ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಕಿರುಕುಳ ಕೊಡುತ್ತಿದ್ದ ಆರೋಪ ಹೊತ್ತಿದ್ದ ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸೇರಿದಂತೆ ಸಾರಿಗೆ ನಿಗಮಗಳ 17 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಇಂದು ಆದೇಶ ಹೊರಡಿಸಿದ್ದಾರೆ.

ಸಕ್ಷಮ ಪ್ರಾಧಿಕಾರಿಗಳ ಆದೇಶದ ಮೇರೆಗೆ ಈ ಎಲ್ಲ 17 ಅಧಿಕಾರಿಗಳನ್ನು ಕೋರಿಕೆ/ ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದ್ದು ಕೂಡಲೇ ವರ್ಗಾವಣೆಗೊಂಡಿರುವ ಸ್ಥಳಕ್ಕೆ ಹೋಗಬೇಕು ಎಂದು ತಿಳಿಸಿದ್ದಾರೆ.
ಪ್ರಸ್ತುತ KSRTC ದಾವಣಗೆರೆ ವಿಭಾಗದಲ್ಲಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಬಿ.ಎಸ್. ಶಿವಕುಮಾರಯ್ಯ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಬಿಎಂಟಿಸಿ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಿಯಮ 17/1 ರಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿದ್ದ ಪಿ.ವೈ. ನಾಯ್ಕ್ ಅವರನ್ನು ಬಿಎಂಟಿಸಿ ಮುಖ್ಯ ಕಾರ್ಮಿಕ & ಕಲ್ಯಾಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ನಿಯಮ 17/1 ರಡಿ ಬಿಎಂಟಿಸಿಯಲ್ಲಿ ಮುಖ್ಯ ಕಾರ್ಮಿಕ & ಕಲ್ಯಾಣಾಧಿಕಾರಿಯಾಗಿದ್ದ ಜಿ.ಎಸ್ ಸುಧೀರ್ ಅವರನ್ನು ಬಿಎಂಟಿಸಿ ಸಂಸ್ಥೆಯ ಈಶಾನ್ಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ನಿಯೋಜಿಸಲಾಗಿದೆ.
ಬಿಎಂಟಿಸಿ ಈಶಾನ್ಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಎಚ್. ದಿವಾಕರ್ ಅವರನ್ನು ಇದೇ ಸಂಸ್ಥೆಯ ಎಸ್ಟೇಟ್ ಅಧಿಕಾರಿ ಹುದ್ದೆಗೆ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಬಿಎಂಟಿಸಿ ಸಂಸ್ಥೆಯ ಸಂಸ್ಥೆಯ ಎಸ್ಟೇಟ್ ಅಧಿಕಾರಿಯಾಗಿದ್ದ ಜೆ.ಜಿ.ರಾಮಲಿಂಗಯ್ಯ ಅವರನ್ನು ಇದೇ ಸಂಸ್ಥೆಯ ಕೇಂದ್ರೀಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಬಿಎಂಟಿಸಿ ಕೇಂದ್ರೀಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಮಹಡಿಕರ್ ಜಗದೀಶ್ ಅವರನ್ನು ಇದೇ ಸಂಸ್ಥೆಯ ಕೇಂದ್ರೀಯ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕರಾಗಿ ನಿಯೋಜಿಸಲಾಗಿದೆ.
ಬಿಎಂಟಿಸಿ ಸಂಸ್ಥೆಯ ಕೇಂದ್ರೀಯ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕರಾಗಿದ್ದ ಎಸ್.ಪಿ.ನಾಗರಾಜ್ ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಆರ್. ಅಶೋಕ್ ಕುಮಾರ ಅವರನ್ನು ಕೆಂ.ಬ.ನಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಇನ್ನು ಕೆಂ.ಬ.ನಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಎಸ್. ಎಸ್. ಅರುಣ ಅವರನ್ನು ಬಿಎಂಟಿಸಿ ವಾಯುವ್ಯ ವಲಯಕ್ಕೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
ನಿಯಮ 17/1 ರಡಿ ಕಲಬುರಗಿ ಕೇಂದ್ರ ಕಚೇರಿಯ ಕೆಕೆಆರ್‌ಟಿಸಿಯಲ್ಲಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ಕೆ.ಚಂದು ಅವರನ್ನು ಕೆಕೆಆರ್‌ಟಿಸಿ ಯಾದಗಿರಿ ಪ್ರಾದೇಶಿಕ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕರಾಗಿ ನಿಯೋಜಿಸಲಾಗಿದೆ.
ಕೆಕೆಆರ್‌ಟಿಸಿ ಯಾದಗಿರಿ ಪ್ರಾದೇಶಿಕ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕರಾಗಿದ್ದ ಪಿ.ವೈ.ಗಡದ್ ಅವರನ್ನು NWKRTC ಗದಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
NWKRTC ಗದಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಶಶಿಧರ ಬಿ. ಚನ್ನಪ್ಪ ಗೌಡರ್ ಅವರನ್ನು ಹುಬ್ಬಳ್ಳಿಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿರುವ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರ ಹುದ್ದೆಗೆ ನಿಯೋಗಿಸಿ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿರುವ NWKRTC ಕೇಂದ್ರ ಕಚೇರಿಯಲ್ಲಿರುವ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ನಿತಿನ್ ಹೆಗಡೆ ಅವರನ್ನು ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
NWKRTC ಸಂಸ್ಥೆ ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಕಿರಣ್ ಕುಮಾರ್ ಎಫ್. ಬಸಾಪುರ ಅವರನ್ನು ಕೆಎಸ್‌ಅರ್‌ಟಿಸಿ ನಿಗಮದ ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಕೆಕೆಆರ್‌ಟಿಸಿ ಕಲಬುರಗಿ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರಾಗಿದ್ದ ಮಲ್ಲಿಕಾರ್ಜುನ ದೇಗಲ್ಮಡಿ ಅವನ್ನು ಇದೇ ಸಂಸ್ಥೆಯ ಹುಮನಾಬಾದ್‌ನಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಯಾಗಿದ್ದ ರಾಧ ಎಲ್.ಗುಂಡಳ್ಳಿ ಅವರನ್ನು ಬಿಎಂಟಿಸಿ ನಿಗಮದ ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಹಾಗೂ ಬಿಎಂಟಿಸಿ ನಿಗಮದ ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಯಾಗಿದ್ದ ಕೆ.ಕೀರ್ತಿಚಂದ್ರ ಅವರನ್ನು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಉಪ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಲಾಗಿದೆ.
ಈ ಎಲ್ಲ 17 ಮಂದಿ ಅಧಿಕಾರಿಗಳನ್ನು ಇದೇ ಜನವರಿ 19ರ ಅಪರಾಹ್ನದಿಂದ ಜಾರಿಗೆ ಬರುವಂತೆ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಂದ ಪ್ರಭಾವಕಾರಿಯಾಗಿ ಬಿಡುಗಡೆಗೊಳಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಕೂಡಲೇ ನಿಯೋಜಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.
ಇನ್ನು ಕ್ರಮವಾಗಿ 5, 11, 12, 15, 16ರಲ್ಲಿನ ಅಧಿಕಾರಿಗಳ ವರ್ಗಾವಣೆಯನ್ನು ಕೋರಿಕೆ ಮೇರೆಗೆ ಪರಿಗಣಿಸಿದ್ದು, ಯಾವುದೇ ವರ್ಗಾವಣೆ ಸೌಲಭ್ಯಕ್ಕೆ ಇವರು ಅರ್ಹರಿರುವುದಿಲ್ಲ. ಉಳಿದ ಅಧಿಕಾರಿಗಳ ವರ್ಗಾವಣೆಯನ್ನು ಆಡಳಿತಾತ್ಮಕ ಕಾರಣಗಳ ಮೇರೆಗೆ ಪರಿಗಣಿಸಿದ್ದು, ಅವರಲ್ಲಿ ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ ಇರುವ ಅಧಿಕಾರಿಗಳು ಮಾತ್ರ ನಿಯಮಾನುಸಾರ ನಿಯೋಜನಾ ಸೌಲಭ್ಯಕ್ಕೆ ಅರ್ಹರಿರುತ್ತಾರೆ. ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಇಲ್ಲದಿರುವ ಅಧಿಕಾರಿಗಳು ಯಾವುದೇ ನಿಯೋಜನಾ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ ಎಂದು ತಿಳಿಸಿದ್ದಾರೆ.
ಆದಾಗ್ಯೂ ಅಧಿಕಾರಿಗಳು ನಿಯೋಜಿತ ಸ್ಥಳದಲ್ಲಿ ಹಾಜರಾದ ನಂತರವೇ ಸೇರ್ಪಡೆ ಕಾಲಾವಕಾಶವನ್ನು ಜಾರಿಯಲ್ಲಿರುವ ನಿಯಮಾನುಸಾರ ಉಪಯೋಗಿಸಿಕೊಳ್ಳುವುದು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಹೊರಡಿರುವ ವರ್ಗಾವಣೆ ಆದೇಶದಲ್ಲಿ ತಿಳಿಸಿದ್ದಾರೆ.
Related










