ಇಂದು 38 ತಿಂಗಳ ಹಿಂಬಾಕಿ, 2024ರ ಜ.1 ರಿಂದ ವೇತನ ಹೆಚ್ಚಳ ಕುರಿತು ಹೈಕೋರ್ಟ್ ಮೆಟ್ಟಿಲ್ಲೇರಿದ KSRTC, BMTCಯ 7 ನೌಕರರು


ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 24ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಳ ಸಂಬಂಧ ಹೈ ಕೋರ್ಟ್ನಲ್ಲಿ 7 ಮಂದಿ ನೌಕರರು ಇಂದು ಅಕ್ಟೋಬರ್ 17ರಂದು ಅರ್ಜಿ ಸಲ್ಲಿಸಿದ್ದಾರೆ.
2025ರ ಮಾರ್ಚ್ 10ರಂದು ಹೈ ಕೋರ್ಟ್ನಲ್ಲಿ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ, ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ನೌಕರರು ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರ ಮೂಲಕ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದ ವಿಚಾರಣೆ ಇದೇ ಅ.23ರಂದು ಇದೆ. ಈ ನಡುವೆ ಇಂದು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿಯ 7 ಮಂದಿ ನೌಕರರು ಈ ವೇತನ ಸಂಬಂಧ ಹೈಕೋರ್ಟ್ ಮೆಟ್ಟಿಲ್ಲೇರಿದ್ದು, ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ನಮಗೆ ನ್ಯಾಯಯುತವಾಗಿ ಕಾಲಕಾಲಕ್ಕೆ ನೀಡಬೇಕಿರುವ ವೇತನ ಸೌಲಭ್ಯ ನೀಡುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ.
ಎಫ್ಆರ್ ನಂ: 31781/2025, 31782/2025 ಮತ್ತು 31783/2025 WP, (LBMTC) ಹಾಗೂ WP, (LKSRTC) ಇದರಡಿ ನೌಕರರು ಸ್ವಯಂಪ್ರೇರಿತವಾಗಿ 38ತಿಂಗಳ ವೇತನ ಹಿಂಬಾಕಿ ಹಾಗೂ 2024ರ ಜ.1ರಿಂದ ವೇತನ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ.
ಶುಕ್ರವಾರವಾದ ಇಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಬಹುಶಃ ಇದೇ ಅ.23ರಂದು ಏಕಸದಸ್ಯ ನ್ಯಾಯಪೀಠದ ಮುಂದೆ ಬರಲಿದೆ ಎಂದು ಹೇಳಲಾಗಿದೆ.
ಇನ್ನೊಂದು ವಿಶೇಷ ಎಂದರೆ ಅಂದೇ (ಅ.23) ಕಳೆದ ಮಾರ್ಚ್ನಲ್ಲಿ ಅರ್ಜಿ ಹಾಕಿರುವ ಪ್ರಕರಣದ ವಿಚಾರಣೆಯೂ ಹೈ ಕೋರ್ಟ್ ಏಕಸದಸ್ಯ ನ್ಯಾಯಪೀಠದ ಮುಂದೆ ಬರಲಿದೆ. ಹೀಗಾಗಿ ನೌಕರರು ಇಂದು ಹಾಕಿರುವ ಸ್ವಯಂಪ್ರೇರಿತ ಅರ್ಜಿಯಿಂದ ಈ ಪ್ರಕರಣಕ್ಕೆ ಆನೆ ಬಲ ಬಂದಂತಾಗಲಿದೆ ಎನ್ನಲಾಗುತ್ತಿದೆ.

ಒಟ್ಟಾರೆ, ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಒಳಜಗಳ ಹಾಗೂ ಬಣ ಬಡಿದಾಟದಿಂದ ಕಳೆದ 5 ವರ್ಷದಿಂದ ನೌಕರರಿಗೆ ಲಕ್ಷಾಂತರ ರೂ.ಗಳ ಆರ್ಥಿಕ ನಷ್ಟ ಉಂಟಾಗುತ್ತಿದೆ. ಇದರಿಂದ ಮಾನಸಿಕವಾಗಿ ನೊಂದಿರುವ ನೌಕರರು ಈ ಸಂಘಟನೆಗಳನ್ನು ಬಿಟ್ಟು ಕೋರ್ಟ್ ಮೂಲಕವೇ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆ.
ಯಾವುದೇ ತೀರ್ಮಾನ ತೆಗೆದುಕೊಳ್ಳದ : ಇನ್ನು ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು 21 ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ತಾರತಮ್ಯತೆಯಿಂದ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ನೌಕರರು ತಮ್ಮ ವೇತನ ಸೌಲಭ್ಯ ಪಡೆಯಲೂ ಹೈ ಕೋರ್ಟ್ ಮೆಟ್ಟಿಲ್ಲೇರಿದ್ದು, ಇಂದು ಕೆಎಸ್ಆರ್ಟಿಸಿಯ ಮೈಸೂರು ಭಾಗದ ಹಾಗೂ ಬಿಎಂಟಿಸಿಯ ಒಟ್ಟು 7 ಮಂದಿ ನೌಕರರು ಅರ್ಜಿ ಸಲ್ಲಿಸಿದ್ದಾರೆ.
ಇದರ ಜತೆಗೆ NWKRTC ಹಾಗೂ KKRTC ನೌಕರರು ಈ ಸಂಬಂಧ ಸ್ವಯಂಪ್ರೇರಿತ ಅರ್ಜಿ ಸಲ್ಲಿಸಿದರೆ ಇನ್ನಷ್ಟು ಬಲ ಬರಲಿದ್ದು, ಕೋರ್ಟ್ ಮೂಲಕವೇ ತಮ್ಮ ಬೇಡಿಕೆ ಈಡೇರಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.
ಪ್ರತಿ ಹಂತದಲ್ಲೂ ನೌಕರ ಪರ ವಕೀಲರು ವಾದ ಮಾಡುವ ವೇಳೆ ಮೇಟೇನ್ ಎಬಿಲಿಟಿ ಇಲ್ಲ ಎಂದು ವಾದಿಸುತ್ತಿದ್ದರು, ಅವರ ವಾದಕ್ಕೆ ಪ್ರತಿವಾದವಾಗಿ ಮೇಟೇನ್ ಎಬಿಲಿಟಿ ಬರಬೇಕು ಎಂದರೆ ಸ್ವಯಪ್ರೇರಿತವಾಗಿ ಅರ್ಜಿಯನ್ನು ಸಲ್ಲಿಸುತ್ತಿಲ್ಲ ಎಂದು ಸಾರಿಗೆ ಸಂಸ್ಥೆ ಪರ ವಕೀಲರು ಹೇಳುತ್ತಿದ್ದರು.
ಹೀಗಾಗಿ 1975ರಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಾಗಿದ್ದ ಎ.ಎನ್.ರಾಯ್ ಹಾಗೂ ನ್ಯಾಯಮೂರ್ತಿಗಳಾಗಿದ್ದ ಕೃಷ್ಣ ಅಯ್ಯಂಗಾರ್ ಹಾಗೂ ಕೆ.ಕೆ. ಮ್ಯಾಥ್ಯೂ ಅವರಿದ್ದ ತ್ರಿಸದಸ್ಯ ನ್ಯಾಯಪೀಠ 770/1975ರ ಪ್ರಕರಣದಲ್ಲಿ ಮೇಟೇನ್ ಎಬಿಲಿಟಿ ಬಗ್ಗೆ ವಿವರವಾದ ತೀರ್ಪು ನೀಡಿದ್ದು. ಈ ತೀರ್ಪನ್ನು ವಿವರವಾಗಿ ಓದಿಕೊಂಡು ಅದರಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಸಾರಿಗೆ ನೌಕರರು ಸ್ವಯಂಪ್ರೇರಿತ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಈ 7ಮಂದಿ ನೌಕರರಷ್ಟೇ ಅಲ್ಲದೆ ಈಗಾಗಲೇ 245 ಮಂದಿ ನೌಕರರು ಕೂಡ ಸ್ವಯಂ ಪ್ರೇರಿತ ಅರ್ಜಿ ಸಲ್ಲಿಸುವುದಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು ಹಂತಹಂತವಾಗಿ ಹೈಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಹಲವಾರು ವಕೀಲರನ್ನು ಸಂಪರ್ಕಿಸಿದ್ದಾರೆ.
Related
