CRIMENEWSನಮ್ಮರಾಜ್ಯ

ಬೀದರ್: ಸಾರಿಗೆ ಚಾಲನಾ ಸಿಬ್ಬಂದಿಯ ಬೈದಿದ್ದ ಆಟೋ ಚಾಲಕನ ಬಂಧನ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಚಾಲನಾ ಸಿಬ್ಬಂದಿಯನ್ನು ಅತ್ಯಂತ ಕೀಳಾಗಿ ಬೈದಿದ್ದ ಆಟೋ ಚಾಲಕನನ್ನು ಬೀದರ್‌ ಪೊಲೀಸರು ರಾತ್ರಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಶುಕ್ರವಾರ ಭಾರತೀಯ ಮಜ್ದೂರ ಸಂಘದ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರೆಪ್ಪನೋರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿ ಜಾನ್‌ಸನ್ ಎಂಬುವರು ನೂತನ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.

ದೂರು ನೀಡಿದ 12 ಗಂಟೆಯೊಳಗೆ ಆಟೋ ಚಾಲಕ ಆರೋಪಿಯನ್ನು ಬಂಧಿಸಿರುವ ಪೊಲೀರು ಇಂದು (ಡಿ.6) ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆ.ಎಸ್.ಆರ್.ಟಿ.ಸಿಯ ಚಾಲಕರಿಗೆ ಮನಬಂದಂತೆ ಅವಾಚ್ಯ ಶಬ್ದದಿಂದ ಬೈದಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿರುವ ಬಿಎಂಎಸ್‌ ಪದಾಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ (04-12-2025) ಮಧ್ಯಾಹ್ನ ಸಾಮಾಜಿಕ ಜಾಲತಾಣವಾದ instagram ID: Mr_smile_009 ರಿಂದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಚಾಲಕ, ನಿರ್ವಾಹಕರಿಗೆ ಹೆಂಡತಿ, ತಾಯಿ, ತಂಗಿಯನ್ನುವುದನ್ನೇ ಮರೆತು ಅವಾಚ್ಯ ಶಬ್ದದಿಂದ ಬೈದಿರುವುದಕ್ಕೆ ಭಾರಿ ನೊಂದುಕೊಂಡಿದ್ದಾರೆ.

ಈ ಸಂಬಂಧ ದೂರು ನೀಡಿದ ಬಿಎಂಎಸ್‌ ಪದಾಧಿಕಾರಿಗಳು ತಾವು ಈ ವಿಷಯವನ್ನು ಅತಿ ಗಂಭೀರವಾಗಿ ಪರಿಗಣಿಸಿ instagram ID: Mr_smile_009 ಸಂಬಂಧ ಪಟ್ಟ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ  ಸಂಬಂಧ ಎಫ್‌ಐಆರ್‌ ದಾಖಲಿಸಿದ ಪೊಲೀಸರು ರಾತ್ರಿ 10 ಗಂಟೆ ಸುಮಾರಿಗೆ ಆರೋಪಿಯನ್ನು ಬಂಧಿದ್ದಾರೆ.

ಹಗಲಿರುಳೆನ್ನದೇ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ನಿಗಮದ ನೌಕರರಿಗೆ ಈತ ಮಾಎಇರುವ ವಿಡಿಯೋ ನೋಡಿ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಅಲ್ಲದೆ ಸಾರ್ವಜನಿಕರಲ್ಲಿ ನಿಗಮದ ನೌಕರರ ಮರ್ಯಾದೆ ಕಳೆದಿದ್ದಾನೆ. ನಿಗಮದ ನೌಕರರ ಗೌರವಕ್ಕೆ ಧಕ್ಕೆ ತರುವಂತ ಈ ವಿಡಿಯೋ ಮಾಡಿ ಸರ್ಕಾರದ ಅಂಗ ಸಂಸ್ಥೆ ಕೆ.ಎಸ್.ಆರ್.ಟಿ.ಸಿಯ ಗೌರವಕ್ಕೂ ಧಕ್ಕೆ ಉಂಟು ಮಾಡಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ತಕ್ಕ ಪಾಠ ಕಲಿಸಬೇಕು.
l ಗಣಪತಿ ಸಕ್ರೆಪ್ಪನೋರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಭಾರತೀಯ ಮಜ್ದೂರ ಸಂಘ ಬೀದರ್

Megha
the authorMegha

Leave a Reply

error: Content is protected !!