NEWSದೇಶ-ವಿದೇಶನಮ್ಮರಾಜ್ಯವಿಜ್ಞಾನ

ಯುವ ವಿಜ್ಞಾನಿ ಡ್ರೋನ್‌ ಪ್ರತಾಪ್‌ ಮೇಲೆ ಒಂದು ಡಿಜಿಟಲ್‌ ಮೀಡಿಯಾಗೆ  ಅನುಮಾನ

ವಿಜಯಪಥ ಸಮಗ್ರ ಸುದ್ದಿ

ನನಗೆ ಯಾರ ಸಹಾಯವು ಇಲ್ಲ. ಈ ಮಾಧ್ಯಮ  (OPIndia)ದಲ್ಲಿ ನನ್ನ ಬಗ್ಗೆ ಹೀಗೇಕೆ ಬಂದಿದೆ ಎಂಬುವುದು ತಿಳಿಯುತ್ತಿಲ್ಲ.

ಆದರೆ, ನಾನು ಪಡೆದಿರುವ ಪ್ರಶಸ್ತಿಗಳ ಬಗ್ಗೆ ನನಗೆ ಅನುಮಾನವಿಲ್ಲ.

ಅವುಗಳನ್ನು 4-5ದಿನದಲ್ಲೇ ಸುದ್ದಿಗೋಷ್ಠಿ ಮೂಲಕ ಬಹಿರಂಗಪಡಿಸುತ್ತೇನೆ

ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳುವ ಬದಲು ಇರುವ ಸತ್ಯವನ್ನು ಬಿಚ್ಚಿಡುತ್ತೇನೆ

ಸುವರ್ಣ ನ್ಯೂಸ್‌ನಲ್ಲಿ ಡ್ರೋನ್‌ ಪ್ರತಾಪ್‌  ಹೇಳಿಕೆ

ಷ್ಟು ದಿನ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಕೆಲ ವರ್ಷಗಳಿಂದ ಮುಖ್ಯಮಂತ್ರಿಗಳಿಂದ ಹಿಡಿದು ವಿವಿಧ ದೊಡ್ಡ ದೊಡ್ಡ ಮಠದ ಸ್ವಾಮೀಜಿಗಳಿಂದಲೂ ಸಹ ಸನ್ಮಾನ ಸ್ವೀಕರಿಸಿದ ಡ್ರೋನ್ ಪ್ರತಾಪ ಹೇಳಿದ್ದೆಲ್ಲಾ ಬರಿ ಸುಳ್ಳು ಎಂದು  ಈ ಬಗ್ಗೆ ರಾಷ್ಟ್ರೀಯ ಮಟ್ಟದ ವಾಹಿನಿಯೊಂದು ಸತ್ಯದ ಬೆನ್ನಟ್ಟಿ ಹೋಗಿ ಸಂಪೂರ್ಣ ಮಾಹಿತಿ ಕಲೆಹಾಕಿದ್ದು ಆ ಪ್ರತಾಪ್‌ ವಿಜ್ಞಾನಿಯೇ ಅಲ್ಲ ಎಂದು ಹೇಳಿದೆ.

ಡ್ರೋನ್‌ ಪ್ರತಾಪ್ ಎಂದ ಕೂಡಲೇ ತಾಯಿಯ ತಾಳಿ ಅಡವಿಟ್ಟು ಡ್ರೋನ್ ತಯಾರಿಸಿ ವಿದೇಶಗಳಲ್ಲಿಯೂ ಹೆಸರು ಮಾಡಿದ.. ಹೀಗೆ ಇನ್ನು ಅನೇಕ ವಿಚಾರಗಳು ಒಂದು ಕ್ಷಣ ತಲೆಯಲ್ಲಿ ಬರುತ್ತವೆ.. ನಾವೆಲ್ಲಾ ಯಾವ ಮಟ್ಟಕ್ಕೆ ಆತ ಹೇಳಿರುವ ಸುಳ್ಳನ್ನೆಲ್ಲಾ ನಂಬಿದ್ದೇವೆ ಎಂದರೆ ನಾವೆಂತ ಮೂರ್ಖರು ಅನಿಸುತ್ತದೆ.. ಈ ಬಗ್ಗೆ OpIndia ವಾಹಿನಿ ಸಂಪೂರ್ಣ ವಾಗಿ ಆತನ ಬಗ್ಗೆ ಸತ್ಯಗಳನ್ನು ಹೆಕ್ಕಿ ತೆಗೆದಿರುವುದಾಗಿ ಬರೆದು ಕೊಂಡಿದೆ. ಆದರೆ ಇದು ಎಷ್ಟು ಸತ್ಯ ಎಂಬುದನ್ನು ಈಗ ಪ್ರತಾಪ್‌ ಹೇಳಬೇಕಿದೆ.

ಡ್ರೋನ್ ಪ್ರತಾಪ್ ಹೇಳುವಂತೆ ಆತ 600 ಡ್ರೋನ್ ಗಳನ್ನು ತಯಾರಿಸಿಯೇ ಇಲ್ಲ‌. ತಯಾರಿಸಿದ್ದರೆ ಆತನ ಬಳಿ ಆ ಎಲ್ಲಾ ಡ್ರೋನ್ ಗಳ ವೀಡಿಯೋ ಕೂಡ ಇಲ್ಲ.ಜತೆಗೆ ಫೋಟೋಗಳು ಸಹ ಇಲ್ಲ.. ಇನ್ನು ಆತ ಹೇಳಿದಂತೆ ಮಿಕ್ಸಿಯಲ್ಲಿನ ಮೋಟಾರ್ ನಿಂದ ಡ್ರೋನ್ ತಯಾರಿಸಲು ಸಾಧ್ಯವೇ ಇಲ್ಲ ಎಂದು  ಹೇಳಿದೆ.

ಆದರೆ ಆ ಬಗ್ಗೆ ಪ್ರತಾಪ್‌ ಕನ್ನಡದ ಸುದ್ದಿ ವಾಹಿನಿ ಸುವರ್ಣ ನ್ಯೂಸ್‌ ಜತೆ ಕೆಲವೊಂದನ್ನು ಇಂದು ಮಧ್ಯಾಹ್ನ ಹಂಚಿಕೊಂಡಿದ್ದಾರೆ. ಈ ಮಾಧ್ಯಮ (OpIndia ) ನನ್ನ ಬಗ್ಗೆ ಹೀಗೇಕೆ ಬರೆದಿದೆ ಎಂದು ನನಗೆ ಗೊತ್ತಿಲ್ಲ. ಮತ್ತೆ ಅದು ಬರೆದಿರುವುದೆಲ್ಲ ಸುಳ್ಳು ಆ ಬಗ್ಗೆ ನಾಲ್ಕೈದು ದಿನದಲ್ಲಿ ಸುದ್ದಿಗೋಷ್ಠಿಯಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು 2018 ರಲ್ಲಿ ಜರ್ಮನಿಯಲ್ಲಿ ಅಲ್ಬರ್ಟ್ ಐನ್‍ಸ್ಟೈನ್ ಗೋಲ್ಡ್ ಮೆಡಲ್. ಅಂತಾರಾಷ್ಟ್ರೀಯ ಡ್ರೋನ್ ಎಕ್ಸ್ಪೋ ದಲ್ಲಿ ಗೋಲ್ಡ್ ಮೆಡಲ್.. CeBit ನಲ್ಲಿ ಮೊದಲ ಬಹುಮಾನ ಹಾಗೂ 2017 ರ ಜಪಾನ್ ನಲ್ಲಿ‌ ನಡೆದ ಅಂತರಾಷ್ಟ್ರೀಯ ರೋಬೋಟಿಕ್ ಎಕ್ಸಿಬಿಷನ್ ನಲ್ಲಿ ಚಿನ್ನದ ಪದಕ.. ಹೀಗೆ ಹಲವಾರು ಪ್ರಶಸ್ತಿ ಆತನಿಗೆ ಬಂದಿದೆ ಎಂದು ಹೇಳಿದೆ.

ಅಷ್ಟೇ ಅಲ್ಲ ಇದೆಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಈತನ ಹೆಸರಿನಲ್ಲಿ ಆರೀತಿಯ ಯಾವುದೇ ಅಂತಾರಾಷ್ಟ್ರೀಯ ಪ್ರಶಸ್ತಿ ದಾಖಲಾಗಿಲ್ಲ.. ಜೊತೆಗೆ ceBit ಅನ್ನೋದು ಒಂದು ಕಂಪ್ಯೂಟರ್ ಎಕ್ಸ್ಪೋ.. ಜರ್ಮನಿಯ ಹ್ಯಾನೋವರ್ ನಲ್ಲಿ‌ ನಡೆದಿದೆ.. ಆದರೆ ಆ ಕಾರ್ಯಕ್ರಮದಲ್ಲಿ ಯಾವುದೇ ಪ್ರತ್ಯೇಕವಾದ ಡ್ರೋನ್ ಎಕ್ಸ್ಪೋ ನಡೆದಿಲ್ಲ.. ಆದ್ದರಿಂದ ಆತ ಅದ್ಯಾವ ಎಕ್ಸ್ಪೋ ದಲ್ಲಿ ಭಾಗವಹಿಸಿ ಅದ್ಯಾವ ಮೆಡಲ್ ಪಡೆದುಕೊಂಡನೋ ತಿಳಿದಿಲ್ಲ ಎಂದು ಹೇಳಿದೆ.

ಇನ್ನು ಬಹುಮುಖ್ಯವಾಗಿ Cebit ನಲ್ಲಿ ವೈಯಕ್ತಿಕವಾಗಿ ಈತನ ಹೆಸರಲ್ಲಿ ಯಾವುದೇ ಬಹುಮಾನವೂ ಇಲ್ಲ.. ಅಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿರುವುದೆಲ್ಲಾ ಮೊಟೋರೋಲಾ, McAcFee ಈ ರೀತಿಯ ಕಂಪನಿಗಳಷ್ಟೇ.. ಯಾವುದೇ ವೈಯಕ್ತಿಕ ಬಹುಮಾನವೂ ಆ ಕಾರ್ಯಕ್ರಮದಲ್ಲಿ ಇರಲಿಲ್ಲ ಎಂದು ವಿವರಿಸಿದೆ. ಆದರೆ ಅದಕ್ಕೆ ಪ್ರತಾಪ್‌ ಹೇಳುವುದು ಅವರು ಯಾವುದರ ಬಗ್ಗೆ ತಿಳಿದುಕೊಂಡರೋ ಗೊತ್ತಿಲ್ಲ. ಇನ್ನು ನಾನು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿರುವ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದ್ದಾರೆ.

ಇನ್ನು ಆಲ್ಬರ್ಟ್ ಐನ್ಸ್ಟೈನ್ ಅವಾರ್ಡ್ ಕೂಡ ಇಲ್ಲ.. ಎಲ್ಲವೂ ಶುದ್ಧ ಸುಳ್ಳಾಗಿದೆ.. ದಾಖಲೆಗಳ ಪ್ರಕಾರ ಸತ್ಯ ಸಂಗತಿ ಎಂದರೆ ಅದು ಪ್ರತಾಪ್ ಎಂಬಾತ 2017 ರಲ್ಲಿ ಜಪಾನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ರೋಬೋಟ್ ಎಕ್ಸಿಬಿಷನ್ ನಲ್ಲಿ ಪಾಲ್ಗೊಂಡಿದ್ದ.. ಅದು ಕೂಡ ಆತನ ಕಾಲೇಜಿನ ಉಪನ್ಯಾಸಕರು ಆತನ ಏರ್ ಟಿಕೆಟ್ ಗೆ ಸಹಾಯ ಮಾಡಿದ್ದರು.. ಆ ಎಕ್ಸಿಬಿಷ್ಯನ್ ನಲ್ಲಿ ಪ್ರಖ್ಯಾತ ಕಂಪನಿಗಳ ಡ್ರೋನ್ ಗಳನ್ನು ಇಡಲಾಗಿತ್ತು.. ಆದರೆ ಅಲ್ಲಿ ಪ್ರತಾಪ್ ಎಂಬಾತ ಯಾವುದೇ ಡ್ರೋನ್ ಮಾಡಿದ್ದ ದಾಖಲೆಗಳು ಇಲ್ಲ ಎಂದು ತಿಳಿಸಿದೆ.

ಅಷ್ಟೇ ಅಲ್ಲದೆ ಸಂಪಾದಕರೊಬ್ಬರು ACSL ಕಂಪನಿಗೆ ಮೇಲ್ ಮೂಲಕ ಅವರ ಕಂಪನಿಯಲ್ಲಿ ಪ್ರತಾಪ್ ಎಂಬಾತ ಕೆಲಸ ಮಾಡುತ್ತಿದ್ದಾರಾ ಎಂಬುದನ್ನೂ ಸಹ ವಿಚಾರಿಸಿದ್ದಾರೆ.. ಆದರೆ ಅಂತಹ ಯಾವ ವ್ಯಕ್ತಿಯೂ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ‌.. ಎಂಬ ವಿಚಾರ ತಿಳಿದಿದೆ.. ಆತ ಕೇವಲ ಎಕ್ಸಿಬಿಷನ್ ನಲ್ಲಿ ಆ ಕಂಪನಿಯ ಡ್ರೋನ್ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ ಅಷ್ಟೇ. ಅಲ್ಲದೆ ನಾವು ಸತ್ಯವನ್ನು ಹುಡುಕಿ ಹೆಕ್ಕಿತೆಗೆದು ಈ ವರದಿಯನ್ನು ಮಾಡಿದ್ಡುದೇವೆ ಎಂದು ಹೇಳಿದೆ.

ಈ  ಮಾಹಿತಿ ಬಗ್ಗೆ ಪ್ರತಾಪ್‌ ಕೂಡ ತನ್ನ ಸತ್ಯಾಸತ್ಯತೆಯನ್ನು ಎಲ್ಲಾ ಭಾರತೀಯರ ಮುಂದಿಡುವ ಕೆಲಸವಾಗಬೇಕಿದೆ. ಈ ಮೂಲಕ ತಾನು ನಮ್ಮ ದೇಶ ಸೇವಕ ಇತರರ ಸೇವಕನಲ್ಲ ಎಂಬುದನ್ನು ತೋರಿಸುವ ಕಾಲ ಈಗ ಬಂದಿದೆ.

ಒಂದು ವೇಳೆ ಪ್ರತಾಪ್‌ ಇದು ಸುಳ್ಳು ಎಂದು ನಿರೋಪಿಸುವಲ್ಲಿ ವಿಫಲರಾದರೆ ರಾಜ್ಯದ ಜನ ಅಷ್ಟೇ ಅಲ್ಲ ಆವರ ಗ್ರಾಮದವರು ಮತ್ತು ಅವರನ್ನು ಪ್ರೋತ್ಸಾಹಿಸಿದವರೂ ಕೂಡ ಎಂದೆಂದಿಗೂ ಅವರನ್ನು ಕ್ಷಮಿಸುವುದಲ್ಲ. ಮತ್ತು ಅವರ ಕ್ಷಮೆಗೆ ಪ್ರತಾಪ್‌ ಅರ್ಹರು ಅಲ್ಲ ಎಂಬತ್ತಾಗುತ್ತದೆ.

ಪ್ರತಾಪ್‌ ಈವರೆಗೆ ಹೇಳಿರುವುದೆಲ್ಲ ಸತ್ಯವಾಗಿದ್ದರೆ. ಈ ನಡುವೆ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ನೋಡಿ ಪ್ರತಾಪ್‌ ಎಂದೆಗುಂದಬೇಕಿಲ್ಲ. ಮತ್ತು ಅವರ ಬಗ್ಗೆ ಮಾಧ್ಯಮಗಳ ವರದಿಯನ್ನು ನೋಡಿ ಅವಮಾನಿಸುವವರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸತ್ಯ ಹೇಳಲು ಯಾವುದೇ ಭಯ ಇರದು ಇರುವುದನ್ನು ಇದ್ದಹಾಗೆ ಹೇಳುವುದಕ್ಕೆ ಯಾರ ಸಹಾಯವು ಬೇಕಿಲ್ಲ. ಗಟ್ಟಿ ಗುಂಡಿಗೆಯೂ ಬೇಕಿಲ್ಲ. ಆದರೆ  ದೃಢ ಮನಸ್ಸು ಮಾತ್ರ ಮುಖ್ಯವಾಗಿ ಬೇಕೆಬೇಕು.

Leave a Reply

error: Content is protected !!
LATEST
ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ ಮೈಸೂರಿನಲ್ಲಿ ಸಚಿವರಿಗೆ ಕಪಾಳ ಮೋಕ್ಷ: ಎಚ್‌ಡಿಕೆ ಆರೋಪ ಸುಳ್ಳು ಎಂದ ಡಿಸಿಎಂ ಶಿವಕುಮಾರ್‌ ಮುಡಾ ಪ್ರಕರಣದ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಚಿವ ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಾಪಾಲರ ಸೂಚನ...