NEWSನಮ್ಮಜಿಲ್ಲೆಶಿಕ್ಷಣ

NWKRTC: ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಬುಕ್‌ಮಾಡಿದ್ದು ಹೊಸ ಬಸ್‌ ಕೊಟ್ಟಿರುವುದು ಹಳೇ ಬಸ್‌- ಡಿಎಂ ವಿರುದ್ಧ ಡಿಡಿಪಿಐ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಕಾರವಾರ: ವಾಯವ್ಯ ಕರ್ನಾಟ ರಸ್ತೆ ಸಾರಿಗೆ ನಿಗಮದ ಕಾರವಾರ ಘಟಕದ ಮ್ಯಾನೇಜರ ಹಾಗೂ ತಾಂತ್ರಿಕ AWS ಶೈಕ್ಷಣಿಕ ಪ್ರವಾಸಕ್ಕೆ ಒಪ್ಪಂದದ ಪ್ರಕಾರ ಕಳಿಸಬೇಕಾದ ಬಸ್‌ ಕಳಿಸದೆ ಹಳೇ ಬಸ್‌ ಕಳಿಸುವ ಮೂಲಕ ಯಾಮಾರಿಸಿದ್ದಾರೆ.

ಇನ್ನು ಈ ಬಗ್ಗೆ ಆಕ್ರೋಶಗೊಂಡ ಉತ್ತರ ಕನ್ನಡ ಜಿಲ್ಲಾ ಕಾರವಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಆಡಳಿತ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹೆಚ್ಚಿಗೆ ಹಣ ಪಡೆದು ಹಳೇ ಬಸ್‌ (ಕಡಿಮೆ ಹಣದ ಬಸ್‌) ನೀಡಿ ಯಾಮಾರಿಸಿದ್ದಕ್ಕೆ ಕಾರವಾರ ಡಿಪೋ ಮ್ಯಾನೇಜರ ಹಾಗೂ ತಾಂತ್ರಿಕ AWS ಅವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗಿದ್ದು ಏನು?: ಶೈಕ್ಷಣಿಕ ಪ್ರವಾಸ ಸಿರ್ಸಿಗೆ ಕಾರವಾರದ ತೊಡುರ, ಬೇಲಿಕೇರಿ, ಕುಮಟಾ ಮಾರ್ಗವಾಗಿ ಸಿರ್ಸಿ ಮಾರಿಕಾಂಬ ಕ್ರೀಡಾಂಗಣ ಸ್ಪೋರ್ಟ್ ಗೆ BS-6 ಬಸ್ಸನ್ನು ಬುಕ್ ಮಾಡಲಾಗಿತ್ತು. ಆದರೆ, ಯಾರಿಗೂ ಸಂಶಯ ಬರುದಂತೆ
KA31 F1253 BS III ಬಸ್‌ ಕಳಿಸಿ BS-6 ಬಸ್‌ ಎಂದು ಯಾಮಾರಿಸಿದ್ದಾರೆ ಕಾರವಾರ ಘಟಕದ ಅಧಿಕಾರಿಗಳು.

ಇನ್ನು ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಿರುವ ಕಾರವಾರ ಡಿಪೋದ ಮ್ಯಾನೇಜರ್‌ ಸೌಮ್ಯ ನಾಯಕ ಮತ್ತು AWS ತಾಂತ್ರಿಕ ಅಧಿಕಾರಿ ದತ್ತಾ ನಾಯಕ ನಿನ್ನೆ ಅಂದರೆ, ಮಾ.9 ರಂದು ಶ್ರೇಕ್ಷಣಿಕ ಪ್ರವಾಸ (ಶಿರಶಿ ಮಾರಿಕಾಂಬಾ ಕ್ರಿಡಾಂಗಣಕ್ಕೆ )ಕ್ಕೆ BS -6 ಬಸ್‌ ಮುಂಗಡವಾಗಿ ಬುಕ್ ಮಾಡಿದ್ದು, BS-III ಬಸನ್ನು (ಹಳೆ KA 31 F 1253 ಲೋಕಲ್ ಓಡಾಡಿಕೊಂಡು ಇರುವ ಬಸನ್ನು ಕಳಿಸಿದ್ದಾರೆ)

ಇದು ಕಾರವಾರದ ತೋಡುರ ಗ್ರಾಮ – ಬೇಲೇಕೆರಿ ಖಾರ್ವಿವಾಡ, ಕುಮಟಾದ ವಿದ್ಯಾರ್ಥಿಗಳನ್ನು ಕರೆದೊಯ್ಯವ ಲಟಾರಿ ಬಸ್‌. ಇದನ್ನು ಕುಮುಟಾದಲ್ಲಿ ನೋಡಿದ ಉಪ ನಿರ್ದೇಶಕರಾದ ಸಮನ್ವಯಾಧಿಕಾರಿಗಳು ಕೊಪಗೊಂಡು ನಾವು ಮಕ್ಕಳ ಆರೋಗ್ಯ & ಸುರಕ್ಷತೆಗೆ ಹೆಚ್ಚಿಗೆ ಹಣ ನೀಡಿ ಒಳ್ಳೆ ಬಸ್‌ ಬುಕ್ ಮಾಡಿದ್ದೇವೆ.

ಆದರೆ, ತದನಂತರದಲ್ಲಿ ಹಳೆ ಲಟಾರಿ BS-III ಬಸನ್ನು ಕಳಿಸಿದ್ದೀರಿ ಈ ಬಸ್‌ನ್ನು ಶಿರಶಿ ಮುಖ್ಯ ಕಚೇರಿ ಬಾಗಿಲಲ್ಲಿ ನಿಲ್ಲಿಸುತ್ತೇವೇ ಎಂದು ಆಕ್ರೊಶ ವ್ಯಕ್ತ ಪಡಿಸಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಕಾರವಾರ ಡಿಪೊ ಮ್ಯಾನೇಜರ್‌ ಈ ವಿಷಯ ನನಗೆ ಗೊತ್ತಿಲ್ಲದಂತೆ ಆಗಿದ್ದು, ಅದನ್ನು ನಾವು ಸರಿಪಡಿಸುತ್ತೇವೆ ಎಂದು ನಟಿಸಿ ತದನಂತರದಲ್ಲಿ ಕುಮಟಾ ಡಿಪೋದಿಂದ BS-6 ಬಸ್‌ ವ್ಯವಸ್ಥೆ ಮಾಡಿದ್ದಾರೆ.

ಆದರೆ, ಈರೀತಿಯ ಬೇಜವಾಬ್ದಾರಿಯಿಂದ ಡಿಪೋ ಮಟ್ಟದ ಅಧಿಕಾರಿಗಳು ನಡೆದುಕೊಂಡು ಪ್ರವಾಸದಲ್ಲಿರುವ ಮಕ್ಕಳ ಜೀವಗಳ ಜತೆ ಚೆಲ್ಲಾಟವಾಡುತ್ತಿರುವುದು ಎಷ್ಟರ ಮಟ್ಟಿಗ ಸರಿ ಎಂಬ ಆಕ್ರೋಶದಿಂದ ಪ್ರಜ್ಞಾವಂತರು ಕಿಡಿಕಾರಿದ್ದಾರೆ.

ಇನ್ನಾದರೂ ಈ ರೀತಿಯ ತಪ್ಪುಗಳನ್ನು ಬೇಕು ಬೇಕು ಎಂದಂತೆ ಮಾಡುವುದು ಸರಿಯಲ್ಲ ಮುಂದೆ ಇದೇ ರೀತಿಯಾದರೆ ನಾವು ಸರ್ಕಾರಕ್ಕೆ ಪತ್ರ ಬರೆದು ಖಾಸಗಿ ಬಸ್‌ಗಳ ಸೇವೆ ಪಡೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಅಲ್ಲದೆ ಅದಕ್ಕೆ ಆಗುವ ಪ್ರವಾಸ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಮನವಿ ಮಾಡುವುದಾಗಿ ಸೂಕ್ಷ್ಮವಾಗಿ ಅಧಿಕಾರಿಗಳು ಸಾರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!
Latest news
ಡಿಸಿಎಂ ಸೇರಿ 13 ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕಚೇರಿ ಹಂಚಿಕೆ ಮಾಡಿ ಆಡಳಿತ ಸುಧಾರಣೆ ಇಲಾಖೆ ಆದೇಶ ಇದುವರೆಗೂ ನಡೆಸಿರುವ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ: ಕೇಂದ್ರ ಸರ್ಕಾರದ ವಿರುದ್ಧ EPS ನಿವೃತ್ತರು ಆಕ್ರೋಶ ರಾತ್ರಿ ಘಟಕದ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದ KSRTC ಬಸ್‌ ಕದ್ದು ಅಪಘಾತ ಎಸಗಿ 1.5 ಕಿಮೀ ದೂರದಲ್ಲಿ ಬಿಟ್ಟು ಪರಾರಿಯಾ... KSRTC ಬಸ್ – ಲಾರಿ ನಡುವೆ ಭೀಕರ ಅಪಘಾತ- ಸಣ್ಣಪುಟ್ಟ ಗಾಯದೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು KKRTC: ಜೂ.14ರೊಳಗೆ ಡ್ಯೂಟಿ ರೋಟಾ ಬ್ಲಾಕ್ ಪ್ರದರ್ಶಿಸಿ, ಜೂ.18ರೊಳಗೆ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ-ಡಿಸಿಗಳಿಗೆ ಸೂಚನ... ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು: ಸಿಎಂ ಡಿಕೆಶಿ ನೂತನ ಸಿಎಂ ಡಿಕೆಶಿಗೆ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ KKRTC: ನೌಕರರ ಮೇ ತಿಂಗಳ ವೇತನ ನಾಳೆ ಆಗುತ್ತದೆ, ಗೊಂದಲ ಬೇಡ: ಸಿಎಒ ಸ್ಪಷ್ಟನೆ KSRTC: ಮೂರು ವರ್ಷಕ್ಕೂ ಹೆಚ್ಚುಕಾಲ ಒಂದೇ ಕಡೆ ಬೇರುಬಿಟ್ಟಿರುವ ನೌಕರರ ವರ್ಗಾವಣೆಗೆ ಆದೇಶ ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕ್‌ ಕೊಟ್ಟ ಕೇಂದ್ರ ಸರ್ಕಾರ: ಗೃಹಬಳಕೆ ಗ್ಯಾಸ್‌ ಸಿಂಡರ್‌ಗೆ 29 ರೂ. ಏರಿಕೆ, ಇಂದಿನಿಂದ...