
ಬೆಂಗಳೂರು: ಲಾಲ್‌ಬಾಗ್ ಆಭರಣದಲ್ಲಿ 87ನೇ ಇಪಿಎಸ್ ಪಿಂಚಣಿದಾರರ ಮಾಸಿಕ ಸಭೆ ಇದೇ ಏ.6ರ ಭಾನುವಾರ ಜರುಗಲಿದೆ ಎಂದು ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಕಳೆದ ಮಾ.25 ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ನಿವೃತ್ತರು ನಡೆಸಿದ ಪ್ರತಿಭಟನಾ ಸಭೆ ಹಾಗೂ ಮನವಿ ಸಲ್ಲಿಸುವ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿತ್ತು.
ಇನ್ನು 2ನೇ ಹಂತದ ಬಜೆಟ್ ಅಧಿವೇಶನ ಇಂದು ಅಂದರೆ ಏ.4ರಂಉ ಮುಕ್ತಾಯಗೊಂಡಿದ್ದು, ಈ ಅಧಿವೇಶನದಲ್ಲಿ ನಿವೃತ್ತರ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲದೆ ಇರುವುದು ಮತ್ತೊಮ್ಮೆ ಪಿಂಚಣಿದಾರರಲ್ಲಿ ನಿರಾಶೆ ಮೂಡಿಸಿದೆ. ಅಧಿವೇಶನ ಬಂದಾಗಲೆಲ್ಲ ಸಚಿವರು ನಮ್ಮ ಮುಖಂಡರಿಗೆ ಭರವಸೆ ನೀಡುವುದು, ನಂತರ ಮೌನಕ್ಕೆ ಜಾರುವುದೇ ಆಗುತ್ತಿದೆ.
ಪ್ರಜಾಪ್ರತಿನಿಧಿಗಳು/ ಅಧಿಕಾರಿಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು, ಎಲ್ಲ ಸೌಲತ್ತುಗಳನ್ನು ಅನುಭವಿಸುತ್ತಾ, ನಿವೃತ್ತರನ್ನು ಕಡೆಗಣಿಸಿರುವುದು ಎಷ್ಟು ಸರಿ? ಏನೇ ಆಗಲಿ ಯಾರು ಧೃತಿಗೆಡಬಾರದು, ಸಂಘಟಿತರಾಗಿ ನಾವೆಲ್ಲರೂ ಒಗ್ಗೂಡಿ, ಹೋರಾಟವನ್ನು ಮುಂದುವರಿಸೋಣ ಎಂದು ನಂಜುಂಡೇಗೌಡ ಧೈರ್ಯ ತುಂಬಿದ್ದಾರೆ.
ಇನ್ನು ಎನ್ಎಸಿ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಹಾಗೂ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರು ಈ ಮಾಸಿಕ ಸಭೆಯಲ್ಲಿ, ನಿವೃತ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳು, ಸದಸ್ಯರು, ಎಚ್ಎಂಟಿ, ಕಿರ್ಲೋಸ್ಕರ್, ಲಿಡ್ಕರ್, ಎಸ್ಕಾರ್ಟ್ ನಿವೃತ್ತರು, ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ಮುಂದಿನ ಹೋರಾಟದ ರೂಪರೇಶಿಯ ಬಗ್ಗೆ ಪ್ರಸ್ತಾಪಿಸಲಿದ್ದಾರೆ.
ಹೀಗಾಗಿ ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೋತೊಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಭಾನುವಾರ ಬೆಳಗ್ಗೆ 8 ಗಂಟೆಗೆ ಹಾಜರಾಗಿ ಎಂದು ವಿನಂತಿಸಿದ್ದಾರೆ.