CrimeNEWSದೇಶ-ವಿದೇಶನಮ್ಮರಾಜ್ಯ

ವಿದೇಶದ ವಿಶ್ವವಿದ್ಯಾಲಯದ ಪಿಎಚ್‌ಡಿ ಸರ್ಟಿಫಿಕೇಟ್ ಹಿಂದೆ ಬಿದ್ದು 75 ಲಕ್ಷ ರೂ. ಕಳಕೊಂಡ ಚಿಕ್ಕಮಗಳೂರು ಮಹಿಳೆ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ವಿದೇಶದ ವಿಶ್ವವಿದ್ಯಾಲಯದ ಪಿಎಚ್‌ಡಿ ಸರ್ಟಿಫಿಕೇಟ್ ಹಿಂದೆ ಬಿದ್ದ ಮಹಿಳೆಯೊಬ್ಬರು ನಾಲ್ಕು ವರ್ಷದಲ್ಲಿ 75 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದಾರೆ.

2018 ರಿಂದಲೂ ಆಗಾಗ್ಗೆ ನೆಸ್ಟರ್ ಯುನಿವರ್ಸಿಟಿ ಎಂದು ಹೇಳಿ ಕರೆ ಮಾಡಿದಾಗಲೆಲ್ಲಾ ಸುಮಾರು 4 ವರ್ಷದಿಂದಲೂ ಮಹಿಳೆ ಹಣ ಕಳುಹಿಸಿದ್ದಾರೆ. ಇದೀಗ ಆ ಹಣ ಒಟ್ಟು 75 ಲಕ್ಷ ರೂಪಾಯಿ ಆಗಿದೆ. ಈ ನಾಲ್ಕು ವರ್ಷಗಳಿಂದಲೂ ಹಣ ಕಳೆದುಕೊಳ್ಳುತ್ತಾ ಬಂದಿರುವ ಮಹಳೆ ನಗರದ ಸಾಫ್ಟ್‌ವೇರ್ ಇಂಜಿನಿಯರ್. ಇವರು ಆನ್‍ಲೈನ್‍ನಲ್ಲಿ ನೆಸ್ಟರ್ ಎಂಬ ಯುನಿವರ್ಸಿಟಿಯನ್ನು ಹುಡುಕಿ, ಫಾರ್ಮೆಟ್ ಪೇಪರ್ಸ್ ಎಲ್ಲ ಫಿಲ್ ಮಾಡಿ ಕಳಿಸಿದ್ದರು.

ಆದರೆ, ನಾಲ್ಕು ವರ್ಷಗಳ ಬಳಿಕ 75 ಲಕ್ಷ ರೂಪಾಯಿ ಹಾಕಿದ್ದರೂ ಕೋರ್ಸ್ ಮುಗಿದಿಲ್ಲ ಎಂದಾಗ ಯೂನಿವರ್ಸಿಟಿ ಅವರು ಒಂದು ಪಿ.ಎಚ್.ಡಿ. ಸರ್ಟಿಫಿಕೇಟ್ ಕಳಿಸಿದ್ದಾರೆ. ಆದರೆ ಈ ಸರ್ಟಿಫಿಕೇಟ್ ಫೇಕ್ ಎಂದು ಮಹಿಳೆಗೆ ಮತ್ತೊಬ್ಬರು ತಿಳಿಸಿದ್ದಾರೆ. ಆಗ ಆಕೆಗೆ ತಾನು ಮೋಸ ಹೋಗಿಗಿರುವುದು ತಿಳಿದಿದೆ. ಅಲ್ಲದೆ ಅಸಲಿಗೆ ಆ ಯುನಿವರ್ಸಿಟಿಯೇ ಇಲ್ಲ ಎಂಬ ಸತ್ಯ ತಿಳಿದು ಹಣಕಳೆದುಕೊಂಡ ಬಗ್ಗೆ ಅರಿವಾಗಿದೆ.

ಇನ್ನು ಆ ಸಾಫ್ಟ್‌ವೇರ್ ಇಂಜಿನಿಯರ್ ಮಹಿಳೆ ಮಾಡಿರುವ ಎಲ್ಲ ವ್ಯವಹಾರ ಕೂಡ ಬ್ಯಾಂಕ್ ಮೂಲಕ ಆಗಿದ್ದು, ಹಣವನ್ನು ಯಾರ ಖಾತೆಗೆ ಹಾಕಿದ್ದಾಳೋ ಎಂಬುವುದು ತಿಳಿದು ಬಂದಿಲ್ಲ. ಇದೀಗ ಪಿ.ಎಚ್.ಡಿ. ಸರ್ಟಿಫಿಕೇಟ್‍ಗಾಗಿ ನಾಲ್ಕು ವರ್ಷದಲ್ಲಿ 75 ಲಕ್ಷ ಹಣ ಕಳೆದುಕೊಂಡು ಫೇಕ್ ಸರ್ಟಿಫಿಕೇಟ್ ಸಿಕ್ಕ ಮೇಲೆ ತಾನು ಮೋಸ ಹೋಗಿದ್ದೇನೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡ, ಸಿಐಡಿ, ಬೆಂಗಳೂರು ಸೈಬರ್ ಜೊತೆ ಜಿಲ್ಲಾ ಪೊಲೀಸರು ಸಂಪರ್ಕದಲ್ಲಿ ಸಾಧಿಸುವುದರೊಂದಿಗೆ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಫಾರಿನ್ ಯೂನಿವರ್ಸಿಟಿಯೇ ಇಲ್ಲ. ಈ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ. ಮಾಡಿದರೆ ನಿಮಗೆ ಫಾರಿನ್ ಹೋಗಲು ಅನುಕೂಲವಾಗುತ್ತದೆ ಎಂದು ನಂಬಿಸಿ ಈ ರೀತಿ ಯಾಮಾರಿಸಿದ್ದಾರೆ ಎಂದು ಮಹಿಳೆಗೆ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ