BMTC ಎಲ್ಲ ನೌಕರರ ವೇತನ ಇನ್ನುಮುಂದೆ 1ನೇ ತಾರೀಖಿಗೆ ಬ್ಯಾಂಕ್ ಖಾತೆಗೆ ಜಮಾ ಎಂದ ಎಂಡಿ ಎಲ್ಲಿದ್ದೀಯಪ್ಪ

- ಏ.4 ಕಳೆದರೂ ಇನ್ನೂ ವೇತನ ಹಾಕಿಲ್ಲ ಎಂದರೆ ನಿಮ್ಮ ಆದೇಶ ಕಸದ ಬುಟ್ಟಿ ಸೇರಿತೇನಪ್ಪ?
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ ಪಾತಿಸಬೇಕು ಎಂದು ಫೆಬ್ರವರಿ ತಿಂಗಳ ವೇತನ ಮಾರ್ಚ್1ರಂದೆ ಜಮಾ ಮಾಡುವುದಾಗಿ ಹೇಳಿದ ನಿಗಮದ ವ್ಯವಸ್ಥಾಪಕ ನಿರ್ದೇಕರು ಅಂದೂ ಸೇರಿದಂತೆ ಈಗಲೂ ಹೊರಡಿಸಿದ ಆದೇಶದಂತೆ ನಡೆದುಕೊಳ್ಳುತ್ತಿಲ್ಲ.
ಹೌದು! ಆ ಆದೇಶ ಮಾಡಿ ಒಂದೂವರೆ ತಿಂಗಳು ಕಳೆದರೂ ಅದನ್ನು ಜಾರಿಗೆ ತರುವಲ್ಲಿ ಎಂಡಿ ರಾಮಚಂದ್ರನ್ ವಿಫಲರಾಗಿದ್ದಾರೆ. ಹೀಗಾಗಿ ಬಿಎಂಟಿಸಿಯ ಸಮಸ್ತ ಅಧಿಕಾರಿಗಳು/ನೌಕರರು ಎಲ್ಲಿದ್ದೀಯಪ್ಪ ನಮ್ಮ ದೊರೆ ರಾಮಚಂದ್ರನ್, ನೀವು ಹೊರಡಿಸಿರುವ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಲ್ಲಪ್ಪ ಎಂದು ಹೇಳುತ್ತಿದ್ದಾರೆ.
ಅಂದ್ರೆ ಫೆಬ್ರವರಿ ತಿಂಗಳ ವೇತನ ಮಾರ್ಚ್1ರಂದೆ ಎಲ್ಲ ನೌಕರರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಎಂಡಿ ಹೇಳಿ ಆದೇಶವನ್ನು ಹೊರಡಿಸಿದರು. ಆದರೆ ಅದು ಮಾ.1ರ ಬದಲಿಗೆ ಮಾರ್ಚ್ 4ರಂದು ವೇತನ ಹಾಕಿದರು. ಆ ಬಳಿಕ ಅಂದರೆ ಮಾರ್ಚ್ ತಿಂಗಳ ವೇತನವಾದರೂ ಏ.1ರಂದು ಬರುತ್ತದೆ ಎಂದು ನೌಕರರು ಅಂದುಕೊಂಡಿದ್ದರು.
ಆದರೆ, ಯುಗಾದಿ ಹಬ್ಬ, ಆರ್ಥಿಕ ಹೊಸವರ್ಷದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ, ಹೀಗಾಗಿ ಮಾರ್ಚ್ 2ರಂದು ವೇತನ ಪಾವತಿಯಾಗುತ್ತದೆ ಎಂದು ನೌಕರರು ಚಾತಕಪಕ್ಷಯಂತೆ ಕಾಯುತ್ತಿದ್ದರು, ಸಂಬಳ ಆಗಲಿಲ್ಲ. ಈಗ ಅಂದರೆ ಮಾರ್ಚ್ ತಿಂಗಳ ವೇತನ ಏ.4ರಂದಾದರೂ ಆಗುತ್ತದೆ ಎಂದುಕೊಂಡಿದ್ದ ನೌಕರರಿಗೆ ಇಂದೂ ಕೂಡ ನಿರಾಸೆಯಾಗಿದೆ.
ಈ ಎಲ್ಲದರ ಸಿಟ್ಟಿನಿಂದ ಎಂಡಿ ರಾಮಚಂದ್ರನ್ ಎಲ್ಲಿದ್ದೀಯಪ್ಪ ಎಂದು ನೌಕರರು ಕೇಳುತ್ತಿದ್ದಾರೆ. ನಿಮ್ಮ ಸಂಸ್ಥೆಯಲ್ಲಿ ನಿಮ್ಮ ಆದೇಶಕ್ಕೂ ಬೆಲೆ ಇಲ್ಲ ಎಂದರೆ ನಿಮ್ಮ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಬಿಗಿಯಿದೆ ಎಂಬುವುದು ಇದರಿಂದ ಗೊತ್ತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ನಿಮ್ಮ ಈ ರೀತಿಯ ಆಡಳಿತದಿಂದ ಕೆಲ ಅಧಿಕಾರಿಗಳು ನೌಕರರ ಸುಲಿಗೆ ಮಾಡುವುದಕ್ಕೂ ಮುಂದಾಗಿದ್ದಾರೆ. ಸಂಸ್ಥೆಯ ಒಬ್ಬ ಎಂಡಿಯಾಗಿ ಹೊರಡಿಸಿರುವ ಆದೇಶದ ಬಗ್ಗೆ ಅಧಿಕಾರಿಗಳು ಕಾಳಜಿವಹಿಸುತ್ತಿಲ್ಲ ಎಂದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಅದನ್ನು ಬಿಟ್ಟು ಎಲ್ಲಿ ಕುಳಿತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಸಾರಿಗೆ ಸಚಿವರು ಹಾಗೂ ನಿಗಮದ ಅಧ್ಯಕ್ಷರ ಆದೇಶದಂತೆ ತಾವು ಎಲ್ಲ ನೌಕರರಿಗೂ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನ ಪಾತಿಸಲಿದ್ದು ಹೀಗಾಗಿ ಸರಿಯಾದ ಸಮಯಕ್ಕೆ ನೌಕರರ ಹಾಜರಾತಿ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದೀರಿ ಆ ಆದೇಶ ಏನಾಯತು ಕಸದ ಬುಟ್ಟಿ ಸೇರಿತೆ?
ಈವರೆಗೂ ಬಿಎಂಟಿಸಿಯಲ್ಲಿ ಎಲ್ಲ ವರ್ಗದ ನೌಕರರ/ಅಧಿಕಾರಿಗಳ ವೇತನವನ್ನು ನಿರ್ದೇಶನಗಳನ್ವಯ ನಿರ್ವಹಣೆ ಮಾಡಿ ಪ್ರತಿ ತಿಂಗಳ 7 ನೇ ತಾರೀಖಿನೊಳಗೆ ಪಾವತಿ ಮಾಡುವ ಪದ್ಧತಿ ಚಾಲ್ತಿಯಲ್ಲಿತ್ತು. ಈಗಲೂ ಅದನ್ನೆ ಮುಂದುವರಿಸುತಿದ್ದೀರಿ ಎನಿಸುತ್ತಿದೆ. ಏಕೆ ಸತ್ಯವತಿ ಮೇಡಂ ಅವರು ಹೋದ ಮೇಲೆ ತಾವು ಬಂದಿದ್ದೀರಿ ಅವರಂತೆ ಹಿಡಿತ ನಿಮ್ಮಲ್ಲಿ ಇಲ್ಲವೇ? ನೀವು ಐಎಎಸ್ ಅಧಿಕಾರಿ ತಾನೆ ಎಂದು ಪ್ರಶ್ನಿಸುತ್ತಿದ್ದಾರೆ.
ತಾವೇ ಹೊರಡಿಸಿದ ಆದೇಶ ಇದು ಒಮ್ಮೆ ನೋಡಿಕೊಳ್ಳಿ: 1. ಪ್ರತಿ ತಿಂಗಳು 26 ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ಹಾಜರಾತಿಯನ್ನು ವಾಸ್ತವಿಕ ಹಾಜರಾತಿಗಳಿಗನುಗುಣವಾಗಿ ಮುಕ್ತಾಯಗೊಳಿಸಿ 1ನೇ ತಾರೀಖಿನಂದು ವೇತನ ಪಾವತಿಗೆ ಕ್ರಮ ವಹಿಸಬೇಕು.
- ಫೆಬ್ರವರಿ-2025 ನೇ ಮಾಹೆಯ 26.02.2025 27.02.2025 ಹಾಗೂ 28.02.2025 ಈ 3 ದಿನಗಳಿಗೆ ಹಾಜರಾತಿ ನೀಡಿ ಪೂರ್ಣ ವೇತನ ಪಾವತಿ ಮಾಡಲು ಕ್ರಮ ವಹಿಸುವುದು.
- ಈ ರೀತಿ ಪಾವತಿಸಿರುವ 03 ದಿನದ ವೇತನವನ್ನು ಕ್ರಮವಾಗಿ ಮಾರ್ಚ್-2025, ಏಪ್ರಿಲ್-2025 ಹಾಗೂ ಮೇ-2025 ನೇ ಮಾಹೆಯ ವೇತನದಲ್ಲಿ ಒಂದೊಂದು ದಿನದ ವೇತನವನ್ನು ಕಡಿತ ಮಾಡಿ ಸರಿದೂಗಿಸಿಕೊಳ್ಳುವುದು.
- ನೌಕರರು/ಅಧಿಕಾರಿಗಳು ಸೇವಾ ವಿಮುಕ್ತಿಗೊಳ್ಳುವ ಮಾಹೆಯಲ್ಲಿ ಮಾಸಾಂತ್ಯದವರೆಗೆ ವೇತನ ಪಾವತಿಸುವುದು.
ಹೀಗೆ ಪ್ರತಿ ತಿಂಗಳು 26ನೇ ತಾರೀಖಿನಿಂದ ಮುಂದಿನ ಮಾಹೆಯ 25 ನೇ ತಾರೀಖಿನವರೆಗೆ ಹಾಜರಾತಿಯನ್ನು ವಾಸ್ತವಿಕವಾಗಿ ಮುಕ್ತಾಯಗೊಳಿಸುವುದು ಹಾಗೂ 1ನೇ ತಾರೀಖಿನಂದು ವೇತನ ಪಾವತಿ ಮಾಡುವ ನಿರ್ದೇಶನಗಳನ್ನು ಹೊರತುಪಡಿಸಿ ಉಳಿದ ವೇತನ ಬಿಲ್ಲಿನ ನಿರ್ವಹಣೆ ಹಾಗೂ ಸಂಬಂಧಪಟ್ಟವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ನಿರ್ದೇಶನಗಳು ಯಥಾವತ್ತಾಗಿರುತ್ತವೆ ಎಂದು ತಿಳಿಸಿದ್ದೀರಿ.
ಇನ್ನು ಯಾವುದೇ ಹಂತಗಳಲ್ಲಿ ಲೋಪದೋಷ ಹಾಗೂ ವಿಳಂಬಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯನ್ನು ವಹಿಸಿ ಸಂಬಂಧಪಟ್ಟವರು ಈ ಆದೇಶದಲ್ಲಿ ತಿಳಿಸಿರುವ ನಿರ್ದೇಶನಗಳನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಕಾರಿ/ಅಧೀಕ್ಷಕರು/ಮೇಲ್ವಿಚಾರಕರು/ಸಿಬ್ಬಂದಿಗಳ ಗಮನಕ್ಕೆ ತರಬೇಕು ಮತ್ತು ಈ ಸಂಬಂಧ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಲ್ಲ ಹಂತಗಳಲ್ಲಿ ಪರಿಪೂರ್ಣವಾಗಿ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದೀರಿ.
ಈ ಆದೇಶವು ಫೆಬ್ರವರಿ-2025 ನೇ ಮಾಹೆಯಿಂದ ಜಾರಿಗೆ ಬರುತ್ತದೆ ಹಾಗೂ ಈ ಆದೇಶದ ಪ್ರತಿಯನ್ನು ಸ್ವೀಕರಿಸಿರುವುದಕ್ಕೆ ಮತ್ತು ಜಾರಿಗೊಳಿಸಿದ ಬಗ್ಗೆ ಅನುಸರಣಾ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಆದೇಶಿಸಿ ತಾವು ಅಂದರೆ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ ಅವರೆ ನೀವು ತಿಳಿಸಿದ್ದೀರಿ. ಆದರೆ ಎಲ್ಲಿಗೋಯಿತು ನಿಮ್ಮ ಈ ಆದೇಶ ಪ್ರತಿ ಎಂದು ನೌಕರರು ಕೇಳುತ್ತಿದ್ದಾರೆ.
Related

You Might Also Like
KKRTC ಬಸ್ – ಟಿಪ್ಪರ್ ನಡುವೆ ಭೀಕರ ಅಪಘಾತ: ಕಂಡಕ್ಟರ್ ಸ್ಥಳದಲ್ಲೇ ಸಾವು, ಚಾಲಕ ಸೇರಿ ಹಲವರಿಗೆ ಗಾಯ
ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಚಿಲಕನಹಟ್ಟಿ (ಮರಿಯಮ್ಮನಹಳ್ಳಿ)...
KSRTC ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ: 2035ರವರೆಗೆ ಎಸ್ಮಾ ವಿಸ್ತರಣೆ – ಚರ್ಚೆ ಇಲ್ಲದೇ ಸದನದಲ್ಲಿ ವಿಧೇಯಕ ಅಂಗೀಕಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಸ್ಮಾ ಕಾಯ್ದೆ 10 ವರ್ಷಗಳ ಅವಧಿಗೆ ವಿಸ್ತರಣೆಯಾಗುವ ಅತ್ಯಾವಶ್ಯಕ...
ರೈತರ ಸಮಸ್ಯೆ ಬಗೆ ಹರಿಸಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ರೈತ ಮುಖಂಡರ ಪ್ರತಿಭಟನೆ
ಮೈಸೂರು: ರೈತರ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ , ರಾಜ್ಯ ಕಬ್ಬು ಬೆಳೆಗಾರರ ಸಂಘದ...
KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ
ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್ 1-2025ರಿಂದ ಜಾರಿ ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ...
KSRTC- ಪ್ರತಿಷ್ಠಿತ ವಿಶ್ವ ದಾಖಲೆ ಸೇರಿದ ಶಕ್ತಿ ಯೋಜನೆ: ಅತೀವ ಸಂತಸ, ಹೆಮ್ಮೆಯ ಕ್ಷಣ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 2023ರ ಜೂನ್ 11ರಿಂದ ಜಾರಿಗೆ ಬಂದ ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ (Golden Book...
KKRTC ವಿಜಯಪುರ: ಸಂಸ್ಥೆ ನಿಯಮವನ್ನೇ ಗಾಳಿಗೆ ತೂರಿ ಮತ್ತೆ ಮತ್ತೆ ನೌಕರರಿಂದ ಸ್ವಂತ ಕಾರನ್ನು ಸರ್ವಿಸ್ ಮಾಡಿಸಿಕೊಳ್ಳುತ್ತಿರುವ ಡಿಎಂ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅದರಲ್ಲೂ ವಿಜಯಪುರ ವಿಭಾಗದಲ್ಲಿ ಇವರ ಬಹುತೇಕ ಎಲ್ಲ ಘಟಕ ವ್ಯವಸ್ಥಾಪಕರು ಸೇರಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳೂ ಅಂಕುಶವಿಲ್ಲದ ಆನೆಯಂತಾಗಿದ್ದಾರೆ. ಅಂದರೆ...
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...