KKRTC- ಡಿ.9ರಂದು ಬೀದರ್ ವಿಭಾಗ ಬಂದ್: ಸಾರಿಗೆ ಡಿಸಿಗೆ ಬಿಎಂಎಸ್ ಎಚ್ಚರಿಕೆ
ಬೀದರ್ ಬಿಎಂಎಸ್ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರೆಪ್ಪನೋರ್ ಬೀದರ್: ಆಟೋ ಚಾಲಕನೊಬ್ಬ ಸಾರಿಗೆ ಸಂಸ್ಥೆ ಹಾಗೂ ಸಂಸ್ಥೆಯ ನೌಕರರ ಬಗ್ಗೆ ಭಾರಿ ಕೆಟ್ಟದಾಗಿ ಬೈದು ಮಾತನಾಡಿರುವ ಬಗ್ಗೆ ಸಂಸ್ಥೆಯ ವತಿಯಿಂದ ಯಾವುದೇ ಹೇಳಿಕೆ ನೀಡದಿರುವುದು ಮತ್ತು ಹೋರಾಟದ ರೂಪರೇಷೆ ರೂಪಿಸದಿರುವುದು ಭಾರಿ ವಿಷಾದನೀಯ ಸಂಗತಿ ಎಂದು ಬೀದರ್‌ನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮದ್ದೂರ ಸಂಘ ಒಕ್ಕೂಟ ಖಂಡಿಸಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದೆ.

ಕೆಕೆಆರ್‌ಟಿಸಿ ಬೀದರ್ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಬಿಎಂಎಸ್ ಪದಾಧಿಕಾರಿಯೂ ಆದ ಬೀದರ್ ಘಟಕ -2ರ ಚಾಲಕ ಕಂ ನಿರ್ವಾಹಕ ಗುಂಡಪ್ಪಾ ಅವರು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲೇನಿದೆ?: 04-12-25 ರಂದು ಮದ್ಯಾಹ್ನ 4ಗಂಟೆಗೆ ಇನ್‌ಸ್ಟಾಗ್ರಾಮ್ ಐಡಿ ಮಿಸ್ಟರ ಸ್ಟೈಲ್-009 ಮತ್ತು ಫೆಸ್‌ಬುಕನಲ್ಲಿ ಸಂಸ್ಥೆಯ ಮತ್ತು ಸಂಸ್ಥೆಯ ನೌಕರರ ವಿರುದ್ಧ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದರು ತಾವು ಈವರೆಗೂ ಏಕೆ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಿಲ್ಲ?
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ 4-12-25ರಂದು ಮದ್ಯಾಹ್ನ 4 ಗಂಟೆಗೆ ಇನ್‌ಸ್ಟ್ರಾಗ್ರಾಮ್ ಐಡಿ ಮತ್ತು ಫೆಸ್‌ಬುಕನಲ್ಲಿ ಸಂಸ್ಥೆಯ ಮತ್ತು ಸಂಸ್ಥೆಯ ನೌಕರರ ವಿರುದ್ಧ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದು ಇದರ ಕರಿತು ಸಂಸ್ಥೆಯ ವತಿಯಿಂದ ಯಾವುದೆ ಕ್ರಮ ಜರುಗಿಸಿರುವುದಿಲ್ಲ.
ಈ ಮೋದಲು ಸಂಸ್ಥೆಗೆ ಆವೇಹಳನಕಾರಿಯಾಗಿ ಯಾರೆ ಮಾಡಿದರೂ ಸಂಸ್ಥೆ ಮತ್ತು ಸಿಬ್ಬಂದಿಯವರು ಒಟ್ಟಾಗಿ ಹೋರಾಟ ಮಾಡಿದ ನಿರ್ದೇಶನಗಳನ್ನು ತಾವು ನೋಡಬಹುದು. ಆದರೆ, ಗುರುವಾರ (ಡಿ.4ರ) ವಿಷಯ ಕುರಿತು ಸಂಸ್ಥೆಯ ವತಿಯಿಂದ ಯಾವುದೇ ಹೇಳಿಕೆ ನೀಡದಿರುವುದು ಮತ್ತು ಹೋರಾಟದ ರೂಪರೇಷಗಳನ್ನು ರೂಪಿಸದಿರುವುದು ವಿಷಾದನೀಯ.
ಭಾರತೀಯ ಮಜೂರ ಸಂಘವು ಈ ವಿಷಯದಲ್ಲಿ ಮುಂಚೂಣಿಯಲ್ಲಿ ನಿಂತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇನ್‌ಸ್ಪೆಕ್ಟರ್ ನ್ಯೂಟೌನ್ ಪೊಲೀಸರಿಗೆ ದೂರ ಸಲ್ಲಿಸಿದೆ. ಇದರ ಪರಿಣಾಮವಾಗಿ ನ್ಯೂಟೌನ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿ ಆಟೋ ಸೀಜ್ ಮಾಡಿ ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಮುಂದುವರಿದು ತಮ್ಮ ಗಮನಕ್ಕೆ ತರಬಯಸುವುದೇನೆಂದರೆ 8-12-2025ರ ಒಳಗಾಗಿ ಸಂಸ್ಥೆಯ ವತಿಯಿಂದ ಈ ವಿಷಯದ ಕುರಿತು ಯಾವುದೇ ಕ್ರಮ ಜರುಗಿಸಿ ಸಂಘಕ್ಕೆ ಮಾಹಿತಿಯನ್ನು ನೀಡದಿದಲ್ಲಿ 9-12-2025 ರಂದು ಬೀದರ್ ವಿಭಾಗ ಬಂದ್ ಮಾಡಲು ಸಂಘದ ವತಿಯಿಂದ ಕರೆ ನೀಡಲಾಗುವುದು.
ಈ ವಿಷಯದ ಕುರಿತು ಮನನೊಂದಿದ್ದು ರೋಚ್ಚಿಗೆದ ಸಿಬ್ಬಂದಿ ಯಾವುದೇ ಕ್ರಮ ಜರುಗಿಸಿದ್ದಲ್ಲಿ ಅದಕ್ಕೆ ಸಂಸ್ಥೆಯೇ ನೇರ ಹೊಣೆಯಾಗುತ್ತದೆ ಎಂದು ಬೀದರ್ ವಿಭಾಗದ ನೊಂದ ಸಾರಿಗೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.
Related









