ಬೆಂಗಳೂರು: ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರನ್ನು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ತಮಾದಿಂದ ಬಳಲುತ್ತಿರುವ ಜಯಂತಿ ಅಮ್ಮ ಅವರನ್ನು ಪುತ್ರ ಕೃಷ್ಣ ಕುಮಾರ್ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯ ಹಿರಿಯ ವೈದ್ಯ ಡಾ. ಕೆ.ಎಸ್. ಸತೀಶ್ ಮತ್ತು ತಂಡ ಅಮ್ಮ ಅವರನ್ನು ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದೆ.
ಅಮ್ಮ ಅವರು ಎಚ್ಚರದಿಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಎರಡು ವರ್ಷದ ಹಿಂದೆ ಇದೇ ರೀತಿ ಅಸ್ತಮಾ ಉಲ್ಬಣಿಸಿ ಉಸಿರಾಟದ ತೊಂದರೆ ಎದುರಾಗಿತ್ತು. ಆಗಲೂ ಅವರನ್ನು ವಿಕ್ರಮ್ ಆಸ್ಪತ್ರೆಯಲ್ಲೇ ಡಾ. ಸತೀಶ್ ಚಿಕಿತ್ಸೆ ನೀಡಿದ್ದರು.
Abhinaya sarade begane gunamukharagali