NEWSದೇಶ-ವಿದೇಶರಾಜಕೀಯವಿಜ್ಞಾನ

4ವರ್ಷ ಮೊದಲೇ ದ್ವಿಗುಣಗೊಂಡ ಹುಲಿಗಳ ಸಂಖ್ಯೆ: ಗಿನ್ನೆಸ್‌ ದಾಖಲೆಗೆ ಸೇರ್ಪಡೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಆಯೋಜಿಸಿದ್ದ ಸಂಕಲ್ಪ್ ಸೆ ಸಿದ್ಧಿ ಅಭಿಯಾ­ನದಿಂದ ಭಾರತದಲ್ಲಿ ನಿಗದಿತ ಗುರಿಗಿಂತ 4 ವರ್ಷ ಮೊದಲೇ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ಮೂಲಕ ದೇಶದ ಹುಲಿ ಗಣತಿ ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಅರಣ್ಯ ಸಚಿವ ಪ್ರಕಾಶ್‌ ಜಾವೇಡ್ಕರ್‌.

ಭಾರತದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ? ಎಂಬುದನ್ನು ಅರಿಯಲು 2018ರಲ್ಲಿ ಕೈಗೊಂಡಿದ್ದ ಕ್ಯಾಮರಾ-ಆಧಾರಿತ ಹುಲಿ ಗಣತಿಗೆ ಈಗ ವಿಶ್ವದಾಖಲೆಯ ಮನ್ನಣೆ ದೊರೆ­ತಿದೆ. ಭಾರತದಲ್ಲಿ ನಡೆದ ಗಣತಿಯು ಜಗತ್ತಿನಲ್ಲೇ ಅತಿ­ದೊಡ್ಡ ಕ್ಯಾಮರಾ-ಟ್ರ್ಯಾಪ್‌ ವನ್ಯಜೀವಿ ಸಮೀಕ್ಷೆ ಎಂದು ಗಿನ್ನೆಸ್‌ ವಿಶ್ವ ದಾಖಲೆ ಪುಸ್ತಕದಲ್ಲಿ ದಾಖ­ಲಾಗಿದೆ ಎಂದು ತಿಳಿಸಿದ್ದಾರೆ.

26,760 ಕಡೆ ಕ್ಯಾಮರಾ
ದೇಶದ 26,760 ಪ್ರದೇಶಗಳಲ್ಲಿ ಕ್ಯಾಮರಾ ಟ್ರ್ಯಾಪ್‌ ಅಳವಡಿ­ಸುವ ಮೂಲಕ ಗಣತಿ ಕೈಗೊಳ್ಳ­ಲಾಗಿತ್ತು. ಕ್ಯಾಮರಾಗಳು ಒಟ್ಟಾರೆ 3.50 ಕೋಟಿ ಫೋಟೋಗಳನ್ನು ಸೆರೆಹಿಡಿದಿದ್ದವು. ಇದು ಜಗತ್ತಿನ ಬೇರೆಲ್ಲೂ ಈವರೆಗೆ ಕೈಗೊಳ್ಳದ ಅತೀ ದೊಡ್ಡ ವನ್ಯಜೀವಿ ಸಮೀ­ಕ್ಷೆಯೇ ಎಂಬುದನ್ನು ದೃಢಪಡಿಸಿ­ಕೊಳ್ಳಲು ಗಿನ್ನೆಸ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಪ್ರಕಾಶ್‌ ಜಾವೇಡ್ಕರ್‌ ಅವರೇ ಈ ವಿಚಾರ ತಿಳಿಸಿದ್ದು ದೇಶದಲ್ಲಿ ನಿಗದಿತ ಗುರಿಗಿಂತ 4 ವರ್ಷಗಳ ಮುನ್ನವೇ ಹುಲಿಗಳ ಸಂಖ್ಯೆ­ ದ್ವಿಗುಣಗೊಂಡಿದೆ ಎಂದು ಟ್ವಿಟ್‌ ಮಾಡಿದ್ದಾರೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್