ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಸೇರಿ ಇತರರ ವಿರುದ್ಧ ನಿರ್ವಾಹಕ ಚೇತನ್ ರಾಜ್ ದಾಖಲಿಸಿದ್ದ ಎಫ್‌ಐಆರ್‌ಗೆ ಮಧ್ಯಂತರ ಜಾಮೀನು ನೀಡಿ ಕೋರ್ಟ್ ಆದೇಶ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಹೊತ್ತಿರುವ ಬಿಎಂಟಿಸಿ ಘಟಕ-9 ನಿರ್ವಾಹಕ ಚೇತನ್ ರಾಜ್ ಎಂಬಾತ ಚಾಲಕರೊಬ್ಬರ ಪತ್ನಿ ಸೇರಿ ಇತರರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಕ್ಕೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿ ಇಂದು ಆದೇಶ ಹೊರಡಿಸಿದೆ.

ಈ ಪ್ರಕರಣ ಅರ್ಜಿದಾರರಾದ ಚಾಲಕ ಮಲ್ಲೇಶಪ್ಪ ಇವರ ಪತ್ನಿ ಅನ್ನಪೂರ್ಣ, ಬಿಎಂಟಿಸಿ ನೌಕರ ರೇಣುಕಾನಂದ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಪರ ಇಂದು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ವಕೀಲರಾದ ಶಕ್ತಿ ದೂದುಹಳ್ಳಿ ವಕಾಲತ್ತು ಹಾಕಿದ್ದರು.
ಈ ವೇಳೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಈ ನಾಲ್ವರಿಗೂ ಕೆಲ ಷರತ್ತುಗಳೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಅಲ್ಲದೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆದೇಶ: ಚಂದ್ರಶೇಖರ್ ಸೇರಿದಂತೆ ನಾಲ್ವರು ಅರ್ಜಿದಾರರಿಗೆ ಮಧ್ಯಂತರ ಜಾಮೀನು ಷರತ್ತುಗಳೊಂದಿಗೆ ಅನುಮತಿಸಲಾಗಿದೆ. ಅದರಲ್ಲಿ 1) ನಾಲ್ವರು ಅರ್ಜಿದಾರರು ಸಭೆಯಲ್ಲಿ (Mrrting) ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ ಮತ್ತು ನ್ಯಾಯಾಲದ ನೀಡಿರುವ ನಿಯಮಗಳನ್ನು ಪಾಲಿಸುವ ಜತೆಗೆ ಸಭೆಯ ನಡಾವಳಿಗಳನ್ನು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು.
2) ತನಿಖಾಧಿಕಾರಿ ಕರೆದಾಗ ಅರ್ಜಿದಾರರು ಅವರ ಮುಂದೆ ಹಾಜರಾಗಬೇಕು. 3) ಮಧ್ಯಂತರ ಜಾಮೀನಿನಲ್ಲಿರುವ ಅರ್ಜಿದಾರರು ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಬಾರದು.
4) ಅರ್ಜಿದಾರರು ಸಾಕ್ಷಿಗಳನ್ನು ತಿರುಚಬಾರದು ಅಥವಾ ಅವರಿಗೆ ಬೆದರಿಕೆ ಹಾಕಬಾರದು. 5) ಅರ್ಜಿದಾರರು ತನಿಖಾ ಪ್ರಕ್ರಿಯೆ ಸಮಯದಲ್ಲಿ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸುವ ಮೂಲಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇನ್ನು ಪ್ರಮುಖವಾಗಿ ಪ್ರತಿವಾದಿ ಪೊಲೀಸರು ಮಧ್ಯಂತರ ಜಾಮೀನು ಅರ್ಜಿ ಹಾಕಿರುವ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿದ್ದು, ಅಲ್ಲದೆ ಈ ಮುಖ್ಯ ಅರ್ಜಿ ಇತ್ಯರ್ಥವಾಗುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಸಾಥ್ ನೀಡಿದ ಹಿರಿಯ ವಕೀಲರು: ಇಂದು (ಡಿ.12) ಬೆಳಗ್ಗೆ ಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿಹಾಕುವುದಕ್ಕೆ ಹಿರಿಯ ವಕೀಲರು ಭಾರಿ ಶ್ರಮಪಟ್ಟಿದ್ದಾರೆ. ಅಲ್ಲದೆ ಅರ್ಜಿದಾರರ ಪರ ವಕಾಲತ್ತು ಹಾಕಿರುವ ವಕೀಲೆ ಶಕ್ತಿ ದೂದುಹಳ್ಳಿ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ಜಾಮೀನು ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಹಿರಿಯ ವಕೀಲರನ್ನು ಭೇಟಿ ಮಾಡಿ ಈ ಪ್ರಕರಣವನ್ನು ನೀವೆ ಕೈಗೆತ್ತಿಕೊಳ್ಳಬೇಕು ಎಂದು KSRTC ಪುತ್ತೂರು ವಿಭಾಗದ ನೌಕರ ಜೀವನ್ ಮಾರ್ಟಿಸ್ ವಕೀಲರಲ್ಲಿ ಮನವಿ ಮಾಡಿದ್ದರಿಂದ ಅವರು ವಕೀಲೆ ಶಕ್ತಿ ದೂದುಹಳ್ಳಿ ಅವರಿಂದ ವಕಾಲತ್ತು ಹಾಕಿಸಿದರು.
Related









