ಬೆಂಗಳೂರು: ವಿಶ್ವಮಾರಿ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 453 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದೆ.
ಕೆಲ ದಿನಗಳಿಂದ ಕೊರೊನಾಗೆ ಮೃತಪಡುತ್ತಿರುವ ಸಂಖ್ಯೆ ಏರುತ್ತಲೇ ಇದ್ದು ಇಂದು ಕೂಡ 5 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತ ಸಂಖ್ಯೆ 141ಕ್ಕೆ ಏರಿಕೆ ಆಗಿದೆ. (ಅನ್ಯಕಾರಣಕ್ಕೆ ನಾಲ್ವರು ಸೇರಿ).
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
24 ಗಂಟೆಗಳಲ್ಲಿ ರಾಜ್ಯದಲ್ಲಿ 225 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 5,618 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನು 3,391 ಸಕ್ರಿಯ ಪ್ರಕರಣಗಳಿವೆ. ಇಂದು ಕಂಡುಬಂದಿರುವ 453 ಹೊಸ ಪ್ರಕರಣಗಳಲ್ಲಿ 69 ಮಂದಿ ಹೊರರಾಜ್ಯ ಮತ್ತು 5 ಮಂದಿ ಅಂತಾರಾಷ್ಟ್ರ ಪ್ರಯಾಣದ ಇತಿಹಾಸ ಹೊಂದಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಬೆಂಗಳೂರು ನಗರ 196, ಬಳ್ಳಾರಿ 40, ಕಲಬುರಗಿ 39, ವಿಜಯಪುರ 39, ಮೈಸೂರು 18, ಗದಗ 18, ಧಾರವಾಡ 15, ಬಾಗಲಕೋಟೆ 14, ಬೀದರ್ 13, ದಾವಣಗೆರೆ 8, ಉತ್ತರ ಕನ್ನಡ 8, ಕೋಲಾರ 8, ದಕ್ಷಿಣ ಕನ್ನಡ 7, ಮಂಡ್ಯ 5, ಹಾಸನ 5, ತುಮಕೂರು 4, ಯಾದಗಿರಿ 3, ಚಿಕ್ಕಬಳ್ಳಾಪುರ 3, ಹಾವೇರಿ 3, ರಾಯಚೂರು 2, ಶಿವಮೊಗ್ಗ 2, ರಾಮನಗರ 2 ಮತ್ತು ಚಿಕ್ಕಮಗಳೂರಿನಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ.
ಇಂದು ಕೊರೊನಾದಿಂದ ಗುಣಮುಖರಾಗಿ 225 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು 5,618 ಗುಣಮುಖವಾಗಿದ್ದಾರೆ. 9,150 ಪ್ರಕರಣಗಳ ಪೈಕಿ 3,391 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
1. ರೋಗಿ 6,553: ಬೆಂಗಳೂರಿನ 53 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 10ರಂದು ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಜೂನ್ 20ರಂದು ನಿಧನರಾಗಿದ್ದಾರೆ.
2. ರೋಗಿ 8,872: ಬೆಂಗಳೂರಿನ 62 ವರ್ಷದ ಪುರುಷ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 16ರಂದು ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಜೂನ್ 16ರಂದು ನಿಧನರಾಗಿದ್ದಾರೆ.
ರೋಗಿ 8,880: ಬೆಂಗಳೂರಿನ 55 ವರ್ಷದ ಪುರುಷ. ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಜೂನ್ 18ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 20ರಂದು ನಿಧನರಾಗಿದ್ದಾರೆ.
4. ರೋಗಿ 9,149: ಬೀದರ್ ಜಿಲ್ಲೆಯ 70 ವರ್ಷದ ಪುರುಷ. ಕಂಟೈನ್‍ಮೆಂಟ್ ಝೋನ್ ಸಂಪರ್ಕ ಹೊಂದಿದ್ದು ಜೂನ್ 18 ರಂದು ನಿಧನರಾಗಿದ್ದಾರೆ.
5. ರೋಗಿ 9,150: ಬೀದರ್ ನಗರದ 46 ವರ್ಷದ ಪುರುಷ. ಸೋಂಕಿನ ಮೂಲ ಪತ್ತೆಯಾಗಿಲ್ಲ. ಜೂನ್ 18ರಂದು ನಿಧನರಾಗಿದ್ದಾರೆ.
ದೇಶದಲ್ಲಿ 415,624 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 415,624 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ 13,347 ಮಂದಿ ಮೃತಪಟ್ಟಿದ್ದಾರೆ. 230,586 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 8,955,132 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 467,484 ಜನರು ಮೃತಪಟ್ಟಿದ್ದಾರೆ 4,765,937 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail