NEWSನಮ್ಮರಾಜ್ಯಸಂಸ್ಕೃತಿ

ರಾಜ್ಯಾದ್ಯಂತ ಅದ್ದೂರಿ ಸಂಕ್ರಾಂತಿ ಸಡಗರ: ಬೀಡನಹಳ್ಳಿಯಲ್ಲಿ ಕಿಚ್ಚು ಹಾಯಿಸಿ ಸಂಭ್ರಮ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಸೂರ್ಯ ತನ್ನ ಪಥವನ್ನು ಬದಲಿಸುವ ಮಕರ ಸಂಕ್ರಮಣದ ಈ ಸುದಿನ ಸಂಭ್ರಮದ ಬದುಕಿನ ಹೊಸತನದೊಂದಿಗೆ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಡೆ ಅದ್ದೂರಿಯಾಗಿ ರಾಸುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಮೂಲಕ ಸುಗ್ಗಿಹಬ್ಬದ ಸಂಭ್ರಮ ಕಳೆಕಟ್ಟಿತ್ತು.

ಈ ಸಂಭ್ರಮವನ್ನು ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದಲ್ಲೂ ಪ್ರತಿವರ್ಷದಂತೆ ಈ ವರ್ಷವೂ ರಾಸುಗಳ ಕಿಚ್ಚು ಹಾಯಿಸಲಾಯಿತು. ಗ್ರಾಮದ ಪ್ರವೇಶದ್ವಾರದ ಶ್ರೀ ಶನೇಶ್ವರ ದೇಗುಲದ ಬಳಿ ಗ್ರಾಮಸ್ಥರು ಎತ್ತುಗಳು, ಹಸುಗಳು, ಕುರಿ ಮೇಕೆ ಸೇರಿದಂತೆ ಜಾನುವಾರಗಳ ಕಿಚ್ಚು ಹಾಯಿಸುವ ಮೂಲಕ ಹಬ್ಬದ ಸಡಗರದಲ್ಲಿ ಮಿಂದೆದ್ದರು.

ಇನ್ನು ಊರಿನ ಹೃದಯ ಭಾಗದಲ್ಲಿರುವ ಶ್ರೀ ನಂದಿ ಬಸವೇಶ್ವರ ದೇಗುಲದ ವರೆಗೂ ಯುವ ಸಮೂಹ ಅಲಂಕರಿಸಿಕೊಂಡು ಕರೆತಂದಿದ್ದ ಎತ್ತುಗಳು, ಹಸುಗಳು, ಕುರಿಗಳು ಸೇರಿ ಎಲ್ಲ ರಾಸುಗಳನ್ನು ಮೆರವಣಿಗೆ ಮಾಡಿದರು. ಗ್ರಾಮದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಮೊದಲು ನಂದಿ ಬಸವೇಶ್ವರ ಸ್ವಾಮಿಯ ಬಸವ ಮೊದಲು ಕಿಚ್ಚುಹಾಯಬೇಕು. ನಂತರ ಗ್ರಾಮಸ್ಥರು ತಮ್ಮ ತಮ್ಮ ರಾಸುಗಳನ್ನು ಕಿಚ್ಚು ಹಾಯಿಸಿಕೊಂಡು ಓಡುವ ದೃಶ್ಯ ನೋಡುವುದೆ ಕಣ್ಣಿಗೆ ಹಬ್ಬ.

ಬನ್ನೂರು ಸುತ್ತಮುತ್ತಲಿನ ಗ್ರಾಮಗಳಾದ ಅತ್ತಹಳ್ಳಿ, ಚಾಮನಹಳ್ಳಿ, ಬಸವನಹಳ್ಳಿ, ಹನುಮನಾಳು, ಮಾದಿಗಹಳ್ಳಿ, ಮಾಕನಹಳ್ಳಿ ಸೇರಿದಂತೆ ಎಲ್ಲ ಗ್ರಾಮಹಳಲ್ಲೂ ರಾಸುಗಳಲ್ಲೂ ಕಿಚ್ಚು ಹಾಯಿಸುತ್ತಿದ್ದ ದೃಶ್ಯ ಮನಸ್ಸಿಗೆ ಮುದ ನೀಡುವಂತಿತ್ತು.

ಇನ್ನು ನಗರ ಪ್ರದೇಶಗಳ ಜೊತೆಗೆ ಹಳ್ಳಿಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಭಾನುವಾರ ಮುಂಜಾನೆಯೂ ಹಬ್ಬದ ಖರೀದಿ ಮುಂದುವರಿದಿತ್ತು. ಜನರು ಕಬ್ಬು, ಎಳ್ಳು–ಬೆಲ್ಲ, ಅವರೆ–ಗೆಣಸು ಮೊದಲಾದ ಸಾಮಗ್ರಿಗಳನ್ನು ಕೊಂಡು ತಂದರು.

ಮನೆಯಲ್ಲಿನ ಹೆಣ್ಣುಮಕ್ಕಳು ಹೊಸ ಬಟ್ಟೆ ತೊಟ್ಟು, ಅಕ್ಕಪಕ್ಕದ ಮನೆಮಂದಿಗೆಲ್ಲ ಎಳ್ಳು–ಬೆಲ್ಲ ಹಂಚುತ್ತ ಶುಭಾಶಯ ಕೋರಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದಲೇ ದೇಗುಲಗಳಲ್ಲಿ ಜನರ ಸಾಲು ನೆರೆದಿತ್ತು.

ಇನ್ನು ಉತ್ತರ ಕರ್ನಾಟಕದಲ್ಲೂ ಈ ಸುಗ್ಗಿಯ ಹಿಗ್ಗೆ ತುಸು ಜೋರಾಗೇ ಇತ್ತು. ಉತ್ತರದ ಹಳ್ಳಿಯ ಮಂದಿ ಹಬ್ಬದ ಸಂಭ್ರಮದ ಸವಿಯನ್ನು ಸವಿದರು. ಸುಗ್ಗಿಯ ಹಬ್ಬ ಕಳೆಗಟ್ಟಿತ್ತು. ಬೆಳೆದ ಪದಾರ್ಥಗಳನ್ನು ರಾಶಿ ಹಾಕಿ ರಾಶಿ ಪೂಜೆ ನಡೆಸಿದರು. ರಾಸುಗಳ ಮೈ ತೊಳೆದು, ವಿವಿಧ ಸಾಮಗ್ರಿಗಳಿಂದ ಅಲಂಕರಿಸಿ, ಸಂಜೆ ಕಿಚ್ಚು ಹಾಯಿಸಿದರು. ಈ ಮೂಲಕ ರಾಜ್ಯಾದ್ಯಂತ ಸುಗ್ಗಿಹಬ್ಬದ ಸಂಭ್ರಮ ಮನಸೂರೆಗೊಂಡಿತು.

Megha
the authorMegha

Leave a Reply

error: Content is protected !!
Latest news
BMTC: ದೈಹಿಕವಾಗಿ ಫಿಟ್‌ ಇದ್ದರೂ ಲಘುಡ್ಯೂಟಿ ಮಾಡುತ್ತಿರುವ ನೌಕರರ ಸಂಘಟನೆಯ ಮುಖಂಡ- ಕಂಡು ಕಾಣದಂತೆ ಮೌನವಾಗಿರುವ ಅಧಿಕ... ಮೃತ ಗೃಹಲಕ್ಷ್ಮಿಯರ ಬ್ಯಾಂಕ್‌ ಖಾತೆ ಸೇರಿದೆ ಬರೋಬರಿ 79.75 ಕೋಟಿ ರೂ.ಗೂ ಹೆಚ್ಚು ಹಣ ಇಂದಿನಿಂದ KSRTC ಬಸ್‌ನಲ್ಲಿ ಯಾವುದೇ ವಿಶೇಷ ಕಾರ್ಡ್‌ ಇಲ್ಲದೆ ಮಹಿಳೆಯರ ಮುಕ್ತ ಪ್ರಯಾಣಕ್ಕೆ ಅವಕಾಶ- "ಪ್ರಿಯದರ್ಶಿನಿ ಯ... ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ನೂರಕ್ಕೆ ನೂರರಷ್ಟು ಎಥನಾಲ್ ಬಳಕೆ: ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತ 8ನೇ ವೇತನ ಆಯೋಗ: ಸಲಹೆ ಸಂಗ್ರಹಕ್ಕೆ ಸರ್ಕಾರ ಕೊಟ್ಟಿದ್ದ ಗಡುವು ಇಂದಿಗೆ ಮುಕ್ತಾಯ- ವರದಿ ಸಲ್ಲಿಕೆಯೊಂದೇ ಬಾಕಿ ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ