KSRTC ಶಿರಾ: ಬಸ್ ಡೋರ್ ಕಿತ್ತುಹಾಕಿ ಡ್ಯೂಟಿ ನಿರತ ಚಾಲಕ ಮೇಲೆ ಹಲ್ಲೆ- ಆದರೂ FIR ದಾಖಲಿಸದ ಪೊಲೀಸರು ಹೇಳಿದ್ದೇನು !?


ಶಿರಾ: ಹೆಂಡತಿ ಮಕ್ಕಳ ಜತೆಗೆ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಬೇಕಾದ ಸಮಯದಲ್ಲಿ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಮಸ್ತ ಅಧಿಕಾರಿಗಳು /ನೌಕರರನ್ನು ಶ್ಲಾಘಿಸಬೇಕಾದ ಸರ್ಕಾರ ಅವರ ಬಗ್ಗೆ ಅಸಡ್ಡೆ ತೋರುತ್ತಿರುವುದು ಭಾರಿ ಖೇದಕರ ಸಂಗತಿ.
ಹಬ್ಬ ಹರಿದಿನಗಳಲ್ಲೂ ಕುಟುಂಬದಿಂದ ದೂರವಾಗಿ ಕಾಯಕದಲ್ಲಿ ನಿರತರಾಗಿರುವ ಚಾಲನಾ ಸಿಬ್ಬಂದಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದರೂ ಅಂಥ ಆರೋಪಿಗಳ ಪರವಾಗಿ ನಿಲ್ಲುವ ರಾಜಕಾರಣಿಗಳಿಂದ ಮನಸ್ಸಿಗೆ ಭಾರಿ ನೋವಾಗುತ್ತದೆ.
ಶಿರಾ ಬಸ್ ನಿಲ್ದಾಣದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಬಸ್‌ನ ಚಾಲಕರ ಡೋರ್‌ಅನ್ನು ಕಿತ್ತುಹಾಕಿ ಅನ್ಯಕೋಮಿನ ವ್ಯಕ್ತಿಯೊಬ್ಬ ಭಾರಿ ದುರ್ವತನೆ ತೋರಿರುವುದು ಸೋಮವಾರ ನಡೆದಿದೆ.
ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಘಟನೆ ಏನು?: ಸಂಸ್ಥೆಯ ಶಿರಾ ಘಟಕ ಬಸ್ ನಿಲ್ದಾಣಕ್ಕೆ ಬಂದಿದೆ ಈ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬ ಬಂದು ಈ ಬಸ್ ಎಲ್ಲಿಗೆ ಹೋಗುತ್ತದೆ ಎಂದು ಚಾಲಕರನ್ನು ವಿಚಾರಿಸಿದ್ದಾನೆ. ಆಗ ಚಾಲಕ ಬಸ್ ಎಲ್ಲಿಗೆ ಹೋಗುತ್ತದೆ ಅಂತ ಬೋರ್ಡ್ ಹಾಕಿದೆ ನೋಡಿ ಎಂದು ಹೇಳಿದ್ದಾರೆ. ಅಷ್ಟಕ್ಕೆ ಈ ಕಿಡಿಗೇಡಿ ಪ್ರಯಾಣಿಕ ಚಾಲಕನ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಚಾಲಕರ ಡೋರ್ ಕಿತ್ತು ಬೀಸಾಕಿದ್ದಾನೆ.
ಈ ಎಲ್ಲವನ್ನು ಗಮನಿಸಿದ ಪ್ರಯಾಣಿಕರು ಘಟನೆಯನ್ನು ವಿಡಿಯೋ ಮಾಡಿದ್ದಾರೆ. ಬಳಿಕ ಚಾಲಕ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾರೆ. ಆದರೆ, ಇಲ್ಲಿನ ಸ್ಥಳೀಯ ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯೊಬ್ಬರು ಠಾಣೆಗೆ ಫೋನ್ ಮಾಡಿ ದೂರು ದಾಖಲಿಸಿಕೊಳ್ಳಬೇಡ, ಜತೆಗೆ ಹಲ್ಲೆ ಮಾಡಿರುವ ವ್ಯಕ್ತಿಯ ವಿರುದ್ಧ ಎಫ್‌ಐಆರ್ ಹಾಕಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಶಿರಾದ ಈ ಹಿರಿಯ ರಾಜಕಾರಣಿಯೇ ದೂರು ತೆಗೆದುಕೊಳ್ಳಬೇಡ ಎಂದು ಹೇಳಿದ ಮೇಲೆ ಪೊಲೀಸರು ಕೂಡ ದೂರು ತೆಗೆದುಕೊಳ್ಳದೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಚಾಲಕರಿಗೇ ಬುದ್ಧಿ ಹೇಳಿ ವಾಪಸ್ ಕಳಿಸಿದ್ದಾರಂತೆ.
ಸರ್ಕಾರಿ ಬಸ್‌ನ ಡೋರ್ ಕಿತ್ತುಹಾಕಿ ಡ್ಯೂಟಿ ಮೇಲೆ ಇದ್ದ ಸರ್ಕಾರಿ ನೌಕರರೊಬ್ಬರ ಮೇಲೆ ಹಲ್ಲೆ ಮಾಡಿದರೂ ಕೂಡ ಅಂತ ವ್ಯಕ್ತಿಯ ವಿರುದ್ಧ ಈ ಕಾಂಗ್ರೆಸ್ ಸರ್ಕಾರ ಎಫ್‌ಐಆರ್ ದಾಖಲಿಸದಂತೆ ನೋಡಿಕೊಳ್ಳುತ್ತದೆ ಎಂದರೆ ಎಂಥ ಸರ್ಕಾರ ರಾಜ್ಯದಲ್ಲಿದೆ ಎಂಬುವುದು ಜನಸಾಮಾನ್ಯರಿಗೆ ಗೊತ್ತಾಗುವುದಿಲ್ಲವೇ?
ಇನ್ನು ಹಲ್ಲೆಗೊಳಗಾದ ಕೆಎಸ್‌ಆರ್‌ಟಿಸಿ ಸಂಸ್ಥೆಯ ಬಸ್ ಚಾಲಕನಿಗೇ ಸಂಸ್ಥೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ. ಅಂದರೆ ಇಲ್ಲಿ ಅನ್ಯಕೋಮಿನ ವ್ಯಕ್ತಿ ಕಾನೂನು ಬಾಹಿರವಾಗಿ ನಡೆದುಕೊಂಡರು ಆತನ ವಿರುದ್ಧ ದೂರು ದಾಖಲಿಸಲಾಗದ ಪರಿಸ್ಥಿತಿ ರಾಜ್ಯದಲ್ಲಿ ಇರುವುದು ದುರಂತವಲ್ಲದೆ ಮತ್ತೇನು?
Related
