- ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರ ಸರ್ಪಗಾವಲು
ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಒಂದರ ಮೂಲಕ ಜನಪ್ರಿಯವಾಗಿರುವ ಸಾಗರದ ಗಾಯಕಿ ಸುಹಾನಾ ಸೈಯ್ಯದ್ ಹಾಗೂ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶುಕ್ರವಾರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾದ ಈ ಜೋಡಿಯ ಧರ್ಮ ಬೇರೆ ಬೇರೆಯಾಗಿದ್ದರೂ ಧೈರ್ಯವಾಗಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರ ಸರ್ಪಗಾವಲಿನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರ ಸರಳ ವಿವಾಹಕ್ಕೆ ಹಲವಾರು ಗಣ್ಯರು ಸಾಕ್ಷಿಯಾದರು.
ಇನ್ನು ಹಿಜಬ್ ಧರಿಸಿ ಹಿಂದೂ ಭಜನೆಯನ್ನು ಸುಹಾನ ಹಾಡುವಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಅದೆಲ್ಲವನ್ನು ಮೀರಿ ಈಗ ಹಿಂದೂ ಧರ್ಮದ ಯುವಕನನ್ನೇ ಪ್ರೀತಿಸಿ ಮದುವೆಯಾಗಿರುವುದು ಖುಷಿಯ ವಿಚಾರವಾಗಿದೆ.
Related

Megha








