KSRTC: ಕೂಲಿಕಾರ ಮಹಿಳೆ ಹೆಸರಲ್ಲಿ ಬ್ಯಾಂಕ್ ಖಾತೆ ಓಪನ್ ಮಾಡಿಸಿ ನೌಕರರಿಂದ ಕೋಟಿ ಕೋಟಿ ನುಂಗಿದ ಟಿಐ ರೂಪಶ್ರೀಗೆ 1ತಿಂಗಳು ರಜೆ ಮೇಲೆ ಕಳಿಸಿದ ಎಂಡಿ!?
KSRTC ತಿಪಟೂರು ಘಟಕದ ಟಿಐ ರೂಪಶ್ರೀ- ಈ ಲಂಚದ ಹಣದಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದಾರೆಯೇ ಎಂಡಿ, ಇತರೆ ಅಧಿಕಾರಿಗಳು ಎಂಬ ಅನುಮಾನ
- ಚಾಲನಾ ಸಿಬ್ಬಂದಿಗಳ ಸುಲಿಗೆ: ಲಂಚದ ಹಣದಲ್ಲಿ ಖರೀದಿಸಿದ್ದು 5 ಎಕರೆ ಕೃಷಿ ಭೂಮಿ!?
- ಒಂದೂವರೆ ಕೋಟಿ ರೂ.ಗೂ ಹೆಚ್ಚು ಲಂಚದ ಹಣ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ
ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ತಿಪಟೂರು ಘಟಕದಲ್ಲಿ ಸಂಚಾರ ನಿರೀಕ್ಷಕಿಯಾಗಿರುವ ಜಿ.ಎಲ್. ರೂಪಶ್ರೀ ಎಂಬುವರು ತಾಲೂಕಿನ ಗೆದ್ದಲಹಳ್ಳಿ ಗ್ರಾಮದ ನಿವಾಸಿ ನೇತ್ರಾವತಿ ಎಂಬುವರ ಹೆಸರನಲ್ಲಿ ಕರ್ನಾಟಕ ಬ್ಯಾಂಕ್‌ನಲ್ಲಿ ಖಾತೆ ತೆರೆಸಿ ಚಾಲನಾ ಸಿಬ್ಬಂದಿಗಳಿಂದ ಸುಮಾರು 1.5 ಕೋಟಿ ರೂಪಾಯಿಗಳ ಫೋನ್ ಪೇ ಮಾಡಿಕೊಂಡಿದ್ದ ಆರೋಪ ಸಂಬಂಧ ತನಿಖೆ ನಡೆದಿದೆ.

ಈ ತನಿಖೆ ವೇಳೆ ರೂಪಶ್ರೀ ಭ್ರಷ್ಟಾಚಾರ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೂ ಈಕೆಯ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದೆ ಸಂಸ್ಥೆಯ ಎಂಡಿ 1 ತಿಂಗಳುಗಳ ಕಾಲ ರಜೆ ಮೇಲೆ ಕಳಿಸಿದ್ದಾರೆ. ಅಂದರೆ ಇಲ್ಲಿ ಅಧಿಕಾರಿಗಳೇ ಇಲ್ಲಿ ಭ್ರಷ್ಟಾಚಾರ ಎಸಗಿಲು ಅವಕಾಶ ಕೊಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.
ವಿಯಯ ಏನು?: ತಿಪಟೂರು ಡಿಪೋ ಪಕ್ಕದಲ್ಲಿ ನೇತ್ರಾವತಿ ಎಂಬುವವರು ಒಂದು ಟೀ ಸ್ಟಾಲ್ ಇಟ್ಟುಕೊಂಡಿದ್ದು, ಇವರು ರೂಪಶ್ರೀ ಅವರ ಗ್ರಾಮದವರೇ ಆಗಿದ್ದರಿಂದ ನೇತ್ರಾವತಿ ಅವರ ಪರಿಚಯ ಸುಲಭವಾಯಿತು. ನೇತ್ರಾವತಿ ಅವರೊಂದಿಗೆ ಆತ್ಮೀಯರಾದ ರೂಪಶ್ರೀ ಕರ್ನಾಟಕ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಸಿದ್ದಾರೆ. ಬಳಿಕ ಅವರಿಂದ ಎಟಿಎಂ ಕಾರ್ಡ್ ತೆಗೆಸಿಕೊಂಡು ಅದನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಬಳಿಕ ನೇತ್ರಾವತಿ ಅವರು ಟೀ ಅಂಗಡಿ ಮುಚ್ಚಿ ತಮ್ಮ ಗ್ರಾನದಲ್ಲೇ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯ ನಡುವೆ ನೇತ್ರಾವತಿಯವರಿಗೆ ತಾವು ಕರ್ನಾಟಕ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವುದೇ ಮರೆತು ಹೋಗಿದೆ. ಹೀಗಾಗಿ ಈ ಖಾತೆ ಮೂಲಕ ನಡೆಯುತ್ತಿದ್ದ ಯಾವುದೇ ವಿಷಯ ಈಕೆಗೆ ತಿಳಿದಿಲ್ಲ.
ಆದರೆ ಫೋನ್ ಪೇ 9740826*** ಮೂಲಕ ಚಾಲನಾ ಸಿಬ್ಬಂದಿಗಳಿಂದ ಲಂಚವಾಗಿ ಪಡೆಯುತ್ತಿದ್ದ ಹಣವನ್ನು ಈ ಬ್ಯಾಂಕ್ ಖಾತೆಗೆ ಹೋಗುವಂತೆ ಮಾಡಿಕೊಂಡಿರುವ ರೂಪಶ್ರೀ ಹೀಗೆ ನಿತ್ಯ ಚಾಲನಾ ಸಿಬ್ಬಂದಿಗಳನ್ನು ಸುಲಿಗೆ ಮಾಡಿ ಬಂದ ಲಕ್ಷಾಂತರ ರೂಪಾಯಿಯಿಂದ ಸುಮಾರು 5 ಎಕರೆ ಕೃಷಿ ಭೂಮಿಯನ್ನು ಇದೇ ಗೆದ್ದಲಹಳ್ಳಿ ಗ್ರಾಮದಲ್ಲಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.
ನೇತ್ರಾವತಿಗೆ ತಮ್ಮ ಬ್ಯಾಂಕ್ ಖಾತೆ ಮೂಲಕ ನಡೆಯುತ್ತಿರುವ ಅವ್ಯವಹಾರ ಗೊತ್ತಾಗಿದೆ. ಆಗ ಈಕೆ ನನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸಿ ನನ್ನ ಎಟಿಎಂ ಕಾರ್ಡ್‌ಕೂಡ ಈಕೆ ಪಡೆದುಕೊಂಡು ನೌಕರರಿಂದ ಲಂಚ ವಸೂಲಿ ಮಾಡಿ ಆ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿದ್ದರು.
ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿರುವ ವಿಷಯ ತಿಳಿದ ರೂಪಶ್ರೀ ಹಾಗೂ ಕುಟುಂಬದವರು ಇಂದು (ಡಿ.9) ಬೆಳಗ್ಗೆ ನೇತ್ರಾವತಿ ಅವರ ಮನೆಗೆ ಹೋಗಿ ಆಕೆಯನ್ನು ಹೆದರಿಸುವ ಕೆಲಸ ಮಾಡಿದ್ದರು. ಆ ಬಳಿಕ ಆಕೆ ಭಯಪಟ್ಟು ಲೋಕಾಯುಕ್ತಕ್ಕೆ ದೂರು ಕೊಡಲು ಹೋಗಿಲ್ಲ.
ಇನ್ನು ಚಾಲನಾ ಸಿಬ್ಬಂದಿಗಳಿಂದ ಪಡೆದಿರುವ ಲಂಚದ ಹಣ ಕೋಟಿ ಮೀರಿದ್ದು ಅದನ್ನು ಈ ಎಟಿಎಂ ಕಾರ್ಡ್ ಮೂಲಕವೇ ತಮಗೆ ಬೇಕಾದಾಗ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ ಈ ರೂಪಶ್ರೀ. ಈ ಎಲ್ಲ ವಿಷಯ ತಿಳಿದ ಸಾರಿಗೆ ಅಧಿಕಾರಿಗಳು ಈ ಲಂಚದ ಹಣ ಪಡೆದಿರುವ ಬಗ್ಗೆ ತನಿಖೆ ಕೈಗೊಂಡ ಕಾರಣ ಈಗ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಅಲ್ಲದೆ ಲಂಚ ಪಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದರಿಂದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಬಹುಶಃ ಡಿ.9ರಂದೇ ಅಮಾನತು ಮಾಡಲಿದ್ದಾರೆ ಎನ್ನಲಾಗಿತ್ತು.
ಆದರೆ, ಟಿಐ ರೂಪಾಶ್ರೀ ವಿರುದ್ಧ ಯಾವುದೇ ಕಾನೂನು ಕ್ರಮತೆಗೆದುಕೊಳ್ಳದೆ ಆಕೆಯನ್ನು ರಜೆ ಮೇಲೆ ಈ ಅಧಿಕಾರಿಗಳು ಕಳಿಸಿದ್ದಾರೆ ಎಂದರೆ ಇದರ ಅರ್ಥವೇನು? ಜತೆಗೆ ಅದೇ ಒಬ್ಬ ಚಾಲನಾ ಸಿಬ್ಬಂದಿ ಬರಿ 5 ರೂಪಾಯಿಯ ಒಂದೇ ಒಂದು ಟಿಕೆಟ್ ಬಿಟ್ಟಿದ್ದಾರೆ ಎಂದರೂ ಆಅವರು ಕೂಡಲೇ ಅಮಾನತು ಮಾಡಿ ಸಂಸ್ಥೆಗೆ ನಷ್ಟ ಉಂಟು ಮಾಡಿದ್ದೀಯೆ ಎಂಬ ಕಾರಣದ ಶರವನ್ನು ಬರೆದುಕೋಡುವ ಈ ಅಧಿಕಾರಿಗಳು ಈಗ ಏನು ಮಾಡುತ್ತಿದ್ದಾರೆ ಎಂಬುವುದು ಪ್ರಶ್ನೆಯಾಗಿದೆ.
ಇನ್ನು ಈ ಎಲ್ಲದರ ನಡುವೆ ತನ್ನ ಭ್ರಷ್ಟಾಚಾರವನ್ನು ಮುಚ್ಚಿಹಾಕುವುದಕ್ಕೆ ಡಿ.9ರಂದೇ ಮುಂದಾಗಿದ್ದ ರೂಪಶ್ರೀ ಕುಟುಂಬದವರೊಂದಿಗೆ ನೇತ್ರಾವತಿ ಅವರ ಮನೆಗೆ ಹೋಗಿ ಹೆದರಿಸಿ ಬೆದರಿಸಿ ಮರು ಹೇಳಿಕೆ ಪಡೆಯಲು ಪ್ರಯತ್ನ ಕೂಡ ನಡೆಸಿದ್ದರು. ಈ ಬಗ್ಗೆ ವಿಜಯಪಥದಲ್ಲಿ ಸಮಗ್ರ ವರದಿ ಬಂದಿದೆ.
ಈ ಎಲ್ಲವನ್ನು ಗಮನಿಸಿ ಈ ಕೂಡಲೇ ಈಕೆಯನ್ನು ಅಮಾನತು ಮಾಡಬೇಕು ಎಂದು ಕೆಆರ್‌ಎಸ್ ಪಕ್ಷ ಹಾಗೂ ಡಿಎಸ್ಎಸ್ ಪದಾಧಿಕಾರಿಗಳು ಕೂಡ ಸಾರಿಗೆಯ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಒತ್ತಾಯಿಸಿದ್ದರು. ಅಲ್ಲದೆ ತುಮಕೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಹುಳಿಯಾರ್ ಲೋಕೇಶ್ ತಿಳಿಸಿದ್ದರು. ಆದರೆ ಈಗ ಆ ಬಗ್ಗೆ ಯಾವುದೇ ಚಕರಾವೆತ್ತುತ್ತಿಲ್ಲ.
ಇನ್ನು ಈ ರೀತಿ ನೌಕರರ ಸುಲಿಗೆ ಮಾಡುವವರನ್ನು ಯಾವುದೇ ಕಾರಣಕ್ಕೂ ಸಂಸ್ಥೆಯ ಮೇಲಧಿಕಾರಿಗಳು ರಕ್ಷಿಸಬಾರದು. ಕೂಡಲೇ ಈಕೆಯನ್ನು ಅಮಾನತು ಮಾಡಬೇಕು ಎಂದು ಆರಾಧನಾ ಸಮಿತಿ ಮಾಜಿ ಸದಸ್ಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಗೂಳೂರಿನ ಸಿ. ನಾಗರಾಜು ಆಗ್ರಹಿಸಿದ್ದರು ಮತ್ತೆ ಈಗ ಈಕೆಯನ್ನು 1ತಿಂಗಳು ರಜೆ ಮೇಲೆ ಕಳಿಸಿರುವುದಕ್ಕೆ ಇದೇ ನಾಗರಾಜ್ ಮತ್ತೆ ಕಾನೂನು ಹೋರಾಟ ಮಾಡುವುದಕ್ಕೆ ಮುಂದಾಗಿದ್ದು, ಸುಲಿಗೆಕೋರರಿಗೆ ಶಿಕ್ಷೆ ಆಗಲೇಬೇಕು ಎಂದು ಇನ್ನಷ್ಟು ಮಾಹಿತಿ ಕಲೆಹಾಕುವುದಕ್ಕೆ ಮುಂದಾಗಿದ್ದಾರೆ.
Related









