಿದರು.

ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಆಚರಣೆ ಮಾಡುತ್ತಿರುವುದು ರೈತರಿಗೆ ಸಂತೋಷದ ವಿಷಯ, ಆದರೆ ರೈತರ ಹೆಸರಿನಲ್ಲಿ ರೈತ ದಸರಾ ಆಚರಣೆ ಮಾಡಿ ಮೈಸೂರು ಜಿಲ್ಲೆಯ ರೈತ ಮುಖಂಡರನ್ನು ಕಡೆಗಣಿಸಿ ರೈತ ದಸರಾ ಆಚರಣೆ ಮಾಡುತ್ತಿರುವುದು ರೈತರಿಗೆ ಮಾಡಿದ ಅಪಮಾನವಾಗಿದೆ ಎಂದು ಸಂಘದ ಮುಖಂಡರು ಖಂಡಿಸಿದರು.

ಜಿಲ್ಲೆಯಲ್ಲಿ ಕೃಷಿ ಇಲಾಖೆ ನಿಷ್ಕ್ರಿಯವಾಗಿದ್ದು ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ, ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ರೈತ ಮುಖಂಡ ಹಾಗೂ ರಾಜ್ಯ ಮುಖಂಡರು ಮೈಸೂರು ಜಿಲ್ಲೆಯಲ್ಲಿ ಇರುವುದು ಯಾರಿಗೂ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ದಸರಾ ಹಬ್ಬ ಆಚರಣೆ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವರು, ಜಿಲ್ಲಾ ಆಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಪಕ್ಷದ ಕಾರ್ಯಕರ್ತರು ಕಾಣುತ್ತಾರೆ. ಆದರೆ ಜಿಲ್ಲೆಯ ರೈತ ಮುಖಂಡರು ಕಾಣುತ್ತಿಲ್ಲವೇ? ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಹಗಲಿರುಳು ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದು ನ್ಯಾಯ ಕೊಡಿಸುವ ರೈತ ಮುಖಂಡರನ್ನು ಕಡೆಗಣಿಸಿ ರೈತ ದಸರಾ ಆಚರಣೆ ಮಾಡುತ್ತಿರುವುದು ರೈತರಿಗೆ ಮಾಡಿದ ವಂಚನೆ ಹಾಗೂ ಅಪಮಾನವಾಗಿದ್ದು ಇದನ್ನು ಖಂಡಿಸುತ್ತೇವೆ ಎಂದರು

ಇನ್ನು ಮುಂಬರುವ ವರ್ಷಗಳಲ್ಲಿ ರೈತ ದಸರಾ ಆಚರಣೆಗೆ ರೈತ ಮುಖಂಡರಿಂದ ಉದ್ಘಾಟನೆ ಮಾಡಿಸಬೇಕು, ಕಡೆಗಣಿಸಿ ರೈತ ದಸರಾ ಆಚರಣೆ ಮಾಡಲು ಮುಂದಾದರೆ ಜಿಲ್ಲಾ ಉಸ್ತುವಾರಿ ಸಚಿವ, ಕೃಷಿ ಸಚಿವ, ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ರೈತರು ಘೇರಾವ್ ಮಾಡುತ್ತೇವೆ ಎಂದು ಎಚ್ಚರಿಸಿದರು.

Advertisement

ಮನವಿ ಸ್ವೀಕರಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ನಿಮ್ಮ ಮನವಿಯನ್ನು ಉಸ್ತುವಾರಿ ಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ , ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಜಂಟಿ ಕಾರ್ಯದರ್ಶಿ ಬಿಪಿ ಪರಶಿವ ಮೂರ್ತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವರಕೊಡು ನಾಗೇಶ್, ತಾಲೂಕು ಅಧ್ಯಕ್ಷರುಗಳಾದ ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್,ಕಿರಗಸೂರು ಪ್ರಸಾದ್ ನಾಯಕ, ಬನ್ನೂರು ಸೂರಿ, ಕಾಟೂರು ಮಹದೇವಸ್ವಾಮಿ, ವಾಜಮಂಗಲ ಮಹದೇವು, ಅಂಬಳೆ ಮಂಜುನಾಥ್, ರಂಗರಾಜು, ರಾಮಚಂದ್ರ, ಪುಟ್ಟೇಗೌಡನಹುಂಡಿ ರಾಜು, ಬಿ.ಪಿ.ಪರಶಿವಮೂರ್ತಿ, ಗಿರೀಶ್, ರವಿಕುಮಾರ್, ಪುಟ್ಟಸ್ವಾಮಿ ಇನ್ನು ಮುಂತಾದವರು ಇದ್ದರು.

Megha
the authorMegha

Leave a Reply

error: Content is protected !!