CRIMENEWSದೇಶ-ವಿದೇಶ

ಇಂದು ಪ್ರೇಮಿಗಳ ದಿನ: ತನ್ನ ಪ್ರೇಯಸಿಗೆ ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಪ್ರೇಮಿ

ವಿಜಯಪಥ ಸಮಗ್ರ ಸುದ್ದಿ

ನೋಯ್ಡಾ (ಉತ್ತರ ಪ್ರದೇಶ): ಪ್ರೇಮಿಗಳ ದಿನದಂದು ಜಗತ್ತಿನಾದ್ಯಂತ ಪ್ರೇಮಿಗಳು ಉಡುಗೊರೆಗಳ ವಿನಿಮಯ ಮಾಡಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದರೆ, ಇಲ್ಲಿನ ಸೆಕ್ಟರ್ 107ರಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಗುಂಡಿಕ್ಕಿ ಕೊಂದು, ತಾನೂ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ಸಂಭ್ರಮದ ನಡುವೆಯೇ ಇದು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿರುವ ಅತ್ಯಂತ ಭಯಾನಕ ಮತ್ತು ಮನಕಲಕುವ ಘಟನೆಯಾಗಿದೆ.

ವಿವರ: ಶನಿವಾರ ಮಧ್ಯಾಹ್ನ ನೋಯ್ಡಾದ ಸೆಕ್ಟರ್ 107ರಲ್ಲಿ ದೆಹಲಿ ನೋಂದಣಿ ಸಂಖ್ಯೆಯ ಕಾರಿನೊಳಗೆ ದಂಪತಿಗಳ ಶವ ಪತ್ತೆಯಾಗಿದೆ. ಮೃತರನ್ನು ದೆಹಲಿಯ ತ್ರಿಲೋಕಪುರಿ ನಿವಾಸಿ ಸುಮಿತ್ ಮತ್ತು ನೋಯ್ಡಾದ ಸೆಕ್ಟರ್ 58ರ ನಿವಾಸಿ ರೇಖಾ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸುಮಿತ್ ಮೊದಲು ರೇಖಾಗೆ ಗುಂಡಿಕ್ಕಿ ನಂತರ ಅದೇ ಪಿಸ್ತೂಲಿನಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸುಮಿತ್ ಕೈಯಲ್ಲೇ ಪಿಸ್ತೂಲ್ ಪತ್ತೆಯಾಗಿದೆ.

ಇನ್ನು ಇವರಿಬ್ಬರು ಶುಕ್ರವಾರವೇ ಅಂದರೆ ನಿನ್ನೆಯೇ ನಾಪತ್ತೆಯಾಗಿದ್ದರು ಮತ್ತು ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಇದು ಯಾವ ರೀತಿಯ ಸಾವು ಎಂಬ ಅನುಮಾನ ಕೂಡ ವ್ಯಕ್ತವಾಗಿದ್ದು ಪೊಲೀಸರ ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬೀಳಬೇಕಿದೆ.

ವಾಟ್ಸಾಪ್ ಸಂದೇಶದಲ್ಲಿದೆ  ರಹಸ್ಯ: ಸುಮಿತ್ ಸಾವಿಗೂ ಮುನ್ನ ತನ್ನ ಫೋನ್‌ನಿಂದ ವಾಟ್ಸಾಪ್ ಸಂದೇಶವೊಂದನ್ನು ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ. ಆ ಸಂದೇಶದಲ್ಲಿ, “ನಾನು ಸುಮಿತ್, ಸಾಯುತ್ತಿದ್ದೇನೆ. ನನ್ನ ಸಾವಿಗೆ ರೇಖಾಳೇ ಜವಾಬ್ದಾರಿ. ಆಕೆ 15 ವರ್ಷಗಳಿಂದ ನನ್ನ ಜೊತೆಗಿದ್ದಳು ಮತ್ತು ನನ್ನನ್ನೇ ಮದುವೆಯಾಗುವುದಾಗಿ ಭರವಸೆ ನೀಡಿದ್ದಳು. ಆದರೆ ಈಗ ಆಕೆ ಬೇರೆಯವರನ್ನು ಮದುವೆಯಾಗಲು ಸಿದ್ಧವಾಗಿದ್ದಾಳೆ. ಅವಳು ನನಗೆ ದ್ರೋಹ ಮಾಡಿದ್ದಾಳೆ, ಅದಕ್ಕಾಗಿಯೇ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾನೆ ಎನ್ನಲಾಗುತ್ತಿದೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ದೆಹಲಿ ನೋಂದಣಿಯ ಈ ಕಾರು ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ! ಮೇ 20ರಿಂದ ಸಾರಿಗೆ ನೌಕರರ ಮುಷ್ಕರ ಮಾಡೇ ತೀರುತ್ತೇವೆ: ವಿಜಯಭಾಸ್ಕರ್ KSRTC: ಮೇ 20 ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ