NEWSVideosನಮ್ಮರಾಜ್ಯ

KSRTC ಹಾಸನ: ಬಸ್‌ ನಿಲುಗಡೆ ವಿಚಾರಕ್ಕೆ ಕರ್ತವ್ಯ ನಿರತ ನಿರ್ವಾಹಕನ ಮೇಲೆ ಪುಂಡರಿಂದ ಹಲ್ಲೆ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ಅರಕಲಗೂಡು ಘಟಕದ ಅರಕಲಗೂಡು ಮತ್ತು ಗೊರೂರು ಪಕ್ಕದ ಗ್ರಾಮದಲ್ಲಿ ಬಸ್ಸಿನ ನಿಲುಗಡೆ ವಿಚಾರಕ್ಕೆ ಕರ್ತವ್ಯ ನಿರತ ನಿರ್ವಾಹಕನ ಮೇಲೆ ಗ್ರಾಮದ ಗ್ರಾಮಸ್ಥರು ಹಲ್ಲೆ ಮಾಡಿದ್ದು ಅಲ್ಲದೆ ಬಾಯಿ ಬಂದಂತೆ ಮಾತನಾಡಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದು, ಡಿಸಿಯನ್ನೇ ಸ್ಥಳಕ್ಕೆ ಕರೆಸುತ್ತೇವೆ ಎಂಬ ದಬ್ಬಾಳಿಕೆಯನ್ನು ತೋರಿದ್ದಾರೆ. ಈ ರೀತಿ ಇಂಥ ಪುಂಡರು KSRTC ಸಾರಿಗೆ ನೌಕರರಾದ ಚಾಲಕ – ನಿರ್ವಾಹಕರ ಮೇಲೆ ಹಲ್ಲೆ ಮಾಡಿದರೆ ಕರ್ತವ್ಯ ಮಾಡಲು ಸಾಧ್ಯವೇ?

ಇಂಥ ಕಿಡಿಗೇಡಿಗಳೀಗೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತಿ ಪಾಠಕಲಿಸಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಅದನ್ನು ಕಂಡು ಕಾಣದಂತೆ ವರ್ತಿಸಿದರೆ ಮುಂದೆ ಚಾಲನಾ ಸಿಬ್ಬಂದಿಗಳು ಡ್ಯೂಟಿ ಮಾಡುವುದಕ್ಕೇ ಕಷ್ಟವಾಗಲಿದೆ. ಹಾಗಾಗಿ ಕೂಡಲೇ ಈ ಬಗ್ಗೆ ಮೇಲಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

ಅಧಿಕಾರಿಗಳು ಚಾಲನಾ ಸಿಬ್ಬಂದಿಗಳು ನಮ್ಮ ಕೆಳ ಹಂತದ ಉದ್ಯೋಗಿಗಳು ಅವರಿಗೆ ತೊಂದರೆ ಆದರೆ ಇಡೀ ಸಂಸ್ಥೆಗೆ ಸಮಸ್ಯೆಯಾದಂತೆ ಎಂಬ ನಿಲುವನ್ನು ತಾಳಬೇಕು. ಆದರೆ ಏಕೋ ಗೊತ್ತಿಲ್ಲ ನೌಕರರ ವಿಷಯ ಬಂದಾಗ ಮೌನವಾಗುತ್ತಾರೆ. ಸದೇ ನೌಕರರ ವಿರುದ್ಧ ಯಾವುದಾದರೊಂದು ಆರೋಪ ಕೇಳಿ ಬಂದ ಕೂಡಲೇ ಅವರಿಗೆ ನೋಟಿಸ್‌ ಜಾರಿ ಮಾಡಿ ಕೂಡಲೇ ಅಮಾನತು ಮಾಡುತ್ತಾರೆ.

ಇದೇ ಶೀಘ್ರಗತಿಯ ಕ್ರಮವನ್ನು ನೌಕರರಿಗೆ ತೊಂದರೆ ಕೊಡುವ ಪುಂಡರ ವಿರುದ್ಧ ತೆಗೆದುಕೊಂಡಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲ ಆದರೆ ಈ ಬಗ್ಗೆ ಮಾತ್ರ ನಮ್ಮ ಕೈಯಲ್ಲಿ ಏನು ಇಲ್ಲ ಎಂಬಂತೆ ವರ್ತಿಸುತ್ತಾರೆ ಅಧಿಕಾರಿಗಳು ಈ ಪರಿಣಾಮ ನಿತ್ಯ ಒಂದಲ್ಲ ಒಂದುಕಡೆ ನೌಕರರು ಹಲ್ಲೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಇನ್ನು ಮುಂದಾದರೂ ಹಲ್ಲೆ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗಬೇಕು.

ಇಂಥ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ಸಂದೇಶಗಳನ್ನು ಸಂಸ್ಥೆಯಿಂದ ಪುಂಡರಿಗೆ ಕಳುಹಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಸ್ತ ನೌಕರರು ಒತ್ತಾಯ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
7ಕೋಟಿಗೂ ಹೆಚ್ಚು ಮಂದಿಗೆ ಸಿಹಿಸುದ್ದಿ: UPI-ATMನಲ್ಲಿ ಶೇ.75ರಷ್ಟು ಪಿಎಫ್‌ ಹಣ ವಿತ್‌ಡ್ರಾಗೆ ಅವಕಾಶ- ಜೂನ್ ಅಂತ್ಯದ... ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಪ್ರಕರಣದ ಪ್ರಮುಖ ಆರೋಪಿ: ಕಾಲಿಗೆ ಹಾಡುಹಗಲೇ ಗುಂಡು ಹಾರಿಸಿ ಬಂಧಿಸಿದ ಪೊಲೀಸರು KSRTC: ಸಾರಿಗೆ ನಿಗಮದ ನೌಕರರಿಗೆ ಗಳಿಕೆ ರಜೆ (EL) ನಗದೀಕರಣ ಸೌಲಭ್ಯ ವಿಸ್ತರಿಸಿ ಎಂಡಿ ಆದೇಶ KSRTC: ಶೇ.1.5ರಷ್ಟು ಹೆಚ್ಚಳದ ತುಟ್ಟಿಭತ್ಯೆ ಜೂನ್‌ ವೇತನದಲ್ಲಿ ಅನುಷ್ಠಾನಗೊಳಿಸಿ ನೌಕರರಿಗೆ ಪಾವತಿಸಲು ಎಂಡಿ ಆದೇಶ 'ಕರ್ತವ್ಯ' ಆಪ್ ನೋಂದಣಿ ಶೇ.70.6 ರಷ್ಟು ಪ್ರಗತಿ - ಮಾಧ್ಯಮಗಳ ವರದಿಗೆ ಸರ್ಕಾರದ ಸ್ಪಷ್ಟನೆ ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ