NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಪ್ರಭಾವ ಬೀರಿ ಒಂದೇಕಡೆ 14 ವರ್ಷಕ್ಕೂ ಹೆಚ್ಚು ಕಾಲ ಬೇರುಬಿಟ್ಟಿದ್ದ ಅಧಿಕಾರಿ ದಂಪತಿ ಬಿಎಂಟಿಸಿಗೆ ವರ್ಗಾವಣೆ

14 ವರ್ಷಕ್ಕೂ ಹೆಚ್ಚು ಕಾಲ ವರ್ಗಾವಣೆಯಾಗದೆ ಇದ್ದ ಆನಂದ ಭದ್ರಕಳ್ಳಿ ಪತ್ನಿ ಜಿ.ಎಸ್.ಶ್ರೀದೇವಿ
ವಿಜಯಪಥ ಸಮಗ್ರ ಸುದ್ದಿ
  • ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ವರ್ಗಾವಣೆ ಆದೇಶ ಸಮಂಜಸ ಎಂದ ಯಾಕೂಬ್‌ ನಾಟಿಕರ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಮುಖ್ಯ ಭದ್ರತಾ ಮತ್ತು ಜಾಗ್ರತಧಿಕಾರಿ ಆನಂದ ಭದ್ರಕಳ್ಳಿ ಹಾಗೂ ಅವರ ಪತ್ನಿ ಜಿ.ಎಸ್.ಶ್ರೀದೇವಿ ಅವರು 14 ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಕಲ್ಯಾಣ ಕರ್ನಾಟಕ ನಿಗಮದಿಂದ ಬಿಎಂಟಿಸಿಗೆ ಇದೇ ನ.21ರಂದು ಆಡಳಿತದ ಕಾರಣಗಳ ಮೇರೆಗೆ ವರ್ಗಾವಣೆ ಮಾಡಲಾಗಿದೆ.

ಕೆಕೆಆರ್‌ಟಿಸಿ ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಲೆಕ್ಕಾಧಿಕಾರಿ (ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಕಾರ್ಯಭಾರದಲ್ಲಿದ್ದ) ಜಿ.ಎಸ್.ಶ್ರೀದೇವಿ ಅವರನ್ನು ಬಿಎಂಟಿಸಿಗೆ ಉಪ ಮುಖ್ಯ ಲೆಕ್ಕಾಧಿಕಾರಿಯಾಗಿಯೂ ಹಾಗೂ ಕೆಕೆಆರ್‌ಟಿಸಿ ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಮುಖ್ಯ ಭದ್ರತಾ ಮತ್ತು ಜಾಗ್ರತಧಿಕಾರಿಯಾಗಿದ್ದ ಆನಂದ ಭದ್ರಕಳ್ಳಿ ಅವರನ್ನು ವಡ್ಡರಹಳ್ಳಿಯಲ್ಲಿರುವ ಬಿಎಂಟಿಸಿಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಆದರೆ, ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಒಂದೇಕಡೆ ಇದ್ದು ಎರಡೆರಡು ಬಡ್ತಿ ಪಡೆದಿದ್ದರೂ ಈಗಲೂ ಅಲ್ಲೇ ಇರಬೇಕು ಎಂದು ರಾಜಕಾರಣಿಳಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಕ್ಕೆ ಮುಂದಾಗಿದ್ದಾರೆ ಎಂದು KPCC ಅಲ್ಪ ಸಂಖ್ಯಾತರ ಘಟಕ ಹಾಗೂ ರಾಜ್ಯ ಸಂಚಾಲಕರು ಅಹಿಂದ ಚಳುವಳಿ, ರಾಜ್ಯ ಕಾರ್ಯದರ್ಶಿ ಯಾಕೂಬ್‌ ನಾಟಿಕರ ಆರೋಪಿಸಿದ್ದಾರೆ.

ಆನಂದ ಭದ್ರಕಳ್ಳಿ, ಪತ್ನಿ ಜಿ.ಎಸ್.ಶ್ರೀದೇವಿ ಅವರ ಬಗ್ಗೆ ಮಾಹಿತಿ ಕಲೆಹಾಕಿದ ಯಾಕುಬ್‌ ನಾಟಿಕರ

ಅಲ್ಲದೆ ಈ ಇಬ್ಬರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಯಾಕೂಬ ನಾಟಿಕಾರ ಸ್ವಾಗತಿಸಿದ್ದು, ಒಂದೇ ಸ್ಥಳದಲ್ಲಿ ಅವಧಿ ಮೀರಿ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಈಗ ಉತ್ತರ ಕರ್ನಾಟಕ ಭಾಗದ ಕೆಲ ಶಾಸಕರಿಂದ ಶಿಫಾರಸು ಪತ್ರಗಳನ್ನು ಪಡೆದುಕೊಂಡು ಮರಳಿ ಕೆಕೆಆರ್‌ಟಿಸಿಗೆ ಬರಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೀವದಲ್ಲಿ ಯಲ್ಲರಿಗೂ ಕಷ್ಟಗಳು ಬರುವುದು ಸರ್ವೇ ಸಾಮಾನ್ಯ. ಆ ಕಷ್ಟಗಳನ್ನು ಎದುರಿಸಿ ಜೀವನ ಮುನ್ನಡೇಸಬೇಕು ಅದನ್ನು ಬಿಟ್ಟು ನಮಗೆ ಮತ್ತೆ ವೈದ್ಯಕಿಯ ಹಾಗೂ ಮಕ್ಕಳ ಆರೋಗ್ಯ ಮತ್ತು ಆರೈಕೆಗಾಗಿ ವರ್ಗಾವಣೆ ಆದೇಶವನ್ನು ರದ್ದುಮಾಡಿ ಮರಳಿ ಕಲ್ಯಾಣ ನಿಗಮಕ್ಕೆ ವರ್ಗಾವಣೆ ಮಾಡಿ ಅಂತಾ ಶಿಫಾರಸು ಮಾಡಿಸುವುದು ಅವರ ಯೋಗ್ಯತೆಗೆ ತಕ್ಕದಲ್ಲ ಎಂದು ಹೇಳಿದ್ದಾರೆ.

ಇನ್ನು ಇವರು ಒಂದೇ ಸ್ಥಳದಲ್ಲಿ 14 ವರ್ಷಕ್ಕೂ ಮೇಲ್ಪಟ್ಟು ಕೆಲಸ ಮಾಡುತ್ತಿದ್ದಾರೆ. ಸೇವಾ ಅವಧಿಯಲ್ಲಿ ಇಲ್ಲಿಯವರೆಗೆ ಯಾವುದೇ ನೌಕರರಿಗೆ ಸಹಾಯ ಮಾಡಿದ ನಿರ್ದೇಶನಗಳಿಲ್ಲ ಆದ್ದರಿಂದ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಪ್ರಧಾನ ಕಾರ್ಯದರ್ಶಿ ಸಾರಿಗೆ ಇಲಾಖೆ ಹಾಗೂ KSRTC ವ್ಯವಸ್ಥಾಪಕ ನಿರ್ದೇಶಕರು ಮತ್ತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ರದ್ದು ಮಾಡಿ ನಿಯೋಜನೆ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.

ಇನ್ನು ಆನಂದ ಭದ್ರಕಳ್ಳಿ ಅವರು ಮುಖ್ಯ ಭದ್ರತಾ ಮತ್ತು ಜಾಗ್ರತಧಿಕಾರಿಯಾಗಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ. ಕಾರಣ ಅವರಿಗೆ ದೈಹಿಕ ಸಮಸ್ಯೆ ಇದ್ದು, ಅವರು ಸದೃಢವಾಗಿರದ ಕಾರಣ ಅವರನ್ನು ಈಗ ಬಿಎಂಟಿಸಿಯ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಮುಂದುವರಿಯುವುದು ಸೂಕ್ತವಾಗಿದ್ದು, ಅವರ ಆರೋಗ್ಯವು ಮುಖ್ಯ ಎಂದು ಯಾಕೂಬ್‌ ನಾಟಿಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ ಕಾಂಗ್ರೆಸ್​​ ಹಿರಿಯ ನಾಯಕ ಮಾಜಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ನಿಧನ ಕಾರಿನ ಟೈಯರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿ: ಕಾರಿನಲ್ಲಿದ್ದ ಐವರು ಸ್ಥಳದಲ್ಲೇ‌ ಮೃತ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌