ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಭಾನುವಾರ ಸಂಚರಿಸುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹತ್ತುವಾಗ ಬಾಲಕಿಯೊಬ್ಬಳು ಜಾರಿ ಬಿದ್ದು ಗಾಯಗೊಂಡಿರುವ ಘಟನೆ ಜರುಗಿದೆ.
ರಾಮದುರ್ಗ- ಧಾರವಾಡ ಮಾರ್ಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್ ಮಹಿಳಾ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಈ ವೇಳೆ ಬಾಲಕಿ ಕೂಡ ಅದೇ ಬಸ್ ಹತ್ತುತಿದ್ದದಳು. ಆದರೆ, ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ.
ಇದರಿಂದ ಸಿಟ್ಟಾದ ಬಾಲಕಿಯ ಪಾಲಕರು ಚಾಲಕ ಮತ್ತು ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಕಲ್ಪಸಿರುವ ಹಿನ್ನೆಯಲ್ಲಿ ಸಾರಿಗೆ ಸಂಸ್ಥೆಯ ಪ್ರತಿಯೊಂದು ಬಸ್‌ಗಳು ಹೆಚ್ಚಾಗಿ ಮಹಿಳಾ ಪ್ರಯಾಣಿಕರಿಂದಲೇ ತುಂಬಿಹೋಗುತ್ತಿವೆ.
ಈ ನಡುವೆ ಟಿಕೆಟ್ ವಿತರಣೆ ಮಾಡಲು ನಿರ್ವಾಹಕರಿಗೆ ಸರಿಯಾಗಿ ಮಹಿಳಾ ಪ್ರಯಾಣಿಕರು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಹೀಗಾಗಿ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ನಿರ್ವಾಹಕರಿಗೆ ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ಮಹಿಳಾ ಪ್ರಯಾಣಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.