ಬೆಂಗಳೂರು: ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, 87 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 2496 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು 44077 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇಂದು 87 ಮಂದಿ ಸೇರಿ ಒಟ್ಟಾರೆ ಈವರೆಗೆ ರಾಜ್ಯದಲ್ಲಿ 848 ಮಂದಿ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಮೃತಪಟ್ಟಿದ್ದಾರೆ. ಇನ್ನು ಆತಂಕಕಾರಿ ಮಾಹಿತಿ ಎಂದರೆ ರಾಜಧಾನಿ ಬೆಂಗಳೂರು ನಗರವೊಂದರಲ್ಲಿಯೇ 56 ಮಂದಿ ಸೋಂಕಿತರು ಇಂದು ಕೊನೆಯುಸಿರೆಳೆದಿದ್ದಾರೆ.
ಇಂದು 1267 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಂತೆಯೇ ಇಂದು ರಾಜ್ಯಾದ್ಯಂತ 1142 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ನರಳಿದ್ದಾರೆ. ಒಟ್ಟು ಗುಣಮುಖರಾದವರು 17390, ಸಕ್ರಿಯ 25839 ಪ್ರಕರಣಗಳಾಗಿವೆ.
ಇನ್ನು ಇಂದು ಬೆಂಗಳೂರು 1267, ಮೈಸೂರು 125, ಕಲಬುರಗಿ 121, ಧಾರವಾಡ 100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣಕನ್ನಡ 91, ಬಾಗಲಕೋಟೆ 78, ಉಡುಪಿ 73, ಉತ್ತರಕನ್ನಡ 64, ಬೆಳಗಾವಿ 64, ವಿಜಯಪುರ 52, ತುಮಕೂರು 47, ಬೀದರ್ 42, ಮಂಡ್ಯ 38, ರಾಯಚೂರು 25, ದಾವಣಗೆರೆ 17, ಬೆಂಗಳೂರು ಗ್ರಾ 14, ಚಿಕ್ಕಬಳ್ಳಾಪುರ 13, ಕೋಲಾರ 11, ಶಿವಮೊಗ್ಗ 10, ಕೊಡಗು 10, ಚಿತ್ರದುರ್ಗ 10, ಗದಗ 09, ಚಾಮರಾಜನಗರ 08, ಹಾಸನ 04, ಚಿಕ್ಕಮಗಳೂರು 03, ಯಾದಗಿರಿ 02, ರಾಮನಗರ 01 ಸೇರಿ ರಾಜ್ಯದಲ್ಲಿ 2496 ಮಂದಿ ಸೋಂಕಿಗೆ ಇಂದು ಒಳಗಾಗಿದ್ದಾರೆ.
ದೇಶದಲ್ಲಿ 916,368 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 916,368 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 23,942 ಮಂದಿ ಮೃತಪಟ್ಟಿದ್ದಾರೆ. 577,327 ಮಂದಿ ರೋಗಮುಕ್ತರಾಗಿದ್ದಾರೆ. 315,099 ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಪಂಚಾದ್ಯಂತ ಈವರೆಗೆ 13,280,066 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 576,675 ಜನರು ಮೃತಪಟ್ಟಿದ್ದಾರೆ. 7,750,599 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail