ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ಸಂಭವಿಸಿದ ಅನಿಲ ಸೋರಿಕೆಯಿಂದ 12 ಮಂದಿಯ ಮೃತಪಟ್ಟಿದ್ದ ಪ್ರಕರಣ ಸಂಬಂಧ ಎಲ್‌ಜಿ ಪಾಲಿಮರ್ಸ್ ನ ಎಂಡಿ, ಸಿಇಒ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ.
ವಿಷಾನಿಲಕ್ಕೆ ಸಂಬಂಧಪಟ್ಟ ಅಂಶಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಕರ್ತವ್ಯ ಲೋಪ ಎಸಗಿದ್ದ ಆರೋಪದ ಅಡಿಯಲ್ಲಿ 12 ಮಂದಿಯನ್ನು ಜು.6 ರಂದು ರಾತ್ರಿ ಬಂಧಿಸಲಾಗಿದೆ. ಜತೆಗೆ ಆಂಧ್ರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಫ್ಯಾಕ್ಟರಿ ಇಲಾಖೆಗಳ ಅಧಿಕಾರಗಳನ್ನೂ ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಇತರರ ಜೀವಕ್ಕೇ ಹಾನಿಯಾಗಬಹುದೆಂದು ಗೊತ್ತಿದ್ದರೂ ಸಹ ಈ ಎಲ್ಲಾ ಆರೋಪಿಗಳ ಬೇಜವಾಬ್ದಾರಿತನದಿಂದ ಎಂ 6 ಸ್ಟೈರೀನ್ ಶೇಖರಣಾ ಟ್ಯಾಂಕ್ ನಲ್ಲಿ ಈ ಅವಗಢ ಸಂಭವಿಸಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಆರ್.ಕೆ. ಮೀನಾ ಹೇಳಿದ್ದಾರೆ.
ಸಮರ್ಪಕ ಕೂಲಿಂಗ್ ವ್ಯವಸ್ಥೆ ಇಲ್ಲದ, ಸರ್ಕ್ಯುಲೇಷನ್ ಸಿಸ್ಟಮ್ ರಹಿತ, ಅಸಮರ್ಪಕ ಅಳತೆ ನಿಯತಾಂಕಗಳು, ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಹೊಂದಿಲ್ಲದ ಎಂ6 ಟ್ಯಾಂಕ್‌ಕಳಪೆಯಾಗಿರಿಸಿದ್ದೇ ಈ ಅವಘಡಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಎಲ್‌ಜಿ ಪಾಲಿಮರ್ಸ್ ನ ತಾಂತ್ರಿಕ ನಿರ್ದೇಶಕ ಡಿಎಸ್ ಕಿಮ್, ಪಿಟ್ಚುಕ ಪೂರ್ಣ ಚಂದ್ರ ಮೋಹನ್ ರಾವ್, ಸಂಸ್ಥೆಯ ಹೆಚ್ಚುವರಿ ನಿರ್ದೇಶಕರು ಸೇರಿ ಎಚ್ಒಡಿ, ಎಸ್ಎಂಎಚ್ ಇನ್ ಚಾರ್ಜ್ ಶ್ರೀನಿವಾಸ್ ಕಿರಣ್ ಕುಮಾರ್, ಟೀಮ್ ಲೀಡರ್ (ಪ್ರೊಡಕ್ಷನ್) ರಾಜು ಸತ್ಯನಾರಾಣ, ಇಂಜಿನಿಯರ್ ಗಳಾದ ಚೆಡುಂಪುಪತಿ ಚಂದ್ರಶೇಖರ್, ಕೆ ಚಕ್ರಪಾಣಿ, ಕೆ. ಗೌರಿ ಶಂಕರ, ನಾಗೇಂದ್ರ ರಾಮು, ಆಪರೇಟರ್ ಮುದ್ದು ರಾಜೇಶ್, ಪಿ.ಬಾಲಾಜಿ, ನೈಟ್ ಡ್ಯೂಟಿ ಆಫೀಸರ್, ಆಪರೇಷನ್ಸ್, ಜಿಪಿಪಿಎಸ್ ನ ಎಸ್. ಅಚ್ಯುತ್, ನೈಟ್ ಶಿಫ್ಟ್ ನ ಸೇಫ್ಟಿ ಆಫೀಸರ್ ಕೆ.ವೆಂಕಟ ನರಸಿಂಹ ರಮೇಶ್ ಪಟ್ನಾಯಕ್ ಬಂಧನಕ್ಕೊಳಗಾದ ಸಂಸ್ಥೆ ಉದ್ಯೋಗಿಗಳಾಗಿದ್ದು, ಕೋರ್ಟ್ ಎದುರು ಹಾಜರುಪಡಿಸಲಾಗಿದೆ.
Bejavabhdari mandi