ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ವರ್ಷ ವರ್ಷ ನಡೆಯಬೇಕಿರುವ ಅಂತರ ನಿಗಮ ವರ್ಗಾವಣೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರಿಯಾದ ಸಮಯಕ್ಕೆ ನಡೆಯದೆ ವರ್ಗಾವಣೆ ಬಯಸುವ ನೌಕರರು ಪರದಾಡುವಂತಾಗಿದೆ.
ಅಂತರ ನಿಗಮ ವರ್ಗಾವಣೆಯ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಅನ್ನು ಇನ್ನು ಬಿಟ್ಟಿಲ್ಲ. ಈ ಬಗ್ಗೆ ದಯವಿಟ್ಟು ನೌಕರರು ಸಂಘಟನೆಗಳ ಮುಖಂಡರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಎಂದು ಹಲವು ನೌಕರರು ಕೈ ಮುಗಿದು ಕೇಳುತ್ತಿದ್ದಾರೆ.
ಇನ್ನು ನಿಗಮಗಳಲ್ಲಿ ವರ್ಗಾವಣೆಗೆ ಪ್ರತಿ ವರ್ಷ ಅರ್ಜಿ ಹಾಕಲು ಕರೆಯಬೇಕು ಆದ್ರೆ ಇಲ್ಲಿ ತಮ್ಮ ಇಷ್ಟ ಬಂದಾಗ ಮಾತ್ರ ಅಧಿಕಾರಿಗಳು ಕರೆಯುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಇದು ಏಕೆ, ಇದರ ಬಗ್ಗೆ ಯಾರು ಕೇಳಲ್ಲ ಯಾಕೆ ಅಂತ ನೌಕರರು ಪ್ರಶ್ನೆ ಮಾಡುತ್ತಿದ್ದಾರೆ.
ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿ ತೋರುತ್ತಿರುವುದು ಏಕೆ? ವರ್ಗಾವಣೆಯ ವಿಷಯದ ಬಗ್ಗೆ ಯಾವ ಸಂಘಟನೆಗಳು ಏಕೆ ಕೇಳಲ್ಲ ಎಂಬುವುದೇ ನಮಗೆ ಯಕ್ಷ ಪ್ರಶ್ನೆಯಾಗಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಲಕಾಲಕ್ಕೆ ಅದರಲ್ಲೂ ಸರಿಯಾದ ಸಮಯಕ್ಕೆ ವರ್ಗಾವಣೆ ಮಾಡುವುದಕ್ಕೆ ಅರ್ಜಿಗಳನ್ನು ಆನ್ಲೈನ್ನಲ್ಲಿ ಬಿಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ಈ ಬಗ್ಗೆ ಸಂಗಟನೆಗಳ ಮುಖಂಡರೂ ಕೂಡ ಎಚ್ಚೆತ್ತುಕೊಂಡು ಸಂಸ್ಥೆಯಲ್ಲಿ ಏನಾಗುತ್ತಿದೆ ನೌಕರರಿಗೆ ಎಲ್ಲ ಸೌಲಭ್ಯಗಳು ಕೂಡ ಸಿಗುತ್ತಿವೆಯೇ ಇಲ್ಲವೆ ಎಂಬುದರ ಬಗ್ಗೆ ಆಗಿಂದ್ಹಾಗೆ ಮಾಹಿತಿ ಪಡೆದುಕೊಂಡು ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Related
