ಬನ್ನೂರು: ಅಕ್ಕಿ ತುಂಬಿದ ಮಿನಿಲಾರಿ ಒಂದು ಪಲ್ಟಿಯಾದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಸಮೀಪ ಗುರುವಾರ ಬೆಳಿಗೆ ಜರುಗಿದೆ.

ಬನ್ನೂರಿನ ನಿವಾಸಿಗಳಾದ ವಾಸಿಂ (25) ಹಾಗೂ ಸನಿಯಾ (24) ಮೃತಪಟ್ಟ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ.
ಕಿರುಗಾವಲು ಬಾಸ್ ರೈಸ್‌ಮಿಲ್‌ನಿಂದ ಅಕ್ಕಿ ತುಂಬಿಕೊಂಡು ಬನ್ನೂರಿಗೆ ತೆರಳುತ್ತಿದ್ದ ಮಿನಿಲಾರಿ ಕೊದನುಕೊಪ್ಪಲು ಬಳಿ ಬರುತ್ತಿದ್ದಂತೆ ನಡು ಮಾರ್ಗದಲ್ಲಿ ಪಲ್ಟಿ ಹೊಡೆದೆ. ಪರಿಣಾಮ ಈ ಇಬ್ಬರು ಕೂಲಿ ಕಾರ್ಮಿಕರು ಅಸುನೀಗಿದ್ದಾರೆ.
ಕಿರುಗಾವಲಿನ ರೈಸ್‌ಮಿಲ್‌ನಿಂದ ಅಕ್ಕಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಪಡಿತರ ಅಕ್ಕಿಯೋ ಅಥವಾ ರೈತರಿಂದ ಖರೀದಿಸಿದ ಭತ್ತದ ಅಕ್ಕಿಯೋ ಇದ್ದಿದ್ದು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಈ ಪ್ರಕರಣ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಎಸ್‌ಐ ರವಿಕುಮಾರ್ ಮುಂದಿನ ಕ್ರಮ ಕೈಗೊಂಡಿದ್ದಾರೆ.
Related


Megha








