LatestNEWSನಮ್ಮಜಿಲ್ಲೆಬೆಂಗಳೂರು

“ಕೆಎಸ್‌ಆರ್‌ಟಿಸಿ ಆರೋಗ್ಯ” ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ MD ಅನ್ಬುಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯದಿಂದ ಇರಬೇಕು ಎಂಬ ಸದುದ್ದೇಶದಿಂದ “ಕೆಎಸ್‌ಆರ್‌ಟಿಸಿ ಆರೋಗ್ಯ” ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು ಇದೇ ಜ.6ರಂದು ಚಾಲನೆ ನೀಡಿದ್ದಾರೆ.

ಇನ್ನು ಈ ಯೋಜನೆಗೆ ಆಸ್ಪತ್ರೆಗಳು ಉತ್ತಮವಾಗಿ ಸ್ಪಂದಿಸಿದ್ದು ನೌಕರರು ಸಂತೋಷದಿಂದ ಸ್ವಾಗತಿಸಿರುವುದು ನಿಗಮಕ್ಕೆ ತೃಪ್ತಿ ತಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಸಂತಸ ವ್ಯಕ್ತಪಡಿಸಿ ನೌಕರರಿಗೆ ಪತ್ರ ಬರೆದಿದ್ದಾರೆ.

ಆ ಪತ್ರದಲ್ಲಿ … ಆತ್ಮೀಯ ನೌಕರ ಬಾಂಧವರೇ,

ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ “ಕೆಎಸ್‌ಆರ್‌ಟಿಸಿ ಆರೋಗ್ಯ” ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು 06.01.2025 ರಂದು ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಆಸ್ಪತ್ರೆಗಳು ಉತ್ತಮವಾಗಿ ಸ್ಪಂದಿಸಿದ್ದು ನೌಕರರು ಸಂತೋಷದಿಂದ ಸ್ವಾಗತಿಸಿರುವುದು ನಿಗಮಕ್ಕೆ ತೃಪ್ತಿ ತಂದಿರುತ್ತದೆ.

ಜನವರಿ 11ರವರೆಗೂ 41 ಮಂದಿ ಒಳರೋಗಿಗಳಾಗಿ ಹಾಗೂ 124 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಕಾರ್ಡ್ ಇಲ್ಲದೆಯೂ ನೌಕರರು ತಮ್ಮ PF Number ಹೇಳಿ ಚಿಕಿತ್ಸೆ ವಡೆಯಬಹುದಾಗಿದೆ.

ನಿಗಮದಲ್ಲಿ 33,288 ಅಧಿಕಾರಿ/ಸಿಬ್ಬಂದಿಗಳ ಪೈಕಿ 23,342 ಸಿಬ್ಬಂದಿಗಳಿಗೆ ಈಗಾಗಲೇ ಆರೋಗ್ಯ ಕಾರ್ಡ್ ವಿತರಿಸಲಾಗಿದ್ದು, ಉಳಿದ 9,946 ಸಿಬ್ಬಂದಿಗಳಿಗೆ ನಾಳೆ 12.01.2025 ರೊಳಗಾಗಿ ವಿತರಿಸಲಾಗುವುದು.

ಚಿಕಿತ್ಸಾ ವೆಚ್ಚವನ್ನು 30 ದಿನದೊಳಗಾಗಿ ಆಸ್ಪತ್ರೆಗಳಿಗೆ ಪಾವತಿಸಲಾಗುವುದೆಂದು ತಿಳಿಸಲಾಗಿತ್ತು. ಆದರೆ, ಎಲ್ಲ ಬಿಲ್ಲು/ ದಾಖಲೆಗಳು ಸರಿಯಾಗಿ ನಿಗದಿತ ಸಮಯದಲ್ಲಿ ಒದಗಿಸಿದ್ದಲ್ಲಿ 48 ಗಂಟೆಯೊಳಗೆ ಪಾವತಿಸಲು ಕ್ರಮ ವಹಿಸಲಾಗುವುದು. ಅದರಂತೆ ಈಗಾಗಲೇ 8 ಪ್ರಕರಣಗಳಿಗೆ 48 ಗಂಟೆಯೊಳಗೆ ಚಿಕಿತ್ಸಾ ವೆಚ್ಚ ಪಾವತಿಸಲಾಗಿದೆ.

ಮುಂದುವರಿದು, ಈ ಯೋಜನೆಯಲ್ಲಿ ಚಿಕಿತ್ಸಾ ವೆಚ್ಚವನ್ನು CGHS ದರದಂತೆ ಪಾವತಿಸಲಾಗುವುದೆಂದು ತಿಳಿಸಿದ್ದು, CGHS ದರಪಟ್ಟಿಯಲ್ಲಿ ಇಲ್ಲದ ವಸ್ತುಗಳಾದ Consumables/ Non Admissible items ಗಳಿಗೆ ನೌಕರರೇ ಪಾವತಿಸುವಂತೆ ಈ ಮೊದಲು ತಿಳಿಸಲಾಗಿತ್ತು.

ಆದರೆ ಕೆಲವೊಂದು ವಸ್ತುಗಳು ಚಿಕಿತ್ಸೆಯ ಭಾಗವಾಗಿದ್ದು ಅವುಗಳನ್ನು ಹಾಗೂ ಅಲಂಕಾರಿಕ ವಸ್ತುಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ವಸ್ತುಗಳಿಗೆ CGHS ದರ ಪಟ್ಟಿಯಲ್ಲಿ ಒಳಗೊಂಡಿಲ್ಲವಾದರೂ ಸಹ (Consumables/ Non Admissible ವಸ್ತುಗಳ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ) ನೌಕರರಿಗೆ ಆರ್ಥಿಕ ಹೊರೆಯಾಗಬಾರದೆಂಬ ಆಶಯದಿಂದ ನಿಗಮದ ವತಿಯಿಂದ ಪಾವತಿಸಲು ತೀರ್ಮಾನಿಸಲಾಗಿದೆ.

ಶುಭಾಶಯಗಳೊಂದಿಗೆ

(ವಿ. ಅನ್ನುಕುಮಾರ್ ಭಾಆಸೇ..)

ವ್ಯವಸ್ಥಾಪಕ ನಿರ್ದೇಶಕರು ಎಂದು ಪತ್ರ ಬರೆಯುವ ಮೂಲಕ ಎಲ್ಲ ನೌಕರರೊಂದಿಗೂ ಖುಷಿಯನ್ನು ಶೇರ್‌ ಮಾಡಿಕೊಂಡಿದ್ದಾರೆ.

Deva
the authorDeva

Leave a Reply

error: Content is protected !!
Latest news
BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ! ಮೇ 20ರಿಂದ ಸಾರಿಗೆ ನೌಕರರ ಮುಷ್ಕರ ಮಾಡೇ ತೀರುತ್ತೇವೆ: ವಿಜಯಭಾಸ್ಕರ್ KSRTC: ಮೇ 20 ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ ವಿಜಯಪಥ ವರದಿಗೆ ಎಚ್ಚೆತ್ತ NWKRTC: ನೌಕರರಿಗೆ 11ತಿಂಗಳ ಹಿಂಬಾಕಿ ಪಾವತಿಯಾಗಿದೆ- ಸ್ಪಷ್ಟನೆ ನೀಡಿ ಸಿಬ್ಬಂದಿ ಗೊಂದಲ ನ... ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳ ತೀವ್ರ ಖಂಡನೀಯ: ನೌಕರರ ಹಕ್ಕಿಗಾಗಿ ಹೋರಾಟಕ್ಕೆ ಸಿದ್ಧ: ಬೀದರ್‌ ಬಿಎಂ... ಚಿನ್ನ ಇಂದು ಬಲುಭಾರ: 1ಗ್ರಾಂ 22K ಚಿನ್ನದ ಬೆಲೆ ₹1275 ಏರಿಕೆ, ಬೆಳ್ಳಿ ₹20 ಸಾವಿರ ಏರಿಕೆ NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ! "ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು" ಅವಕಾಶ ಇಲ್ಲ: ಭಾರತ ಸಂವಿಧಾನ ಮಿಲನ ಕಳನಾಯಕ ಖ್ಯಾತಿಯ, ಹಿಟ್ಲರ್ ಕಲ್ಯಾಣ’ ಧಾರವಾಹಿಯ ಹೀರೋ ದಿಲೀಪ್ ರಾಜ್ ಇನ್ನಿಲ್ಲ KSRTC ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲೇನಿದೆ, ನೌಕರರಿಗೆ ಎಷ್ಟು ತಿಂಗಳ ಹಿಂಬಾಕಿ ಕೊಡಬೇಕು..?