Please assign a menu to the primary menu location under menu

NEWSದೇಶ-ವಿದೇಶರಾಜಕೀಯ

ಒಬ್ಬ ಶಾಸಕ ಒಂದು ಪಿಂಚಣಿ ಯೋಜನೆ ಜಾರಿಗೆತಂದ ಭಗವಂತ ಮಾನ್‌ ಸರ್ಕಾರ – ವಾರ್ಷಿಕ 100 ಕೋಟಿ ಉಳಿತಾಯ

ವಿಜಯಪಥ ಸಮಗ್ರ ಸುದ್ದಿ

ಚಂಡೀಗಢ: ಪಂಜಾಬ್‌ ಸರ್ಕಾರ ಜನಪ್ರತಿನಿಧಿಗಳು ಜನ ಸೇವಕರು ಅವರಿಗೆ ಸಂಭಾವನೆ ಕೊಡುವುದು ಸರಿಯಿದೆ ಆದರೆ ಅದನ್ನು ಹೇಗೆ ಕೊಡಬೇಕು ಎಂಬುದರ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ.

ಹೌದು ಪಂಜಾಬ್‌ ಮುಖ್ಯಮಂತ್ರಿ ಭವವಂತ ಮಾನ್‌ ನೇತೃತ್ವದ ಸರ್ಕಾರ ಒಬ್ಬ ಶಾಸಕ ಒಂದುಪಿಂಚಣಿ ಯೋನೆ ಜಾಋಿಗೆ ತಂದಿದೆ. ಈ ಪಿಂಚಣಿ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದು, 5 ವರ್ಷಗಳಲ್ಲಿ 100 ಕೋಟಿ ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್‌ ಮಾಡಿದೆ.

ಮಾಜಿ ಶಾಸಕರಿಗೆ ಬಹು ಪಿಂಚಣಿಗಳನ್ನು ಸೀಮಿತಗೊಳಿಸುವ ಮಸೂದೆಗೆ ಪಂಜಾಬ್ ರಾಜ್ಯಪಾಲರು ತಮ್ಮ ಒಪ್ಪಿಗೆ ನೀಡಿದ ನಂತರ ಎಎಪಿ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, 5 ವರ್ಷಗಳಲ್ಲಿ 100 ಕೋಟಿ ಉಳಿತಾಯವಾಗಲಿದೆ. ಜೊತೆಗೆ `ಒಂದು ಶಾಸಕ-ಒಂದು ಪಿಂಚಣಿ’ ಯೋಜನೆಯು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಭಗವಂತ್ ಮಾನ್ ಹೇಳಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಲು ಹಾಗೂ ಅವರ ಕನಸುಗಳನ್ನು ನನಸಾಗಿಲು ಎಎಪಿ ಸರ್ಕಾರವು ಕೈಗೊಂಡ ಉಪಕ್ರಮವಾಗಿದೆ. ಪಂಜಾಬ್ ವಿಧಾನಸಭೆಯ ಸದಸ್ಯರ `ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳ ನಿಯಂತ್ರಣ ಮಸೂದೆ (ತಿದ್ದುಪಡಿ)-2022 ಅನ್ನು ಅಂಗೀಕರಿಸಿದೆ. ಇದು ರಾಜ್ಯ ವಿಧಾನಸಭೆಯ ಸದಸ್ಯರಿಗೆ ಒಂದೇ ಅವಧಿಗೆ ಪ್ರತಿ 60,000 ರೂಪಾಯಿಗಳ ಹೊಸ ದರದಲ್ಲಿ ಮಾತ್ರ ಪಿಂಚಣಿ ನೀಡುವ ಗುರಿಯನ್ನು ಹೊಂದಿದೆ. ಇದಕ್ಕೆ ಪಂಜಾಬ್ ರಾಜ್ಯಪಾಲರೂ ಒಪ್ಪಿಗೆ ಸೂಚಿಸಿದ್ದಾರೆ.

ಈ ಮೂಲಕ ರಾಜ್ಯ ಸರ್ಕಾರಕ್ಕೆ ವಾರ್ಷಿಕ 19.53 ಕೋಟಿ ರೂ. ಉಳಿತಾಯವಾಗಲಿದೆ. ಒಟ್ಟಾರೆ 5 ವರ್ಷಗಳಲ್ಲಿ ಸುಮಾರು 100 ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.

ಪಂಜಾಬ್ ಮಾಜಿ ಶಾಸಕರು 2 ಬಾರಿ, 5 ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಅವರು ಸಲ್ಲಿಸಿದ್ದ ಸೇವೆಗೆ ಪ್ರತಿ ಅವಧಿಗೂ ಪಿಂಚಣಿ ಪಡೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ಅವರ ಪಿಂಚಣಿಯನ್ನು ಒಂದು ಅವಧಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ ಎಂದು ಭಗವಂತ್ ಮಾನ್ ಸಿಎಂ ಆದ ಕೆಲ ದಿನಗಳಲ್ಲೇ ಹೇಳಿದ್ದರು.

ನಮ್ಮ ರಾಜಕೀಯ ನಾಯಕ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೈಮುಗಿದು ಮತ ಪಡೆದು ಗೆಲ್ಲುತ್ತಾರೆ. ಆದರೆ 3-4 ಬಾರಿ ಗೆದ್ದ ನಂತರವೂ ಹಲವು ಹಲವು ಶಾಸಕರು ಮುಂದಿನ ಚುನಾವಣೆಯಲ್ಲಿ ಸೋತರು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ಮಾನ್ ತಿಳಿಸಿದ್ದರು.

ಚುನಾವಣೆಯಲ್ಲಿ ಸೋತರೂ ಕೆಲವರು 3.50 ರಿಂದ 5 ಲಕ್ಷ ರೂ. ವರೆಗೂ ಪಿಂಚಣಿ ಪಡೆಯುತ್ತಿದ್ದಾರೆ. ಲಾಲ್‌ಸಿಂಗ್, ಸರ್ವಾನ್‌ಸಿಂಗ್ ಫಿಲೌ ಹಾಗೂ ರಾಜಿಂದರ್ ಕೌರ್ ಭಟ್ಟಾಲ್ ತಿಂಗಳಿಗೆ 3.55 ಲಕ್ಷ ರೂ.ಪಿಂಚಣಿ ಪಡೆಯುತ್ತಿದ್ದಾರೆ. ರವಿಂದರ್ ಸಿಂಗ್, ಬೈಲ್ವಿಂದರ್ ಸಿಂಗ್ 2.75 ಲಕ್ಷ ಹಾಗೂ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ 5 ಲಕ್ಷ ರೂ. ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆರ್ಥಿಕ ಹೊರೆಯಾಗುತ್ತಿದೆ ಎಂದು ಆತಂಕಪಟ್ಟಿದ್ದರು.

Leave a Reply

error: Content is protected !!
LATEST
NWKRTC: ಬಸ್‌-ಕಾರು ನಡುವೆ ಅಪಘಾತ - ಮಹಿಳೆ ಮೃತ, ಇಂಜಿನಿಯರ್‌ಗೆ ಗಾಯ ದೆಹಲಿ ರೈತರ ಹೋರಾಟ ಬೆಂಬಲಿಸಿ ಬನ್ನೂರಿನಲ್ಲಿ ರೈತರು- ರೈತ ಮುಖಂಡರ ಪ್ರತಿಭಟನೆ KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು KSRTC: ಸಾರಿಗೆ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡೇಮಾಡುತ್ತೇವೆ- ಕ್ರಿಯಾ ಸಮಿತ... ಪಂಚಭೂತಗಳಲ್ಲಿ ಲೀನವಾದ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಕಟಾವುಮಾಡಿ ಕಣದಲ್ಲೇ ಬಿಟ್ಟಿದ್ದ 60 ಕ್ವಿಂಟಲ್‌ ಭತ್ತ ತಿಂದು ನಾಶ ಮಾಡಿದ ಆನೆಗಳು: ತಲೆಮೇಲೆ ಕೈಹೊತ್ತು ಕುಳಿತ ರೈತರು ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿದ ಪಾಪಿಗಳು ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: 5 ಸಾವಿರ ಪ್ರವಾಸಿಗರ ರಕ್ಷಿಸಿದ ಪೊಲೀಸರು ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್‌ಗೆ ಗ್ರಾನೈಟ್ ತುಂಬಿದ ಲಾರಿ ಡಿಕ್ಕಿ: ಹೊತ್ತಿ ಉರಿದ ಕ್ಯಾಂಟರ್‌- ಚಾಲಕರಿ... KSRTC: ನಾಲ್ಕೂ ನಿಗಮಗಳ ಸಾರಿಗೆ ನೌಕರರು ಜ.1ರಿಂದ 6 ತಿಂಗಳುಗಳ ಕಾಲ ಮುಷ್ಕರ ಮಾಡುವಂತಿಲ್ಲ- ಸರ್ಕಾರ ಆದೇಶ