ಬೆಂಗಳೂರು: ವಿಶ್ವ ಮಾರಿ ಕೊರೊನಾ ಇಂದು ಸಹ ರಾಜ್ಯದಲ್ಲಿ ಅಬ್ಬರಿಸಿದ್ದು ಬರೋಬ್ಬರಿ 5199 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 96141 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ತನ್ನ ಮರಣ ಮೃದಂಗವನ್ನು ತೀವ್ರಗೊಳಿಸಿದ್ದು ಇಂದು 82 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1886 ಕ್ಕೆ (ಅನ್ಯ ಕಾರಣಕ್ಕೆ 8ಸೇರಿ) ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಇಂದು 1950 ಮಂದಿ ಹೊಸದಾಗಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 29 ಮಂದಿ ಮೃತಪಟ್ಟಿದ್ದಾರೆ. ಇನ್ನು ಬಳ್ಳಾರಿಯಲ್ಲಿ 579, ಮೈಸೂರಿನಲ್ಲಿ 230 , ಬೆಂಗಳೂರು ಗ್ರಾಮಾಂತರ 213, ದಕ್ಷಿಣ ಕನ್ನಡ 199, ಉಡುಪಿ 169, ಧಾರವಾಡ 165, ಹಾಸನ 164, ಕಲಬುರಗಿ, ಬೆಳಗಾವಿ 163, 152, ವಿಜಯಪುರ 132, ರಾಯಚೂರು 131, ದಾವಣಗೆರೆ 89, ಉತ್ತರ ಕನ್ನಡ 85, ಚಿಕ್ಕಬಳ್ಳಾಪುರ 81, ಬೀದರ್ 77, ಮಂಡ್ಯ 64, ಗದಗ ಮತ್ತು ಚಿಕ್ಕಮಗಳೂರು ತಲಾ 61, ಯಾದಗಿರಿ 56, ಚಿತ್ರದುರ್ಗ 53, ಕೋಲಾರ 49, ಹಾವೇರಿ 47, ತುಮಕೂರು 46, ಬಾಗಲಕೋಟೆ 41, ಕೊಪ್ಪಳ 40, ಶಿವಮೊಗ್ಗ 39, ಚಾಮರಾಜನಗರ 28, ಕೊಡಗು 20 ಮತ್ತು ರಾಮನಗರ 15 ಸೇರಿ ಒಟ್ಟು 5199 ಹೊಸ ಪ್ರಕರಣಗಳು ಇಂದು ರಾಜ್ಯದಲ್ಲಿ ಪತ್ತೆಯಾಗಿವೆ.
ಇನ್ನು ಬೆಂಗಳೂರಿನಲ್ಲಿ 647 ಮಂದಿ ಸೇರಿ ರಾಜ್ಯದಲ್ಲಿ 2088 ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಧಾರವಾಡ, ಬೆಳಗಾಗಿ, ಕಲಬುರಗಿಯಲ್ಲಿ ತಲಾ 6, ಮೈಸೂರು, ತುಮಕೂರಿನಲ್ಲಿ ತಲಾ 5 ಮಂದಿ ಮೃತಪಟ್ಟಿದ್ದಾರೆ.
ಭಾತರ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳ ಕೊರೊನಾ ಸೋಂಕಿತರ ಅಂಕಿ ಅಂಶಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail