ರಾತ್ರಿ ಘಟಕದ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದ KSRTC ಬಸ್ ಕದ್ದು ಅಪಘಾತ ಎಸಗಿ 1.5 ಕಿಮೀ ದೂರದಲ್ಲಿ ಬಿಟ್ಟು ಪರಾರಿಯಾದ ಖದೀಮ
ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹೊರಗೆ ನಿಲ್ಲಿಸಿದ್ದ ಸಾಮಾನ್ಯ ಬಸ್ (ಆರ್‌ಎನ್‌ಇ 857) ಅನ್ನು ಅಪರಿಚಿತ ಖದೀಮ ಬೆಳಗಿನ ಜಾವ 2.50 ರ ಸುಮಾರಿಗೆ ಚಲಾಯಿಸಿಕೊಂಡು ಪರಾರಿಯಾಗಿದ್ದ. ಆ ಬಳಿಕ ಬೆಳಗ್ಗೆ 5.15ರ ಸುಮಾರಿಗೆ ಮಂಗಳಂ ಟವರ್ ಬಳಿ ಬಸ್ ಪತ್ತೆಯಾಗಿದೆ. ಈ ಸಂಬಂಧ ಪಾಲಕ್ಕಾಡ್ ಪಟ್ಟಣ ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ

ಪಾಲಕ್ಕಾಡ್: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ಸನ್ನು ಪಾಲಕ್ಕಾಡ್ ಡಿಪೋದಿಂದ ಕಳವು ಮಾಡಿದ ಅಪರಿಚತ ವ್ಯಕ್ರ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗಿ ಅಂಗಡಿಯೊಂದಕ್ಕಿ ಡಿಕ್ಕಿ ಹೊಡೆದು ಸ್ಪಲ್ಪದೂರಲ್ಲಿ ಬಿಟ್ಹೋಗಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.
ಈ ಕಳವು ಪ್ರಕರಣ ಪೊಲೀಸರು ಮತ್ತು ನಿಗಮದ ಅಧಿಕಾರಿಗಳ ನಿದ್ದೆಗೆಡಿಸಿದ್ದು, ಎರಡು ಗಂಟೆಗಳಿಗೂ ಹೆಚ್ಚು ಕಾಲ ಹುಡುಕಾಡಿದ ಬಳಿಕ ಬಸ್ ನಿಲ್ದಾಣದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ಬಸ್ ಸಿಕ್ಕಿದೆ.
ಪಾಲಕ್ಕಾಡ್ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹೊರಗೆ ನಿಲ್ಲಿಸಿದ್ದ ಸಾಮಾನ್ಯ ಬಸ್ ಅನ್ನು ಅಪರಿಚಿತ ಖದೀಮ ಬೆಳಗಿನ ಜಾವ 2.50 ರ ಸುಮಾರಿಗೆ ಚಲಾಯಿಸಿಕೊಂಡು ಪರಾರಿಯಾಗಿದ್ದ. ಆ ಬಳಿಕ ಬೆಳಗ್ಗೆ 5.15ರ ಸುಮಾರಿಗೆ ಮಂಗಳಂ ಟವರ್ ಬಳಿ ಬಸ್ ಪತ್ತೆಯಾಗಿದೆ. ಈ ಸಂಬಂಧ ಪಾಲಕ್ಕಾಡ್ ಪಟ್ಟಣ ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದು, ಖದೀಮನ ಪತ್ತೆಗೆ ಬಲೆ ಬೀಸಿದ್ದಾರೆ.
ರಾತ್ರಿ ಬಸ್ಸನ್ನು ಡಿಪೋ ಆರಣದಿಂದ ಹೊರಗೆ ನಿಲ್ಲಿಸಲಾಗಿತ್ತು. “ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹೊರಗಿನ ಲಿಂಕ್ ರಸ್ತೆಯಲ್ಲಿ ಬಸ್ ನಿಲ್ಲಿಸಲಾಗಿತ್ತು. ಬೆಳಗಿನ ಜಾವ 2.50 ರ ಸುಮಾರಿಗೆ, ಒಬ್ಬ ವ್ಯಕ್ತಿ ಬಂದು ಬಸ್ಸನ್ನು ಹತ್ತಿ ವೇಗವಾಗಿ ಓಡಿಸಿಕೊಂಡು ಹೋಗುವುದನ್ನು ನಾವು ನೋಡಿದ್ದೇವೆ. ಅದನ್ನು ಕದ್ದಿರುವುದು ನಮಗೆ ತಕ್ಷಣ ಅರಿವಾಯಿತು ಮತ್ತು ಬಸ್ ಡಿಪೋ ಮುಂದೆ ನಿಂತಿದ್ದ ಪೊಲೀಸ್ ಗಸ್ತು ತಂಡಕ್ಕೆ ಮಾಹಿತಿ ನೀಡಿದೆವು ಎಂದು ಬಸ್ ನಿಲ್ಲಿಸಿದ್ದ ಚಾಲಕ ನಾಸರ್ ಅಲಿ ಕೆ. ತಿಳಿಸಿದರು.
ಕೂಡಲೇ ಪೊಲೀಸ್ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಸಂಸ್ಥೆಯ ಚಾಲಕರು ಪ್ರತ್ಯೇಕವಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಒಂದು ತಂಡ ಪೊಲೀಸ್ ಗಸ್ತಿನೊಂದಿಗೆ ಬಂದರೆ, ಡಿಪೋ ಮೇಲ್ವಿಚಾರಕರ ನೇತೃತ್ವದಲ್ಲಿ ಮತ್ತೊಂದು ತಂಡ ಪಟ್ಟಣದ ವಿವಿಧ ಭಾಗಗಳಲ್ಲಿ ಶೋಧ ನಡೆಸಿತು. ಹಲವಾರು ನೌಕರರು ಬೈಕ್‌ಗಳಲ್ಲಿ ಬಸ್ ಹುಡುಕುವುದಕ್ಕೆ ಹೊರಟರು.
“ಬೆಳಗ್ಗೆ 5 ಗಂಟೆಯಾದರೂ ಬಸ್ ಕಾಣಿಸದಿದ್ದಾಗ ನಾವು ಬಹುತೇಕ ಭರವಸೆ ಕಳೆದುಕೊಂಡಿದ್ದೆವು ಮತ್ತು ದೂರು ದಾಖಲಿಸಲು ನಾವು ಟೌನ್ ಸೌತ್ ಪೊಲೀಸ್ ಠಾಣೆಗೆ ಹೋದೆವು. ಸ್ವಲ್ಪ ಸಮಯದ ನಂತರ, ಪೊಲೀಸ್ ತಂಡವು ಮಂಗಳಂ ಟವರ್ ಬಳಿ ರಸ್ತೆಯ ಬಲ ಬದಿಯಲ್ಲಿ ಬಸ್ ನಿಲ್ಲಿಸಿರುವುದನ್ನು ನೋಡಿ ವಿಷಯ ತಿಳಿಸಿದರು ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಖದೀಮ ಬಸ್ಸನ್ನು ಹೇಗೆ ಸ್ಟಾರ್ಟ್ ಮಾಡಿದನೆಂದು ಕೇಳಿದಾಗ ಅಧಿಕಾರಿಗಳು, “ಬಸ್ ಹಳೆಯದಾಗಿದ್ದರಿಂದ, ಅದಕ್ಕೆ ಕೀ ಅಗತ್ಯವಿರಲಿಲ್ಲ. ಅದಕ್ಕೆ ಬಟನ್ ಸಿಸ್ಟಂ ಅಳವಡಿಸಲಾಗಿದ್ದು ಆ ಗುಂಡಿಯನ್ನು ಒತ್ತಿದರೆ ಸಾಕು ಬಸ್ ಸ್ಟಾರ್ಟ್ ಮಾಡಬಹುದು ಎಂದು ಹೇಳಿದರು.
ಇನ್ನು ಕಳವು ಮಾಡಿ ಗಾಬರಿಯಿಂದ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬಸ್ ಮೆಲಮುರಿ ಬಳಿ ಎರಡು ಕಾಂಪೌಂಡ್ ಗೋಡೆಗಳು ಮತ್ತು ರಸ್ತೆ ಬದಿಯ ಚಹಾ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದ್ದು, ಬಸ್‌ನ ಬಲಭಾಗಕ್ಕೆ ತೀವ್ರ ಹಾನಿಯಾಗಿದೆ. ಆದಾಗ್ಯೂ, ವಾಹನದಿಂದ ದುಷ್ಕರ್ಮಿ ಓಡಿಹೋಗಿದ್ದು ಆತನ ಸುಳಿವು ಪತ್ತರಯಾಗಿಲ್ಲ.
ಇತ್ತ ಶಂಕಿತನನ್ನು ಗುರುತಿಸಲು ಮತ್ತು ಬಸ್ಸನ್ನು ಪಾರ್ಕಿಂಗ್ ಪ್ರದೇಶದಿಂದ ಹೇಗೆ ತೆಗೆದುಕೊಂಡು ಹೋದ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಬಸ್ ಡಿಪೋ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಕಳ್ಳತನದ ಹಿಂದಿನ ಉದ್ದೇಶ ಏನು ಎಂಬುವುದು ಖದೀಮ ಸಿಕ್ಕಿದ ಮೇಲೆ ಸ್ಪಷ್ಟವಾಗಲಿದೆ.
ಯಾವಾಗಲು ಡಿಪೋ ವರೆಗೆ ಬಸ್‌ಗಳ ಅಕ್ರಮ ಪಾರ್ಕಿಂಗ್: ಇತ್ತ ಸ್ಥಳಾವಕಾಶದ ಕೊರತೆಯಿಂದಾಗಿ ಬಸ್ ಡಿಪೋ ಹೊರಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅಕ್ರಮವಾಗಿ ನಿಲ್ಲಿಸುವುದು ಹಲವು ತಿಂಗಳುಗಳಿಂದ ನಡೆದುಕೊಂಡು ಬಂದಿರುವ ಅಭ್ಯಾಸವಾಗಿದ್ದು ಈ ಘಟನೆ ಬಗ್ಗೆಯೂ ಈಗ ಭಾರಿ ಗಮನ ಸೆಳೆಯುತ್ತಿದೆ.
ಪಾಲಕ್ಕಾಡ್‌ನಿಂದ ಕೆಎಸ್‌ಆರ್‌ಟಿಸಿ ಬಸ್ ಕಳ್ಳತನವಾದ ಮೊದಲ ಪ್ರಕರಣ ಇದಾಗಿದೆ ಎಂದು ಹಿರಿಯ ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಡಿಪೋ ಆವರಣದೊಳಗೆ ಪಾರ್ಕಿಂಗ್ ಸ್ಥಳಾವಕಾಶದ ಕೊರತೆಯಿಂದಾಗಿ ನಿಲ್ದಾಣದ ಹೊರಗಿನ ಲಿಂಕ್ ರಸ್ತೆಯಲ್ಲಿ ರಾತ್ರಿಯಿಡೀ 35 ರಿಂದ 38 ಬಸ್‌ಗಳು ನಿಯಮಿತವಾಗಿ ನಿಲ್ಲುತ್ತವೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ನಮಗೆ ಡಿಪೋ ಆವರಣದ ಅಂದರೆ ಕಾಂಪೌಂಡ್ ಒಳಗೆ ಸಾಕಷ್ಟು ಸ್ಥಳವಿಲ್ಲ. ಪ್ರತಿ ರಾತ್ರಿ ಡಿಪೋದೊಳಗೆ ಸುಮಾರು 110 ಬಸ್‌ಗಳನ್ನು ನಿಲ್ಲಿಸಲಾಗುತ್ತದೆ, ಆದರೆ ಸುಮಾರು 40 ಅಂತರರಾಜ್ಯಕ್ಕೆ ಹೋಗುವ ಬಸ್‌ಗಳು ಸೇರಿದಂತೆ 105 ಬಸ್‌ಗಳು ರಾತ್ರಿ ಸಮಯದಲ್ಲಿ ಹೊರಡುವುದರಿಂದ ಬೆಳಗ್ಗೆ ರೂಟ್‌ಗೆ ನಿಗದಿಪಡಿಸಲಾದ ಬಸ್‌ಗಳನ್ನು ನಿಲ್ದಾಣದ ಹೊರಗೆ ನಿಲ್ಲಿಸಲಾಗುತ್ತದೆ. ಇದು ಕಾನೂನುಬಾಹಿರ ಎಂದು ನಮಗೆ ತಿಳಿದಿದೆ, ಆದರೆ ನಮಗೆ ಬೇರೆ ದಾರಿಯಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ಪ್ರತಿದಿನ ಈರೀತಿ ಡಿಪೋ ಹೊರಗೆ ಬಸ್‌ಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿರುವುದಕ್ಕೆ ಆಕ್ರೋಶಗೊಂಡ ವ್ಯಕ್ತಿ ರೀತಿ ಮಾಡಿರಬಹುದು ಎಂಬ ಬಗ್ಗೆಯೂ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಸದ್ಯ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.
Related









