4.30 ಲಕ್ಷ ಮೃತಪಟ್ಟ, ಅನರ್ಹರ ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಟ್ಟ ಸರ್ಕಾರ
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಮಾಡುತ್ತಿರುವ ಸರ್ಕಾರ ಈವರೆಗೂ ಮೃತಪಟ್ಟವರು ಹಾಗೂ ಆದಾಯ ತೆರೆಇಗೆ ಪಾವತಿದಾರರು 2 ಸಾವಿರ ರೂ.ಗಳನ್ನು ಪಡೆಯುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈಗಗಾಗಲೇ 4.30 ಲಕ್ಷ ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯಡಿ ಪಡೆಯುತ್ತಿರುವ 2 ಸಾವಿರ ರೂ.ಗಳನ್ನು ಮೃತಪಟ್ಟವ ಹೆಸರಿನಲ್ಲೂ ಹಾಗೂ ಆದಾಯ ತೆರೆಗೆ ಪಾವತಿಸುತ್ತಿರುವವರು ಸೇರಿದಂತೆ ಸುಮಾರು 4.30ಲಕ್ಷ ಮಂದಿ ಪಡೆಯುತ್ತಿರುವುದು ಪತ್ತೆಯಾಗಿದ್ದು, ಈ ಇಷ್ಟು ಮಂದಿಯನ್ನು ಈ ಯೋಜನೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈ ಬಿಟ್ಟಿದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಮಾಡುತ್ತಿರುವ ಸರ್ಕಾರ ಈವರೆಗೂ ಮೃತಪಟ್ಟವರು ಹಾಗೂ ಆದಾಯ ತೆರೆಇಗೆ ಪಾವತಿದಾರರು 2 ಸಾವಿರ ರೂ.ಗಳನ್ನು ಪಡೆಯುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈಗಗಾಗಲೇ 4.30 ಲಕ್ಷ ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ ಫಲಾನುಭವಿಗಳಾಗಿ ಯೋಜನೆಯ ಸೌಲಭ್ಯ (2000 ರೂ.) ಪಡೆಯುತ್ತಿದ್ದ 1.26 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರ. ಇದರ ಜತೆಗೆ ಅನರ್ಹ ಫಲಾನುಭವಿಗಳು ಅಂದರೆ ಆದಾಯ ತೆರಿಗೆ ಪಾವತಿಸುತ್ತಿರುವವರು ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವುದು ಗೊತ್ತಾಯಿತು.
ಆ ಕೂಡಲೇ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಗ್ರಾಮ ಪಂಚಾಯಿತಿಗಳ ಮೂಲಕ ಮೃತಪಟ್ಟವರು ಹಾಗೂ ಆದಾಯ ತೆರಿಗೆ ಪಾವತಿದಾರರ ಮಾಹಿತಿ ಕಲೆಹಾಕಿ ಈಗ 4.30 ಲಕ್ಷ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈ ಬಿಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.
ಹೌದು! ರಾಜ್ಯದಲ್ಲಿ ಈವರೆಗೂ ಮೃತಪಟ್ಟ 1.26 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗಳಿಗೆ ಗೃಹಲಕ್ಷ್ಮಿಯೋಜನೆಯ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಈ ದುರುಪಯೋಗ ತಡೆಯಲು ಸರ್ಕಾರ ಕಡ್ಡಾಯ ಬಯೋಮೆಟ್ರಿಕ್ ಪರಿಶೀಲನೆ ಜಾರಿಗೆ ತಂದಿದೆ.
ಈ ನಡುವೆ ದಾವಣಗೆರೆ, ಹಾವೇರಿ ಮತ್ತು ಕೋಲಾರದಂತಹ ಜಿಲ್ಲೆಗಳಲ್ಲಿ ಮೃತಪಟ್ಟವರ ಖಾತೆಗಳಿಂದ ಈಗಾಗಲೇ ಲಕ್ಷಾಂತರ ರೂ.ಗಳನ್ನು ಸರ್ಕಾರ ವಾಪಸ್ ಪಡೆದಿದೆ. ಈ ಯೋಜನೆಯಲ್ಲಿನ ಅವ್ಯವಹಾರ ಮತ್ತು ಮೃತರ ಪತ್ತೆ ಕುರಿತ ಪ್ರಮುಖ ಮಾಹಿತಿಯನ್ನು ಇನ್ನೂ ಕಲೆಹಾಕುತ್ತಿದೆ.
ರಾಜ್ಯದಲ್ಲಿ ಸುಮಾರು 1,06,922 ಮೃತ ಫಲಾನುಭವಿಗಳಿಗೆ ಪ್ರತಿ ತಿಂಗಳು ₹2,000 ರಂತೆ ಒಟ್ಟು 5.72 ಲಕ್ಷಕ್ಕೂ ಹೆಚ್ಚು ಕಂತುಗಳು ಪಾವತಿಯಾಗಿದ್ದವು. ಅದನ್ನು ಜನನ ಮತ್ತು ಮರಣ ನೋಂದಣಿ ಪೋರ್ಟಲ್ ಹಾಗೂ ಬ್ಯಾಂಕ್ ಅಧಿಕಾರಿಗಳ ಜತೆಗೆಗೂಡಿ ಪರಿಶೀಲನೆ ಮೂಲಕ ಮೃತರನ್ನು ಪತ್ತೆ ಹಚ್ಚಿ, ಅವರ ಖಾತೆಗಳಿಂದ ಹಣವನ್ನು ಸರ್ಕಾರಕ್ಕೆ ಮರಳಿ ಜಮೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಯೋಮೆಟ್ರಿಕ್ ಕಡ್ಡಾಯ: ಮೃತರು ಹಾಗೂ ಆದಾಯ ತೆರಿಗೆ ಪಾವತಿದಾರರು ಯೋಜನೆಯ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ‘ಒನ್-ಟೈಮ್ ಬಯೋಮೆಟ್ರಿಕ್’ ಕಡ್ಡಾಯಗೊಳಿಸಿದೆ.
ಫಲಾನುಭವಿಗಳು ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬೆರಳಚ್ಚು ನೀಡಿ ಖಾತೆ ನವೀಕರಿಸಿಕೊಳ್ಳುವುದು ಕಡ್ಡಾಯವಾಗಿದ್ದು, ತಪ್ಪಿದರೆ ಮುಂದಿನ ಕಂತಿನ ಹಣ ಕಡಿತಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದೆ.
Related









