ಬೆಂಗಳೂರು: ಮಹಾಮಾರಿ ಕೊರೊನಾ ಎಲ್ಲಾ ಸ್ಥಳಗನ್ನು ಇತ್ತೀಚೆಗೆ ವೇಗವಾಗಿ ಆವರಿಕೊಳ್ಳುತ್ತಿದ್ದು, ವಿಪ್ರೋ ಸಂಸ್ಥೆಯ ಐದು ಮಂದಿ ನೌಕರರನ್ನು ಸುತ್ತಿಕೊಂಡಿದೆ.
ವಿಪ್ರೊದ ಐವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದ್ದು, ಇದರಿಂದ ಸಾವಿರಾರು ಮಂದಿ ನೌಕರರು ಕೆಲಸ ಮಾಡುವ ಈ ಸಂಸ್ಥೆಯಲ್ಲಿ ಆತಂಕ ಮನೆ ಮಾಡಿದೆ.
ಇನ್ನು ಪಾಸಿಟಿವ್ ಬಂದಿರುವ ಐದು ಮಂದಿ ನೌಕರರ ಪ್ರಥಮ ಸಂಪರ್ಕದಲ್ಲಿದ್ದವರನ್ನು ಓಂ ಕ್ವಾರಂಟೈನ್ ಮಾಡಲಾಗಿದ್ದು, ಅವರ ಕಟುಂಬದವನ್ನು ಕ್ವಾರಂಟೈನ್ ಮಾಡಲಾಗಿದೆ.
ಇದರಿಂದ ವಿಪ್ರೊ ಇತರ ನೌಕರರಲ್ಲೂ ಆಂತಕ ಶುರುವಾಗಿದೆ. ಹೀಗಾಗಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ವಿಪ್ರೋ ಟೆಕ್ನಾಲಜೀಸ್ ಎಂಬ ಹೆಸರಿನಲ್ಲಿ 1980ರಲ್ಲಿ ಆರಂಭಗೊಂಡ ಸಾಫ್ಟ್‌ವೇರ್ ಕಂಪೆನಿ ಇಂದು ದೇಶದ ಎರಡನೇ ಅತೀ ದೊಡ್ಡ ಸಾಫ್ಟ್‌ವೇರ್ ಕಂಪೆನಿಯಾಗಿ ಹೊರಹೊಮ್ಮಿದೆ. ವಿಶ್ವದ 54 ದೇಶಗಳಲ್ಲಿ ತನ್ನ ಕಚೇರಿಯನ್ನು ತೆರೆದಿರುವ ವಿಪ್ರೋದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಸಾಫ್ಟ್‌ವೇರ್ ಜೊತೆಗೆ ವಿಪ್ರೋ ಕಂಪೆನಿ ಗ್ರಾಹಕರ ಮನೆ ಬಳಕೆ ವಸ್ತುಗಳು, ಹೆಲ್ತ್‌ಕೇರ್ ಮತ್ತು ಮೂಲಸೌಕರ್ಯ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಿದೆ.
ವಿಪ್ರೋದ ಮೊದಲ ಸೂರ್ಯಕಾಂತಿ ಎಣ್ಣೆ ಕಂಪೆನಿಯ ನೆನಪಿಗಾಗಿ ವಿಪ್ರೋ ಲೋಗೋದಲ್ಲಿ ಇಂದಿಗೂ ಸೂರ್ಯಕಾಂತಿಯ ಹೂವಿರುವುದನ್ನು ನೀವು ನೋಡಿರಬಹುದು.