ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಾಮೂಲಿಯಾಗಿ ವಯಸ್ಕರಿಗೆ ಪೂರ್ಣ ದರದ ಟಿಕೆಟ್, ಹಿರಿಯ ನಾಗರಿಕರ ಪಾಸ್ ಆಧರಿಸಿ ಹಾಗೂ ರಾಜ್ಯದ ಮಹಿಳೆಯರಿಗೆ ಉಚಿತ ಟಿಕೆಟ್ ಕೊಡಲಾಗುತ್ತದೆ.

ಇನ್ನು ಮಕ್ಕಳಿಗೆ ಅದರಲ್ಲಿ ಶುಲ್ಕ ಕಡಿಮೆ ಇರುತ್ತದೆ. ಆದರೆ ಮೈಸೂರಿನಿಂದ ಮಡಿಕೇರಿಗೆ ಹೊರಟ ಬಸ್‌ವೊಂದರಲ್ಲಿ ಬೆಕ್ಕಿನ ಮರಿಗೂ ಅರ್ಧ ಟಿಕೆಟ್ ಅಂದರೆ ಮಕ್ಕಳ ಟಿಕೆಟ್ ಶುಲ್ಕ ತೆಗೆದುಕೊಂಡಿದ್ದಾರೆ ಎಂದರೆ ಅಚ್ಚರಿಯಾಗಬಹುದು ಆದರೂ ಇದು ಸತ್ಯ.
ಮೈಸೂರು-ಮಡಿಕೇರಿ ಮಾರ್ಗದ ಕೆಎಸ್‌ಆರ್‌ಸಿ ಬಸ್‌ನಲ್ಲಿ ಬೆಕ್ಕಿನ ಮರಿಯೊಂದನ್ನು ಪ್ರಯಾಣಿಕರೊಬ್ಬರು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಗಮನಿಸಿದ ಕಂಡಕ್ಟರ್ ಬೆಕ್ಕಿನ ಮರಿಗೆ 6 ವರ್ಷದೊಳಗಿನ ಮಕ್ಕಳಿಗೆ ತೆಗೆದುಕೊಳ್ಳುವ ಅರ್ಧ ಚಾಜ್ ಬಸ್ ಟಿಕೆಟ್ ದರ ವಿಧಿಸಿದ್ದಾರೆ.
ಹೀಗೆ ಬೆಕ್ಕಿನ ಮರಿಗೂ ಟಿಕೆಟ್ ತೆಗೆದುಕೊಳ್ಳಬೇಕ ಎಂದು ಒಮ್ಮೆ ಅಚ್ಚರಿಗೊಳಗಾಗಬಹುದು ಆದರೆ ಇದು ವಿಚಿತ್ರ ಘಟನೆ ಎನಿಸಿದರು ನಂಬಲೇಬೇಕು. ಇನ್ನು ಈ ಟಿಕೆಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಅಥವಾ ಐಡಿ ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಆದರೀಗ ಮೈಸೂರು – ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅದನ್ನು ತೆಗೆದುಕೊಂಡು ಪ್ರಯಾಣಿಸುತ್ತಿದ್ದವರಿಗೆ ಒಂದು ಮಗುವೆಂದು ಭಾವಿಸಿ ಟಿಕೆಟ್ ಕೊಡಲಾಗಿದೆ.
ಟಿಕೆಟ್ ತೆಗೆದುಕೊಂಡರೂ ಸಹ ಆ ಬೆಕ್ಕಿನ ಮರಿಗೆ ಸೀಟ್ ನೀಡಿಲ್ಲ ಎನ್ನಲಾಗುತ್ತಿದೆ. ಆದರೆ ಅರ್ಥ ಟಿಕೆಟ್ ಚಾರ್ಜ್ ತೆಗೆದುಕೊಂಡಿದ್ದರಿಂದ ತೊಡೆಯಮೇಲೆ ಕುಳ್ಳರಿಸಿಕೊಂಡು ಪ್ರಯಾಣ ಮಾಡಬೇಕಿದೆ.
ಇನ್ನು ಸರ್ಕಾರಿ ಬಸ್‌ಗಳಲ್ಲಿ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿಷೇಧವಿದೆ. ಹೀಗಾಗಿ ನಿರ್ವಾಹಕರು ಅದಕ್ಕೆ ಟಿಕೆಟ್ ವಿಧಿಸುವ ಮೂಲಕ ಅರಿವು ಮೂಡಿಸಿದ್ದಾರೆ.
ಇನ್ನು ಒಂದು ವೇಳೆ ಟಿಕೆಟ್ ಕೊಡದೆ ಹೋದರೆ ಬೇರಾರಾದರೂ ಮತ್ತೆ ಈ ರೀತಿ ಪ್ರಾಣಿಗಳನ್ನು ತೆಗೆದುಕೊಂಡು ಬರಬಹುದು. ಇದರಿಂದ ಕರ್ತವ್ಯ ನಿರತ ನಿರ್ವಾಹಕರು ಸಂಸ್ಥೆಯ ನಿಯಮದ ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಪ್ರಯಾಣಿಕರು ತಿಳಿದುಕೊಂಡರೆ ಖುಷಿ ಎಂದು ನೌಕರರೊಬ್ಬರು ಹೇಳಿದ್ದಾರೆ.
Related










