ನಾನು ಈ ಮೊದಲು ಹಲವು ಬಾರಿ ಕೆಲ ವಿಷಯಗಳನ್ನು ಪ್ರಸ್ತಾಪ ಮಾಡಿದ್ದುಂಟು ಯಾಕೆಂದರೆ ಸಾರಿಗೆ ನೌಕರರು ಅದರಲ್ಲೂ ವಿಶೇಷವಾಗಿ ತಾಂತ್ರಿಕ ಸಿಬ್ಬಂದಿಗಳು, ಚಾಲಕರು, ನಿರ್ವಾಹಕರು, ಭದ್ರತಾ ರಕ್ಷಕರು ಮತ್ತು ಘಟಕದಲ್ಲಿನ ಆಡಳಿತ ಸಿಬ್ಬಂದಿಗಳು ವೇತನ ಹೆಚ್ಚಳವಾಗದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕಷ್ಟದಲ್ಲಿ ದಿನದೂಡುತ್ತಿದ್ದಾರೆ.

ಅಂತದ್ರಲ್ಲಿ ಕೆಲ ಸಂಘಟನೆಗಳು ಪ್ರೇರೇಪಿಸುವ ಮಾತುಗಳಿಗೆ ಮರುಳಾಗಿ ಒಬ್ಬರಿಗೊಬ್ಬರು ಸಹೋದ್ಯೋಗಿಗಳೇ ಬಡಿದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇಂಥವರಿಂದ ಇನ್ನುಳಿದ ಎಲ್ಲ ಸಾರಿಗೆ ನೌಕರರಿಗೆ ತೊಂದರೆಯಾಗುತ್ತಿದ್ದು, ಅದನ್ನು ಗೊತ್ತಿದ್ದರೂ ಸಹ ಇಂಥವರ ವಿರುದ್ಧ ಸಿಡಿದೆಳದೇ ಅಸಹಾಯಕರ ತರ ಕರ್ತವ್ಯ ನಿರ್ವಹಿಸುವುದನ್ನು ನೋಡಿದರೆ ಅಷ್ಟೊಂದು ನಿರಾಭಿಮಾನ, ಶೋಚನೆಯ ಪರಿಸ್ಥಿತಿ ಬಂತಾ ನಮಗೆ ಎಂಬ ಸಂಶಯ ಹುಟ್ಟುತ್ತಿದೆ.
ಅಂದಹಾಗೆ ಸಹೋದ್ಯೋಗಿ ಮಿತ್ರರೆ ನಾವೆಲ್ಲ ಮುಂದಿನ ಪೀಳಿಗೆಗಾಗಿ ನಮ್ಮ ಭವಿಷ್ಯಕ್ಕೋಸ್ಕರ ಜಾಗೃತರಾಗಬೇಕು. ಇಂತಹ ಸ್ವ ಪ್ರತಿಷ್ಠೆಗೋಸ್ಕರ ನಾಲ್ಕು ನಿಗಮದ ನೌಕರರ ಹೊಟ್ಟೆಯ ಮೇಲೆ ಹೊಡೆದು, ಸರ್ಕಾರಕ್ಕೆ ಅಸ್ತ್ರವಾಗಿಸಿಕೊಡುತ್ತಿರುವ ದಲ್ಲಾಳಿಗಳ ವಿರುದ್ಧ ಸಿಡಿದೇಳ ಬೇಕಾಗಿದೆ.
ಇಂತಹ ದಲ್ಲಾಳಿಗಳನ್ನು ಮೆಟ್ಟಿ ಹೊಡೆದೋಡಿಸದಿದ್ದರೆ ಮುಂದೆ ಬರುವ ಸರ್ಕಾರ ಸಹ ನಮಗೆ ಕೀಳರಿಮೆಯಿಂದಲೇ ನೋಡುತ್ತದೆ. ಸ್ನೇಹಿತರೆ ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಚುನಾವಣೆಯ ಪೂರ್ವ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಂತೆ ಸಾರಿಗೆ ನೌಕರರಿಗೆ ಸ್ವಾಭಿಮಾನದಿಂದ ಬದುಕುವ ಅವಕಾಶ ನೀಡುವುದಕ್ಕಾಗಿ ಸಮಾನ ವೇತನ ನೀಡುವುದಾಗಿ ಭರವಸೆ ನೀಡಿ ಅಭೂತಪೂರ್ವವಾಗಿ ಗೆದ್ದು ಸುಭದ್ರ ಆಡಳಿತ ನಡೆಸುತ್ತಿದೆ.
ಅದರಂತೆ ಕೊಟ್ಟ ಭರವಸೆಯಂತೆ ಸಾರಿಗೆ ನೌಕರರ ಬೇಡಿಕೆ ಇಡೆರುಸುವಂತೆ ಈ ಕಡೆ ಒಂದು ವರ್ಗ ಒತ್ತಾಯಿಸುತ್ತದೆ. ಮತ್ತೊಂದು ವರ್ಗ ನಮಗೆ ಹಳೆಯ ಒಬಿರಾಯನ ಕಾಲದ ಬೇಡಿಕೆ ಪರಿಷ್ಕರಣೆನೆ ಮಾಡಬೇಕು ಎಂದು ಹೆಳುತ್ತೆ. ಅಂದರೆ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದು ಇವರಿಗೆ ಬೇಡವಾಗಿದೆ ಎಂಬುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದಲ್ಲೆದನ್ನು ನೋಡಿ ಭಯಬೀತರಾಗಿಯೋ ಅಥವ ಆಲಕ್ಷದಿಂದಲೊ ಹೇಡಿಗಳಂತೆ ಗೊತ್ತಿದ್ದು ಗೊತ್ತಿಲ್ಲದಂತೆ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಸ್ನೇಹಿತರೆ ಯಾಕೆ ಇಷ್ಟೊಂದು ಭಯ ನಿರಾಭಿಮಾನ.
ಅನ್ಯಾಯವಾದಾಗ ಗುಂಡು ಬಂದೂಕುಗೆ ಹೆದರದೆ ನಮ್ಮ ಹಕ್ಕುಗಳನ್ನು ಪಡೆದ ವೀರಸೇನಾ ನಿಗಳ ನಾಡು ನಮ್ಮದು. ಮೀರ್ ಸಾಧಿಕ್ ಮಲ್ಲಪ್ಪ ಶೆಟ್ಟಿ ರಂತಹ ಸಮಯ ಸಾಧಕರನ್ನು ಹೊಸಕು ಹಾಕಿದ ಬೀಡು ನಮ್ಮದು. ಅಂತದರಲ್ಲಿ ನಾವುಗಳು ಇಷ್ಟೊಂದು ಸ್ವಾರ್ಥಿಗಳಾಗಿ ಹೇಡಿಗಳಾಗಿ ಬದುಕಬೇಕಾ? ಎಂಬುವುದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ನಾವೆಲ್ಲ ಒಗ್ಗಟ್ಟಿನಿಂದ ಕೊನೆಯದಾಗಿ ನಮ್ಮದೊಂದು ಘೋಷವಾಕ್ಯ ಮೋಳಗಿಸಬೇಕು.
ಬೆಳಗಾವಿ ಅಧಿವೇಶನದ ಜಾಗಕ್ಕೆ ನಡಿತಾ ಇದೆ ಹೋರಾಟದ ತಯಾರಿ, ಬರ್ತಾ ಇದೀವಿ ನೀಲಿ ಮತ್ತು ಖಾಕಿದಾರಿಗಳು ತಪ್ಪಿದ್ದರೆ ಕ್ಷಮಿಸಿ ಎಂದು ಹೇಳಿದ್ದಾರೆ.
Related










