KKRTC ಕಾಳಗಿ ಘಟಕ: ಡ್ಯೂಟಿ ಮಾಡಿದ ನೌಕರನಿಗೆ ಗೈರು ತೋರಿಸಿ 3 ದಿನದ ವೇತನ ಕಟ್ ಮಾಡಿದ ಅಧಿಕಾರಿಗಳು
ಚಾಲಕ ಕಂ ನಿರ್ವಾಹಕ ಮಲ್ಲಿಕಾರ್ಜುನ ಮಾಣಿಕಪ್ಪ ಕೊರವಿಕಾಳಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಾಳಗಿ ಘಟಕದಲ್ಲಿ ಡ್ಯೂಟಿ ಮಾಡುತ್ತಿದರುವ ಚಾಲಕ ಕಂ ನಿರ್ವಾಹಕ ಮಲ್ಲಿಕಾರ್ಜುನ ಮಾಣಿಕಪ್ಪ ಕೊರವಿ ಎಂಬುವರು ರಜೆ ಹಾಕಿದರೂ ಗೈರು ಹಾಜರಿ ತೋರಿಸಿ ವೇತನ ಕಡಿತಗೊಳಿಸುವ ಮೂಲಕ ಡಿಪೋ ವ್ಯವಸ್ಥಾಪಕರು ದೌರ್ಜನ್ಯ ಎಸಗಿದ್ದಾರೆ.

ಈ ಬಗ್ಗೆ ಸ್ವತಃ ಮಲ್ಲಿಕಾರ್ಜುನ ಮಾಣಿಕಪ್ಪ ಕೊರವಿ ಅವರೇ ನನ್ನ ಸಂಬಳ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಘಟಕದ ವ್ಯವಸ್ಥಾಪಕ ಯಶ್ವಂತ ಯಾತನೂರ ಅವರನ್ನು ವಿಚಾರಿಸಿದರೆ, ಮೇಲ್ವಿಚಾರಕ ಪೀರಪ್ಪ ಹೆಸರು ಹೇಳುತ್ತಾರೆ. ಅವರಿಗೆ ಕೇಳಿದರೆ ಇವರ ಹೆಸರು ಹೇಳುತ್ತಾರೆ ಹೀಗೆ ಜಾರಿಕೊಳ್ಳುವ ಜಾಣ್ಮೆಯನ್ನು ತೋರಿಸುತ್ತಾರೆ.
ಟಿಕೆಟ್ ಮಶಿನ್ ತೆಗೆದುಕೊಂಡು ಸಂಜೆವರೆಗೆ ಡಿಪೋದಲ್ಲಿ ಕುಳಿತರೂ ಡ್ಯುಟಿ ನೀಡಿಲ್ಲ ಆದ್ದರಿಂದ ನಾನು ರಜೆ ಹಾಕಿದ್ದೆ. ಅದನ್ನು ಗೈರು ಹಾಜರಿ ಎಂದು ಪರಿಗಣಿಸಿದ್ದಾರೆ. ಇದೇ ತರಹ ವಾರದ ಎರಡು ರಜೆಯನ್ನು ಗೈರು ಹಾಜರಿ ಎಂದು ನಮೂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಗಂಭೀರವಾಗಿ ಕೇಳಿದಾಗ ನವೆಂಬರ್ ತಿಂಗಳಲ್ಲಿ ಸರಿದೂಗಿಸೋಣ ಎಂದು ಹೇಳಿ ತಿಂಗಳು ಮುಗಿದರೂ ಲಂಚದ ಆಸೆಗೆ ಅವರು ಸರಿಪಡಿಸಿಲ್ಲ ಎಂದು ಆಪಾದಿಸಿದ್ದಾರೆ.
ಇತ್ತ ಕರ್ತವ್ಯ ನಿರ್ವಹಿಸಿದರೂ ಕೆಲವೊಮ್ಮೆ ಗೈರು ಹಾಜರಿ ತೋರಿಸುತ್ತಾರೆ. ಅಧಿಕಾರಿಗಳ ಈ ರೀತಿಯ ನಡತೆ ಆರು ತಿಂಗಳಿಂದ ಕಂಡುಬರುತ್ತಿದ್ದರೂ ಮುಗ್ಧ ಸಾರಿಗೆ ನೌಕರರು ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇಲಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಡಿಪೊ ಮ್ಯಾನೇಜರ್ ಯಶವಂತ ಯಾತನೂರ ಮಾತನಾಡಿದ್ದು, ಮೂರು ದಿನದ ಸಂಬಳ ಕಡಿತವಾಗಿರುವುದು ನಿಜ. ಪಗಾರ ಮಾಡುವಂತೆ ಮೇಲ್ವಿಚಾರಕರಿಗೆ ಹೇಳಿದ್ದೇನೆ. ಈ ತಿಂಗಳಲ್ಲಿ ಸರಿಪಡಿಸುವೆ ಎಂದು ಹೇಳಿದ್ದಾರೆ.
ಆದರೆ, ಈ ಸಾರಿಗೆ ನಿಗಮದ ಎಲ್ಲ ಬಹುತೇಕ ಎಲ್ಲ ಡಿಪೋಗಳಲ್ಲೂ ಇದೇ ನಾಟಕವನ್ನು ಅಧಿಕಾರಿಗಳು ಪ್ಲೇ ಮಾಡುತ್ತಿರುತ್ತಾರೆ. ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಈ ರೀತಿ ಸರಿ ಪಡಿಸುತ್ತೇವೆ ಎಂದು ಹೇಳುವ ಮೂಲಕ ನಾವು ನಿಷ್ಠಾವಂತ ಅಧಿಕಾರಿಗಳು ಎಂದು ತೋರಿಸಿಕೊಳ್ಳುತ್ತಾರೆ. ಇಂಥ ಭ್ರಷ್ಟರಿಗೆ ಕಾನೂನಾತ್ಮಕವಾಗಿ ಬುದ್ದಿ ಕಲಿಸಬೇಕಾದ ಸಂಸ್ಥೆಯ ಉನ್ನತ ಅಧಿಕಾರಿಗಳು ಮೌನಕ್ಕೆ ಶರಣಾಗುತ್ತಿರುವುದು ಭಾರಿ ನೋವಿನ ಸಂಗತಿಯಾಗಿದೆ.
ಇಲ್ಲಿ ಬಹುತೇಕ ಡಿಪೋ ವ್ಯವಸ್ಥಾಪಕರು ಅವರ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಹಂತದಲ್ಲಿ ಬರುವ ಇತರ ಅಧಿಕಾರಿಗಳು ಕೂಡ ಈ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಒಳ್ಳೆಯದು.
Related









