ಮೈಸೂರು: ಕುವೆಂಪು ನಗರದಲ್ಲಿರುವ ಮೆಗಾ ಮೆಡಿಕಲ್ ಬಹುಮಹಡಿ ಕಟ್ಟಡದಲ್ಲಿ ಶನಿವಾರ ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಮೂರು ಅಂತಸ್ತಿನ ಕಟ್ಟಡದಲ್ಲಿ ನಸುಕಿನ ಮೂರು ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ವಿಷಯ ತಿಳಿದ ಕೂಡಲೇ 9 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ಮಾಡಿದವು. 60 ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿಯನ್ನು ನಂದಿಸಲು ಸುಮಾರು ಮೂರು ಗಂಟೆ ಬೇಕಾಯಿತು.
ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದು ಬಂದಿದೆ. ಬೆಳಗ್ಗೆಯಷ್ಟೇ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು ನಷ್ಟದ ಅಂದಾಜು ಇನ್ನಷ್ಟೇ ತಿಳಿಯಬೇಕಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ರಾಜು, ನವೀನ್, ಗಂಗಾ ನಾಯಕ ಹಾಗೂ ಭರತ್ ಕುಮಾರ್, ಠಾಣಾಧಿಕಾರಿಗಳಾದ ಗಂಗಾಧರ, ನಾಗರಾಜು ಅರಸ್, ಶಿವಸ್ವಾಮಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.