NEWSನಮ್ಮರಾಜ್ಯಲೇಖನಗಳು

KSRTC: “ಖಾಸಗಿ ಸಾರಿಗೆ ಲಾಭದತ್ತ”- ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳು ನಷ್ಟದತ್ತ..!!!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಸಂಸ್ಥೆಯಲ್ಲಿ ಆದಾಯದ ಕೊರತೆ ಅಂತ ಹೇಳುವ ಎಲ್ಲರಿಗೂ ನಿತ್ಯ ಅಧಿಕಾರಿಗಳ ಕಿರುಕುಳ ಅನುಭವಿಸುತ್ತಿರುವ ನಿಮ್ಮ ನೊಂದ ಸಾರಿಗೆ ನೌಕರರ ಒಂದು ಮನವಿ.

ಒಬ್ಬ ವ್ಯಕ್ತಿ ಒಂದು ವಾಹನವನ್ನು ಖರೀದಿ ಮಾಡಿ ಆ ಒಂದು ವಾಹನದಿಂದ ಇವತ್ತು ಸಾವಿರಾರು ವಾಹನಗಳ ಮಾಲೀಕರಾಗಿ ಬೆಳೆದಿದ್ದಾರೆ. ನಮಗೂ ಹೆಮ್ಮೆಯಿದೆ. ಆ ಮಹಾನ್‌ ವ್ಯಕ್ತಿ ಎಂದರೆ ವಿಜಯ ಸಂಕೇಶ್ವರ ಅವರು.

ಅವರ ಕಂಪನಿಯಲ್ಲಿ ಯಾವುದೇ ಐಎಎಸ್ ಅಥವಾ ಐಪಿಎಸ್ ಅದಿಕಾರಿಗಳಿಲ್ಲ. ಆದರೂ ಇವತ್ತು ಸಾರಿಗೆ ಕ್ಷೇತ್ರಗಳಲ್ಲಿ ಗಣನೀಯ ಲಾಭದತ್ತ ನಡೆಯುತ್ತಿದೆ. ಅಲ್ಲಿ ದುಡಿಯುವರು ನಮಂತ ಚಾಲಕ ತಾಂತ್ರಿಕ ಸಿಬ್ಬಂದಿಗಳೆ. ಇನ್ನು ಅವರ ವೇತನ ತಿಂಗಳಿಗೆ 60 ಸಾವಿರದಿಂದ 70 ಸಾವಿರ ರೂ.ಗಳವರೆಗೂ ಇದೆ.

ಆದರೆ ನಮ್ಮ ಸಾರಿಗೆ ಸಂಸ್ಥೆಯಲ್ಲಿ ಸಂಸ್ಥೆಯನ್ನು ಮುನ್ನಡೆಸಲು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಇದ್ದರೂ ಸಹ ನಮ್ಮ ಸಂಸ್ಥೆ ಲಾಸ್‌ನಲ್ಲಿ ನಡೆಯಲು ಕಾರಣವೇನು? ಅಲ್ಲಿ ದುಡಿಯುವ ನೌಕರಿಗೆ ನಮಗಿಂತ ಹೆಚ್ಚಿನ ವೇತನ ಸಿಗುತ್ತಿದೆ.

ನಮಗೆ ಅವರಿಗಿಂತ ಕಡಿಮೆ ವೇತನ. ಒಂದು ಖಾಸಗಿ ಸಂಸ್ಥೆ ಅಲ್ಲಿರುವ ಎಲ್ಲ ನೌಕರಿಗೆ ಅನೇಕ ಸೌಲಭ್ಯವನ್ನೂ ನೀಡುತ್ತಿದೆ. ಆದರೆ ನಮ್ಮ ಸಾರಿಗೆ ಒಂದು ಸರ್ಕಾರಿ ಅಂಗ ಸಂಸ್ಥೆ ಆಗಿ ನಮಗ್ಯಾಕೆ ಈ ಅವ್ಯವಸ್ಥೆ ಹೇಳಿ ಸಹೋದರರೆ?.

ಇಲ್ಲಿ ಇರುವ ಕೆಲವೊಂದು ಭ್ರಷ್ಟ ಅಧಿಕಾರಿಗಳಿಂದ ಅವರ ಅವೈಜ್ಞಾನಿಕ ನಿರ್ಧಾರಗಳಿಂದ ಹಾಗೂ ಇಲ್ಲಿರುವ ಕೆಲವೊಂದು ಸಂಘಟನೆ ನಿರ್ಧಾರದಿಂದ ಈ ಸ್ಥಿತಿಗೆ ಬರಲು ಕಾರಣವಾಗಿದೆ. ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ ನಮ್ಮ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯುತಿತ್ತು.

ಇನ್ನು ವಿಜಯ ಸಂಕೇಶ್ವರ ಅವರು ನಡೆಸುತ್ತಿರುವ ಸಂಸ್ಥೆಗೆ ಯಾವುದೆ ಸರ್ಕಾರದ ಸೌಲಭ್ಯಗಳಿಲ್ಲ. ಆದರೆ ನಮ್ಮ ಸಂಸ್ಥೆಗೆ ಸರ್ಕಾರದಿಂದ ಕೆಲವೊಂದು ಆರ್ಥಿಕ ಸೌಲಭ್ಯ ಸಿಕ್ಕರೂ ನಿಗಮಗಳನ್ನು ಲಾಭದತ್ತ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಕಾರಣ ಇಲ್ಲಿ ಸೃಷ್ಟಿಯಾಗಿರುವ ಬಕಾಸುರರನ್ನು ಸಂಸ್ಥೆಯಿಂದ ಹೊರದಬ್ಬಬೇಕಾಗಿದೆ. ಜತೆಗೆ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುವಂತ ಕೆಲವು ಸಂಘಟನೆ ಮುಖಂಡರಿಗೂ ಗೇಟ್‌ಪಾಸ್‌ ಕೊಡಬೇಕಿದೆ.

ಈ ಕೆಟ್ಟ ಹುಳುಗಳು ಇರುವರೆಗೂ ನಮ್ಮ ಸಂಸ್ಥೆ ಹಾಗೂ ಇಲ್ಲಿ ದುಡಿಯುವ ಕೆಳ ಹಂತದ ನೌಕರರು ಯಾವತ್ತು ಮೇಲೆ ಬರಲು ಸಾಧ್ಯವಿಲ್ಲ. ಕೆಲವು ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ನೌಕರನ್ನು ಬೀದಿಪಾಲು ಮಾಡಿದ್ದೂ ಈಗ ನಾವೆ ಸಾಚಾ ಅನ್ನುವ ರೀತಿಯಲ್ಲಿ, ಎಲ್ಲ ನಾವೆ ಮಾಡಿದ್ದೂ ಸಂಸ್ಥೆ ನಾವೆ ಉಳಿಸಿಕೊಂಡು ಬಂದಿದ್ದು ಅಂತ ಹೇಳುತ್ತಿದ್ದಾರೆ.

ಈ ರೀತಿ ಹೇಳುತ್ತಿರುವ ನೀವು ಸರಿಯಾದ ಮಾರ್ಗದರ್ಶನ ನೀಡಿದ್ದರೆ ಇವತ್ತು ಈ ಸ್ಥಿತಿಗೆ ಬರುತ್ತಿರಲಿಲ್ಲ. ನಿಮ್ಮ ಕೆಟ್ಟ ಸಲಹೆಗಳಿಂದ ಹಾಗೂ ಭ್ರಷ್ಟ ಅಧಿಕಾರಿಗಳಿಂದ ಇಲ್ಲಿಗೆ ಬಂದು ನಿಂತಿದೆ. ಶಕ್ತಿ ಯೋಜನೆಯಿಂದ ನಾಲ್ಕೂ ಸಾರಿಗೆ ನಿಗಮಗಳ ಲಾಭದಲ್ಲೇ ಇವೆ ಆದರೆ ಕಳೆದ 5 ವರ್ಷಗಳಿಂದ ನೌಕರರಿಗೆ ಲಕ್ಷಾಂತರ ರೂಪಾಯಿ ಹಿಂಬಾಕಿ ಕೊಡದೆ ಕಷ್ಟದಲ್ಲೇ ಜೀವನ ನಡೆಸುವ ಸ್ಥಿತಿಗೆ ತಂದಿದ್ದೀರಿ. ಇದಕ್ಕೆ ಯಾರು ಹೊಣೆ?

ಸಾರಿಗೆ ಸಹೋದರರೆ ಇನ್ನಾದರೂ ಎಚ್ಚೆತುಕೊಳ್ಳಿ ಈಗ ಹೇಳುತ್ತಿರುವುದು ನೀವು ಮುಷ್ಕರ ಮಾಡಿ ಅರ್ಧ ವೇತನ ಕೊಡಿಸುತ್ತೀರಿ ಎಂದು. ಆದರೆ ಮೊದಲಿನಿಂದಲೂ ಸರಿಯಾದ ಮಾರ್ಗದಲ್ಲಿ ಬಂದ್ದಿದರೆ ಈವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ನಿಮ್ಮ ಮನಸ್ಥಿತಿಯಿಂದ ಹೊರ ಬನ್ನಿ. ನಿಮ್ಮ ಹಕ್ಕುಗಳನ್ನು ಪಡೆಲು ಮುಂದಾಗಿ ಈ ಬಗ್ಗೆ ಯೋಚನೆ ಮಾಡಿ ಸ್ನೇಹಿತರೆ.
l ಇಂತಿ ನೊಂದ ಸಾರಿಗೆ ನೌಕರರು

Megha
the authorMegha

Leave a Reply

error: Content is protected !!