CRIMENEWSನಮ್ಮಜಿಲ್ಲೆ

ಮಂಡ್ಯ: ಆಸ್ತಿ ವಿಚಾರಕ್ಕೆ ಆರಂಭವಾದ ಜಗಳದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಇರಿದು ಕೊಂದ ಅಣ್ಣ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಜಗಳದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28ಬಾರಿ ಇರಿದು ಇರಿದು ಅಣ್ಣನೇ ಹತ್ಯೆಮಾಡಿರುವ ಘಟನೆ ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಯೋಗೇಶ್(30) ಕೊಲೆಯಾದ ಯುವಕ. ಈತನ ಸಹೋದರ ಲಿಂಗರಾಜು ಎಂಬಾತನೇ ಕೊಲೆಗೈದು ಈಗ ಪರಾರಿಯಾಗಿದ್ದಾನೆ.

ತಮ್ಮನ ಕೊಲೆ ಮಾಡುವುದಕ್ಕೆ ಲಿಂಗರಾಜುಗೆ ಆತನ ಮಕ್ಕಳಾದ ಭರತ್, ದರ್ಶನ್ ಎಂಬುವವರು ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕೊಲೆ ಬಳಿಕ ಈ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಘಟನೆಗೆ ಕಾರಣ:
ಹಲವು ವರ್ಷಗಳಿಂದ ಲಿಂಗರಾಜು ಹಾಗೂ ಹತ್ಯೆಯಾದ‌ ಯೋಗೇಶ್ ನಡುವೆ ಆಸ್ತಿ ಕಲಹವಿತ್ತು. ಆಸ್ತಿ ವಿಷಯಕ್ಕೆ ಆಗಾಗ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಅದೇ ಕಾರಣಕ್ಕೆ ಯೋಗೇಶ್ ಕೊಲೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇನ್ನು ಇದೇ ಜನವರಿ 21ರ ಬುಧವಾರದಂದು ಯೋಗೇಶ್ ಮದುವೆ ನಿಗದಿಯಾಗಿತ್ತು. ಮದುವೆ ಆಹ್ವಾನ ಪತ್ರದಲ್ಲಿ ಈ ಅಣ್ಣನ ಹೆಸರನ್ನೂ ಹಾಕಿಸಿ ಊರಿಗೆಲ್ಲ ಹಂಚಿದ್ದ ಯೋಗೇಶ್‌. ದುರಾದೃಷ್ಟವಶಾತ್‌ ಅದೇ ಅಣ್ಣನಿಂದ ಇಂದು ಹತ್ಯೆಯಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಕೆರಗೋಡು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ತಲರಮರೆಸಿಕೊಂಡಿರುವ ಆರೋಪಿಗಳಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Megha
the authorMegha

Leave a Reply

error: Content is protected !!