Breaking NewsNEWSವಿಜ್ಞಾನಶಿಕ್ಷಣ-

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ ಗುರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2020 ರ ದ್ವಿತೀಯ  ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೆ ಪ್ರಥಮ ಸ್ಥಾನವನ್ನು ಪಡೆದುಕೊಡಿದ್ದು, ವಿದ್ಯಾರ್ಥಿಗಳು ಹಿಂದೆ ಉಳಿದಿದ್ದಾರೆ.

6,75,277 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 5,56, 267 ಹೊಸಬರು ಅದರಲ್ಲಿ ‌3, 84,947 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಆ ಮೂಲಕ ಶೇ.69.20 ಈ ಬಾರಿ ಫಲಿತಾಂಶ ಬಂದಿದೆ. ಕಳೆದ ವರ್ಷ  68.68% ಇತ್ತು.

ಇನ್ನು ಪುನಾರಾವರ್ತಿತ ಅಭ್ಯರ್ಥಿಗಳು 91,025 ‌ ಪರೀಕ್ಷೆ ತೆಗದುಕೊಂಡಿದ್ದರು. ಅದರಲ್ಲಿ   25, 602 ಮಂದಿ ಪಾಸಾಗಿದ್ದಾರೆ. ಈ ಮೂಲಕ 46.56% ಬಂದಿದೆ. ಜತೆಗೆ 27.37% ಕೆಳೆದ ವರ್ಷ ಫಲಿತಾಂಶ ಬಂದಿತ್ತು. ಅಂತ್ಯೆಯೇ ಖಾಸಗಿಯಾಗಿ   27,985 ಮಂದಿ ಪರೀಕೆ ಬರೆದಿದ್ದು   6748 ಮಂದಿ ಪಾಸಾಗಿದ್ದಾರೆ. ಆ ಮೂಲ 24.11% ಇವರ ಫಲಿತಾಂಶ ಬಂದಿದೆ.

ಈ ಎಲ್ಲ ವಿದ್ಯಾರ್ಥಿಗಳನ್ನು ಒಟ್ಟಾರೆ  ಫಲಿತಾಂಶ ತೆಗೆದುಕೊಂಡರೆ ರಾಜ್ಯದಲ್ಲಿ  ಈಬಾರಿ 61.73%ರಷ್ಟು ಫಲಿತಾಂಶ ಬಂದಿದೆ ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲುಇ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

ಈ ವರ್ಷ ಕಲಾ ವಿಭಾಗದಲ್ಲಿ ಶೇ. 41.27 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ.50.3 ಮಂದಿ ಪಾಸಾಗಿದ್ದರು. ಅದರಂತೆ ವಿಜ್ಞಾನ ವಿಭಾಗದಲ್ಲಿ ಶೇ.76.2, ಕಳೆದ ವರ್ಷ ಶೇ. 66.58 ಮತ್ತು ವಾಣಿಜ್ಯ ವಿಭಾಗದಲ್ಲಿ  ಈ ಬಾರಿ ಶೇ.  66.52 ಮಂದಿ ಪಾಸಾಗಿದ್ದು ಕಳೆದ ವರ್ಷ ಶೇ. 66.39 ತೇರ್ಗಡೆ ಹೊಂದಿದ್ದರು.

ಈ ಬಾರಿಯೂ ಬಾಲಕಿಯರೇ ಮೇಲು ಗೈ ಸಾಧಿಸಿದ್ದು, ಶೇ. 68.73 ಮಂದಿ ಪಾಸಾಗಿದ್ದಾರೆ. ಕಳೆದ ವರ್ಷ ಶೇ.68.24 ಮಂದಿ ಉತ್ತೀರ್ಣರಾಗಿದ್ದರು. ಇನ್ನು ಶೇ. 54.77 ಬಾಲಕರು ಈ ಬಾರಿ ಪಾಸ್‌ ಆಗಿದ್ದು, ಕಳೆದ ವರ್ಷ ಶೇ. 55.4ಮಂದಿ ಪಾಸ್‌ ಆಗಿದ್ದರು.

ನಗರ ಗ್ರಾಮೀಣ ಪ್ರದೇಶ

ಇನ್ನು ನಗರ ಪ್ರದೇಶದ ಶೇ. 62.60  ವಿದ್ಯಾರ್ಥಿಗಳು ಪಾಸ್‌ ಆಗಿದ್ದರೆ ಗ್ರಾಮೀಣ ಭಾಗದಲ್ಲಿ ಶೇ. 58.99  ಪಾಸ್‌ ಆಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶೇ. 47.56 ಮತ್ತು ಆಂಗ್ಲ ಮಾಧ್ಯಮದಲ್ಲಿ  72.45 ಮಂದಿ ತೇರ್ಗಡೆ ಹೊಂದಿದ್ದಾರೆ.

ಡಿಸ್ಟಿಂಕ್ಷನ್‌ ನಲ್ಲಿ‌‌ 85ಕ್ಕಿಂತ ಹೆಚ್ಚು ಅಂಕಪಡೆದವರು  68,866 ಮಂದಿ,  ಇನ್ನು ಪ್ರಥಮದರ್ಜೆ 60ಕ್ಕಿಂತ ಹೆಚ್ಚು ಅಂಕಪಡೆದವರು 2,21,866 ಮಂದಿ. 77,455  ಮಂದಿ ದ್ವಿತೀಯ ಸ್ಥಾನದಲ್ಲಿ ಪಾಸ್‌ ಆಗಿದ್ದಾರೆ.

ಉಡುಪಿ ಮೊದಲು ವಿಜಯಪುರ ಕೊನೆ
ರಾಜ್ಯದಲ್ಲಿ ಮೊದಲು ಉಡುಪಿ ಶೇ. 90.71 , ದಕ್ಷಿಣ ಕನ್ನಡ ಜಿಲ್ಲೆ 90.71 ಮತ್ತು ಮೂರನೆಯದು ಕೊಡಲು ಶೇ. 81.3  ಇನ್ನು ಕೊನೆಯ ಮೂರು ಚಿತ್ರದುರ್ಗ 56.8, ರಾಯಚೂರು ಶೇ.56.22 ಮತ್ತು ವಿಜಯಪುರ ಶೇ. 54.22  ಕೊನೆಯ ಸ್ಥಾನದಲ್ಲಿದೆ.

ನೂರಕ್ಕೆ ನೂರು ಗಣಿತದಲ್ಲಿ 7131 ಮಂದಿ ನೂರಕ್ಕೆ ನೂರ ಅಂಕಗಣಿಸಿದ್ದಾರೆ. ಲೆಕ್ಕಶಾಸ್ತ್ರದಲ್ಲಿ 2305 ವಿದ್ಯಾರ್ಥಿಗಳು ಮತ್ತು ವ್ಯವಹಾರ ಅಧ್ಯಯನ 2143. ಬ್ಯೂಟಿ ಮತ್ತುವೆಲ್‌ನೆಸ್‌ನಲ್ಲಿ ಒಬ್ಬರು. ಒಟ್ಟಾರೆ ಯಾವುದಾದರೂ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದವರು 29058 ಎಂದು ಸಚಿವ ಸುರೇಶ್‌ ಕುಮಾರ್‌ ವಿವರಿಸಿದ್ದಾರೆ.

ನೂರಕ್ಕೆ ನೂರು ಫಲಿತಾಂಶ
ಇನ್ನು ಮೂರು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಸರ್ಕಾರಿ ಪಿಯು ಕಾಲೇಜು ಕಾರ್ಕಾಳ ತಾಲೂಕು ಶಿರ್ಲಾಳು, ಹಾಸನ ಜಿಲ್ಲೆ ಸಕಲೇಶ್ವರ ತಾಲೂಕ ಚಂಗಡಿಹಳ್ಳಿ, ಕಡೂರು ತಾಲೂಕಿನ ಜೂಡಿಭಜ್ಜಿಹಳ್ಳಿ ಸರ್ಕಾರಿ ಪಿಯು ಕಾಲೇಜು.

ಶೂನ್ಯ ಸಾಧನೆ ಕಾಲೇಜುಗಳು
ಶೇ.0 ಸಾಧನೆ ಮಾಡಿದ ಕಾಲೇಜುಗಳ ಪಟ್ಟಿಯಲ್ಲಿ 5 ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು ಮತ್ತು 78 ಅನುದಾನರಹಿತ ಪಿಯು ಕಾಲೇಜುಗಳಾಗಿವೆ ಎಂದು ತಿಳಿಸಿದರು.

ಈ ಬಾರಿ 1016 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 70 ಮೌಲ್ಯಮಾಪನ ಕೇಂದ್ರಗಳಲ್ಲಿ 16 ಮೇ ಯಿಂದ 9 ಜುಲೈ ವರೆಗೂ  ಮೌಲ್ಯಮಾಪನ ಕಾರ್ಯ ನಡೆದಿತ್ತು.  11970 ಮೌಲ್ಯಮಾಪಕರು ಭಾಗವಹಿಸಿದ್ದರು.

 

 

Leave a Reply

error: Content is protected !!
LATEST
ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ ವೀರವನಿತೆ ಒನಕೆ ಓಬವ್ವ ಜಯಂತಿ: ಮಹಿಳೆಯರು ಶೌರ್ಯ, ಧೈರ್ಯ ಬೆಳೆಸಿಕೊಳ್ಳಿ-ಸಚಿವ ಮುನಿಯಪ್ಪ ಮೈಸೂರಿನಲ್ಲಿ ಸಚಿವರಿಗೆ ಕಪಾಳ ಮೋಕ್ಷ: ಎಚ್‌ಡಿಕೆ ಆರೋಪ ಸುಳ್ಳು ಎಂದ ಡಿಸಿಎಂ ಶಿವಕುಮಾರ್‌ ಮುಡಾ ಪ್ರಕರಣದ ಹೈಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಚಿವ ಜಮೀರ್‌ ವಿರುದ್ಧ ಕ್ರಮಕ್ಕೆ ರಾಜ್ಯಾಪಾಲರ ಸೂಚನ...