NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಅಧಿಕಾರಿಗಳ ಬೇಜವಾಬ್ದಾರಿಯಿಂದ ನೌಕರರ ವರ್ಗಾವಣೆಗೆ ಗ್ರಹಣ !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ವರ್ಷ ವರ್ಷ ನಡೆಯಬೇಕಿರುವ ಅಂತರ ನಿಗಮ ವರ್ಗಾವಣೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರಿಯಾದ ಸಮಯಕ್ಕೆ ನಡೆಯದೆ ವರ್ಗಾವಣೆ ಬಯಸುವ ನೌಕರರು ಪರದಾಡುವಂತಾಗಿದೆ.

ಅಂತರ ನಿಗಮ ವರ್ಗಾವಣೆಯ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಅನ್ನು ಇನ್ನು ಬಿಟ್ಟಿಲ್ಲ. ಈ ಬಗ್ಗೆ ದಯವಿಟ್ಟು ನೌಕರರು ಸಂಘಟನೆಗಳ ಮುಖಂಡರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಎಂದು ಹಲವು ನೌಕರರು ಕೈ ಮುಗಿದು ಕೇಳುತ್ತಿದ್ದಾರೆ.

ಇನ್ನು ನಿಗಮಗಳಲ್ಲಿ ವರ್ಗಾವಣೆಗೆ ಪ್ರತಿ ವರ್ಷ ಅರ್ಜಿ ಹಾಕಲು ಕರೆಯಬೇಕು ಆದ್ರೆ ಇಲ್ಲಿ ತಮ್ಮ ಇಷ್ಟ ಬಂದಾಗ ಮಾತ್ರ ಅಧಿಕಾರಿಗಳು ಕರೆಯುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಇದು ಏಕೆ, ಇದರ ಬಗ್ಗೆ ಯಾರು ಕೇಳಲ್ಲ ಯಾಕೆ ಅಂತ ನೌಕರರು ಪ್ರಶ್ನೆ ಮಾಡುತ್ತಿದ್ದಾರೆ.

ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿ ತೋರುತ್ತಿರುವುದು ಏಕೆ? ವರ್ಗಾವಣೆಯ ವಿಷಯದ ಬಗ್ಗೆ ಯಾವ ಸಂಘಟನೆಗಳು ಏಕೆ ಕೇಳಲ್ಲ ಎಂಬುವುದೇ ನಮಗೆ ಯಕ್ಷ ಪ್ರಶ್ನೆಯಾಗಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಾಲಕಾಲಕ್ಕೆ ಅದರಲ್ಲೂ ಸರಿಯಾದ ಸಮಯಕ್ಕೆ ವರ್ಗಾವಣೆ ಮಾಡುವುದಕ್ಕೆ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಬಿಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

ಈ ಬಗ್ಗೆ ಸಂಗಟನೆಗಳ ಮುಖಂಡರೂ ಕೂಡ ಎಚ್ಚೆತ್ತುಕೊಂಡು ಸಂಸ್ಥೆಯಲ್ಲಿ ಏನಾಗುತ್ತಿದೆ ನೌಕರರಿಗೆ ಎಲ್ಲ ಸೌಲಭ್ಯಗಳು ಕೂಡ ಸಿಗುತ್ತಿವೆಯೇ ಇಲ್ಲವೆ ಎಂಬುದರ ಬಗ್ಗೆ ಆಗಿಂದ್ಹಾಗೆ ಮಾಹಿತಿ ಪಡೆದುಕೊಂಡು ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಪಾದಯಾತ್ರೆಗೂ ಅಡ್ಡಿ ಮಾಡುತ್ತಿರುವ ಜಂಟಿ ಸಂಘಟನೆ... ಸಾವಿರಾರು ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಆರೋಗ್ಯ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಸಾರಿಗೆ ನೌಕರರು... ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ನಿಮ್ಮ ನಿಮ್ಮ ಕುಟುಂಬದ ಭವಿಷ್ಯ ಶೂನ್ಯ! ನಾಳೆ ಸಕ್ಕರೆ ನಾಡು ಮಂಡ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ: ಸ್ವಾಗತಕ್ಕೆ ಸಜ್ಜಾದ ಶ್ರೀಮಠ 6ನೇ ದಿನ ಪೂರ್ಣಗೊಂಡ ಸಾರಿಗೆ ನೌಕರರ ಪಾದಯಾತ್ರೆ: ಏ.15ರಂದು ಸೀಬಿಯಿಂದ ಮುಂದುವರಿಕೆ ಕಬ್ಬಿನ ಹಣ ಪಾವತಿಗಾಗಿ ಡಿಸಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ: ಕುರುಬೂರ್ ಶಾಂತಕುಮಾರ್ ಚುನಾವಣೆವೇಳೆ ಕೊಟ್ಟ ಭರವಸೆ ಈಡೇರಿಸಿದ್ದೇವೆ: ಶಾಸಕ ಶ್ರೀನಿವಾಸ್ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ