ಬೆಂಗಳೂರು: ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ರಾಜ್ಯದ (7.05 ಎಕ್ಕರೆ) 322545 ಚದುರ ಅಡಿ ಜಾಗದಲ್ಲಿ ನೂತನ ಅತಿಥಿ ಗೃಹ ನಿರ್ಮಾಣ ಮಾಡಲು 200 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾರ್ಥ ಪ್ರಸಾದ್ ತಿಳಿಸಿದ್ದಾರೆ.
1000ಕ್ಕೂ ಹೆಚ್ಚು ಯಾತ್ರಿಕರಿಗೆ ವಸತಿ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಮಹಾನಕ್ಷೆಯಂತೆ ಹೊಸ ವಸತಿ ಗೃಹ ನಿರ್ಮಾಣ, ಕಲ್ಯಾಣ ಮಂಟಪ, ಡಾರ್ಮೆಂಟ್ರಿ, ಸಿಬ್ಬಂದಿ ಕೊಠಡಿ ಮತ್ತು ಇತರೆ ಅಭಿವೃದ್ಧಿ ಕಾಮಾಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
140 ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ 12 ಡಾರ್ಮೆಂಟ್ರಿಗಳು, 610 ಜನ ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ 305 ಕೊಠಡಿಗಳು, ಗಣ್ಯರಿಗೆ ವಿಶೇಷ 24 ಸೂಟ್ ಕೊಠಡಿಗಳು ಮತ್ತು 04 ಡಬಲ್ ಸೂಟ್ ಕೊಠಡಿಗಳು, 01 ಕಲ್ಯಾಣ ಮಂಟಪ, ಕಾರು ಬಸ್ಸುಗಳಿಗೆ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ, ಕಲ್ಯಾಣಿ ಜೀರ್ಣೋದ್ಧಾರ, ಹೊಸ ರಸ್ತೆಗಳ ನಿರ್ಮಾಣ, ಲ್ಯಾಂಡ್ ಸ್ಕೇಪಿಂಗ್, ಉದ್ಯಾನವನ ಅಭಿವೃದ್ಧಿ ಕಾಮಾಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.