KKRTC: ಪ್ರಭಾವ ಬೀರಿ ಒಂದೇಕಡೆ 14 ವರ್ಷಕ್ಕೂ ಹೆಚ್ಚು ಕಾಲ ಬೇರುಬಿಟ್ಟಿದ್ದ ಅಧಿಕಾರಿ ದಂಪತಿ ಬಿಎಂಟಿಸಿಗೆ ವರ್ಗಾವಣೆ
14 ವರ್ಷಕ್ಕೂ ಹೆಚ್ಚು ಕಾಲ ವರ್ಗಾವಣೆಯಾಗದೆ ಇದ್ದ ಆನಂದ ಭದ್ರಕಳ್ಳಿ ಪತ್ನಿ ಜಿ.ಎಸ್.ಶ್ರೀದೇವಿ - ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ವರ್ಗಾವಣೆ ಆದೇಶ ಸಮಂಜಸ ಎಂದ ಯಾಕೂಬ್ ನಾಟಿಕರ
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಮುಖ್ಯ ಭದ್ರತಾ ಮತ್ತು ಜಾಗ್ರತಧಿಕಾರಿ ಆನಂದ ಭದ್ರಕಳ್ಳಿ ಹಾಗೂ ಅವರ ಪತ್ನಿ ಜಿ.ಎಸ್.ಶ್ರೀದೇವಿ ಅವರು 14 ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಕಲ್ಯಾಣ ಕರ್ನಾಟಕ ನಿಗಮದಿಂದ ಬಿಎಂಟಿಸಿಗೆ ಇದೇ ನ.21ರಂದು ಆಡಳಿತದ ಕಾರಣಗಳ ಮೇರೆಗೆ ವರ್ಗಾವಣೆ ಮಾಡಲಾಗಿದೆ.

ಕೆಕೆಆರ್‌ಟಿಸಿ ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಲೆಕ್ಕಾಧಿಕಾರಿ (ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಕಾರ್ಯಭಾರದಲ್ಲಿದ್ದ) ಜಿ.ಎಸ್.ಶ್ರೀದೇವಿ ಅವರನ್ನು ಬಿಎಂಟಿಸಿಗೆ ಉಪ ಮುಖ್ಯ ಲೆಕ್ಕಾಧಿಕಾರಿಯಾಗಿಯೂ ಹಾಗೂ ಕೆಕೆಆರ್‌ಟಿಸಿ ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಮುಖ್ಯ ಭದ್ರತಾ ಮತ್ತು ಜಾಗ್ರತಧಿಕಾರಿಯಾಗಿದ್ದ ಆನಂದ ಭದ್ರಕಳ್ಳಿ ಅವರನ್ನು ವಡ್ಡರಹಳ್ಳಿಯಲ್ಲಿರುವ ಬಿಎಂಟಿಸಿಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಆದರೆ, ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಒಂದೇಕಡೆ ಇದ್ದು ಎರಡೆರಡು ಬಡ್ತಿ ಪಡೆದಿದ್ದರೂ ಈಗಲೂ ಅಲ್ಲೇ ಇರಬೇಕು ಎಂದು ರಾಜಕಾರಣಿಳಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಕ್ಕೆ ಮುಂದಾಗಿದ್ದಾರೆ ಎಂದು KPCC ಅಲ್ಪ ಸಂಖ್ಯಾತರ ಘಟಕ ಹಾಗೂ ರಾಜ್ಯ ಸಂಚಾಲಕರು ಅಹಿಂದ ಚಳುವಳಿ, ರಾಜ್ಯ ಕಾರ್ಯದರ್ಶಿ ಯಾಕೂಬ್ ನಾಟಿಕರ ಆರೋಪಿಸಿದ್ದಾರೆ.

ಅಲ್ಲದೆ ಈ ಇಬ್ಬರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಯಾಕೂಬ ನಾಟಿಕಾರ ಸ್ವಾಗತಿಸಿದ್ದು, ಒಂದೇ ಸ್ಥಳದಲ್ಲಿ ಅವಧಿ ಮೀರಿ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಈಗ ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರಿಂದ ಶಿಫಾರಸು ಪತ್ರಗಳನ್ನು ಪಡೆದುಕೊಂಡು ಮರಳಿ ಕೆಕೆಆರ್‌ಟಿಸಿಗೆ ಬರಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೀವದಲ್ಲಿ ಯಲ್ಲರಿಗೂ ಕಷ್ಟಗಳು ಬರುವುದು ಸರ್ವೇ ಸಾಮಾನ್ಯ. ಆ ಕಷ್ಟಗಳನ್ನು ಎದುರಿಸಿ ಜೀವನ ಮುನ್ನಡೇಸಬೇಕು ಅದನ್ನು ಬಿಟ್ಟು ನಮಗೆ ಮತ್ತೆ ವೈದ್ಯಕಿಯ ಹಾಗೂ ಮಕ್ಕಳ ಆರೋಗ್ಯ ಮತ್ತು ಆರೈಕೆಗಾಗಿ ವರ್ಗಾವಣೆ ಆದೇಶವನ್ನು ರದ್ದುಮಾಡಿ ಮರಳಿ ಕಲ್ಯಾಣ ನಿಗಮಕ್ಕೆ ವರ್ಗಾವಣೆ ಮಾಡಿ ಅಂತಾ ಶಿಫಾರಸು ಮಾಡಿಸುವುದು ಅವರ ಯೋಗ್ಯತೆಗೆ ತಕ್ಕದಲ್ಲ ಎಂದು ಹೇಳಿದ್ದಾರೆ.
ಇನ್ನು ಇವರು ಒಂದೇ ಸ್ಥಳದಲ್ಲಿ 14 ವರ್ಷಕ್ಕೂ ಮೇಲ್ಪಟ್ಟು ಕೆಲಸ ಮಾಡುತ್ತಿದ್ದಾರೆ. ಸೇವಾ ಅವಧಿಯಲ್ಲಿ ಇಲ್ಲಿಯವರೆಗೆ ಯಾವುದೇ ನೌಕರರಿಗೆ ಸಹಾಯ ಮಾಡಿದ ನಿರ್ದೇಶನಗಳಿಲ್ಲ ಆದ್ದರಿಂದ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಪ್ರಧಾನ ಕಾರ್ಯದರ್ಶಿ ಸಾರಿಗೆ ಇಲಾಖೆ ಹಾಗೂ KSRTC ವ್ಯವಸ್ಥಾಪಕ ನಿರ್ದೇಶಕರು ಮತ್ತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ರದ್ದು ಮಾಡಿ ನಿಯೋಜನೆ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.
ಇನ್ನು ಆನಂದ ಭದ್ರಕಳ್ಳಿ ಅವರು ಮುಖ್ಯ ಭದ್ರತಾ ಮತ್ತು ಜಾಗ್ರತಧಿಕಾರಿಯಾಗಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ. ಕಾರಣ ಅವರಿಗೆ ದೈಹಿಕ ಸಮಸ್ಯೆ ಇದ್ದು, ಅವರು ಸದೃಢವಾಗಿರದ ಕಾರಣ ಅವರನ್ನು ಈಗ ಬಿಎಂಟಿಸಿಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಮುಂದುವರಿಯುವುದು ಸೂಕ್ತವಾಗಿದ್ದು, ಅವರ ಆರೋಗ್ಯವು ಮುಖ್ಯ ಎಂದು ಯಾಕೂಬ್ ನಾಟಿಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Related









